ಕುರುಹಿನಶೆಟ್ಟಿ ಸಮಾಜದ ಪ್ರತಿಭಟನಾ ರ‍್ಯಾಲಿ

ಸವಣೂರ: ಕುರುಹಿನಶೆಟ್ಟಿ ಸಮಾಜದವರಿಗೆ ಹಿಂದುಳಿದ ವರ್ಗ 2ಎ ಜಾತಿ ಪ್ರಮಾಣ ಪತ್ರ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಹಾನಗಲ್ಲ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಸರ್ಕಾರದ ಸ್ಪಷ್ಟ ನಿರ್ದೇಶನ ಇದ್ದರೂ ಹಾನಗಲ್ಲ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸಮಸ್ತ ಹಿಂದು ಕುರುಹಿನಶೆಟ್ಟಿ (ನೇಕಾರ) ಸಮಾಜ ದವರಿಗೆ ಹಿಂದುಳಿದ ವರ್ಗ 2ಎ ಜಾತಿ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಮೂಲಕ ತಿಳಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯದ ಬೇರೆಡೆಗಳಲ್ಲಿ ಕುರುಹಿನಶೆಟ್ಟಿ ಸಮಾಜದವರಿಗೆ 2ಎ ಪ್ರಮಾಣಪತ್ರ ನೀಡಲಾಗುತ್ತಿದೆ. ಹಾನಗಲ್ ತಾಲೂಕಿನಲ್ಲಿ ಮಾತ್ರ ನೀಡುತ್ತಿಲ್ಲ. ಆದ್ದರಿಂದ, ತಾಲೂಕಿನಲ್ಲಿರುವ ಸುಮಾರು 5 ಸಾವಿರ ಕುರುಹಿನಶೆಟ್ಟಿ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೆ 2ಎ ಜಾತಿ ಪ್ರಮಾಣ ಪತ್ರ ನೀಡಬೇಕು. ನೇಕಾರ ಸಮುದಾಯಕ್ಕೆ ದೊರೆಯುವ ಸರ್ಕಾರದ ಸೌಲಭ್ಯಗಳ ಬಗೆಗೆ ಮಾಹಿತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಗಂಗಪ್ಪ ಎಂ., ಮನವಿ ಸ್ವೀಕರಿಸಿ, ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ. ಅರ್ಜಿದಾರರ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಜಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಬೇಟಗೇರಿ ಗದಗ ನೀಲಕಂಠಸ್ವಾಮಿ ಮಠದ (ನಾಲ್ಮಡಿ) ಪೀಠಾಧ್ಯಕ್ಷರಾದ ನೀಲಕಂಠ ಪಟ್ಟಾಧ್ಯಾರ್ಯ ಸ್ವಾಮೀಜಿ, ಸಮಾಜ ಮುಖಂಡರಾದ ನ್ಯಾ. ಎಸ್.ಜಿ. ವಿಶ್ವನಾಥ, ಪ್ರಭುದೇವ ಹಿಪ್ಪರಗಿ, ಎಂ.ಪಿ. ಶಿವಕುಮಾರ, ಎಂ.ಡಿ. ರೋಣದ, ವಿರೂಪಾಕ್ಷಪ್ಪ ಸುರಳೇಶ್ವರ, ಅನಿತಾ ಗುತ್ತಲ, ಪ್ರಭಾವತಿ ಎಂ., ಚನ್ನಬಸಪ್ಪ ಬಂಕೊಳ್ಳಿ, ವೀರೇಶ ಆಲದಕಟ್ಟಿ, ಗಣೇಶ ಮೂಡೂರ, ಅಜ್ಜಪ್ಪ ಮೂಡೂರ, ಜಗದೀಶ ದೊಡ್ಡಮನಿ, ರಾಜು ಬಂಕೊಳ್ಳಿ, ಲೋಹಿತ ಸುರಳೇಶ್ವರ, ಚಂದ್ರು ಸುರಳೇಶ್ವರ, ಷಡಕ್ಷರಪ್ಪ ಬಂಕೊಳ್ಳಿ, ಆನಂದ ಮತ್ತಿಗಟ್ಟಿ, ಪ್ರಶಾಂತ ನಾವಳ್ಳಿ, ಡಾ. ಪ್ರಕಾಶ ಮುರಡಿ, ಇತರರು ಇದ್ದರು.

 

Leave a Reply

Your email address will not be published. Required fields are marked *