More

    ಪ್ರತಿಭಟನೆಗೆ ಸೀಮಿತವಾದ ಮುಷ್ಕರ, ಜಿಲ್ಲಾದ್ಯಂತ ಎಂದಿನಂತೆ ಜನ ಜೀವನ ಸುಗಮ

    ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಬುಧವಾರ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರ ಜಿಲ್ಲಾದ್ಯಂತ ಪ್ರತಿಭಟನೆ, ಮನವಿ ಸಲ್ಲಿಕೆಗೆ ಮಾತ್ರ ಸೀಮಿತವಾಯಿತು.

    ರಾಯಚೂರು ನಗರ ಸೇರಿ ವಿವಿಧ ತಾಲೂಕುಗಳಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಕೆಲ ಬ್ಯಾಂಕ್, ಜೀವ ವಿಮಾ, ಖಾಸಗಿ ಕಂಪನಿಗಳ ಉದ್ಯೋಗಿಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದರು. ನಗರದ ಸರಾಫ್ ಬಜಾರದಲ್ಲಿನ ಚಿನ್ನದ ಅಂಗಡಿಗಳು ಮಾತ್ರ ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದವು. ಆದರೂ, ಬಸ್, ಆಟೋ, ಅಂಗಡಿಗಳು ತೆರೆದಿದ್ದವು, ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಹಾರದ ಜತೆ ಸಾರ್ವಜನಿಕರ ಬದುಕು ಎಂದಿನಂತೆ ಸುಗಮವಾಗಿ ಸಾಗಿತ್ತು.

    ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಜಂಟಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಜಮಾಯಿಸಿದ ಕಾರ್ಮಿಕರು ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ರ‌್ಯಾಲಿಯಲ್ಲಿ ತೆರಳಿ ಡಿಸಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಯಾವುದೇ ಅಹಿತಕರ ನಡೆಯದಂತೆ ಪೊಲೀಸರು ನಿಗಾ ವಹಿಸಿ, ಶಾಂತಿಯುತ ಹೋರಾಟ ಮುಗಿಸಲು ಪಹರೆ ಹಾಕಿದ್ದರು.

    ಮುಖಂಡರಾದ ಡಿ.ಎಸ್.ಶರಣಬಸವ, ಎನ್.ಎಸ್.ವೀರೇಶ, ವರಲಕ್ಷ್ಮಿ, ಪದ್ಮಾ, ಸಲಾವುದ್ದೀನ್, ಎಂ.ರವಿ, ಶರಣೆಗೌಡ, ಬಸವರಾಜ ಗಾರಲದಿನ್ನಿ, ಪ್ರವೀಣರಡ್ಡಿ ಗುಂಜಳ್ಳಿ, ಆರ್.ಮಾನಸಯ್ಯ, ಜಿ.ಅಮರೇಶ್, ಕರಿಯಪ್ಪ ಅಚ್ಚೊಳ್ಳಿ, ಕೆ.ಜಿ.ವೀರೇಶ, ತಿಮ್ಮಪ್ಪ, ಮಹಾದೇವಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts