ಕೊಳಕು ನೀರಿನಲ್ಲಿ ಹೊರಳಾಡಿ ಪ್ರತಿಭಟನೆ: ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆಗೆ ಆಗ್ರಹ

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ವಿಸ್ತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಮೋಹನ ಬಿನ್ನಾಳ ರಸ್ತೆಯಲ್ಲಿ ನಿಂತಿದ್ದ ಕೊಳಕು ನೀರಿನಲ್ಲಿ ಹೊರಳಾಡುವ ಮೂಲಕ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.

ಎಸ್​ಬಿಐ ಬ್ಯಾಂಕ್ ಬಳಿಯ ಮುಖ್ಯ ರಸ್ತೆಯಲ್ಲಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಆಗಮಿಸಿದ ಅವರು, ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸರ್ಕಾರ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

15 ವರ್ಷಗಳಿಂದ ಮುಖ್ಯರಸ್ತೆ ವಿಸ್ತರಣೆಗೆ ಅಗಲೀಕರಣ ಸಮಿತಿ ಹಾಗೂ ಸಾರ್ವಜನಿಕ ಸಂಘ, ಸಂಸ್ಥೆಗಳು ಹೋರಾಟ ನಡೆಸುತ್ತ ಬಂದಿವೆ. ಆದರೆ, ಹಿಂದಿನ ಎಲ್ಲ ಜನಪ್ರತಿನಿಧಿಗಳು, ಲೋಕೋಪಯೋಗಿ ಇಂಜಿನಿಯರ್​ಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆ ಬಂದು ಹೋಗಲು ರೈತರು ಸೇರಿದಂತೆ ವರ್ತಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ವಾಹನ ಚಾಲಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳ ಸಮಸ್ಯೆಯನ್ನು ಕೇಳುವವರಿಲ್ಲದಂತಾಗಿದೆ. ಈ ಹಿಂದೆ ಪ್ರತಿಭಟನೆ ನಡೆಸುವಾಗ ಹಿಂದಿನ ಎರಡು ಜಿಲ್ಲಾಧಿಕಾರಿಗಳು ಆಗಮಿಸಿ ಭರವಸೆ ನೀಡಿದ್ದಾರೆ. ಆದರೆ, ಸಾರ್ವಜನಿಕರಿಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಈಗ ಕೊಟ್ಟ ಅವಧಿ ಮುಗಿದಿದ್ದು, ನಿರಂತರ ಧರಣಿ, ಹೋರಾಟ, ಭಿನ್ನಭಿನ್ನ ಪ್ರತಿಭಟನೆಗಳನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.

ಇಂಜಿನಿಯರ್ ಅಮಾನತಿಗೆ ಆಗ್ರಹ:

ರೈತ ಮುಖಂಡ ಶಿವು ಕಲ್ಲಾಪುರ ಮಾತನಾಡಿ, ಎರಡು ವರ್ಷಗಳ ಹಿಂದೆ ಬ್ಯಾಡಗಿಗೆ ವರ್ಗಾವಣೆಯಾಗಿರುವ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ರಸ್ತೆ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆಗೆ ವಿಳಂಬ ಹಾಗೂ ರಸ್ತೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸುವ ಕೆಲ ವ್ಯಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಇಲಾಖೆಗೆ ದ್ರೋಹ ಮಾಡುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳು ಬ್ಯಾಡಗಿಗೆ ಬೇಡವೇ ಬೇಡ. ಅವರನ್ನು ವರ್ಗಾವಣೆ ಮಾಡದಿದ್ದಲ್ಲಿ ರಸ್ತೆ ಕಾಮಗಾರಿ ನಡೆಯುವುದಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ಕರೆತಂದು ರಸ್ತೆ ವಿಸ್ತರಣೆಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈಶ್ವರ ಮಠದ, ಪಾಂಡುರಂಗ ಸುತಾರ, ಪರೀಧಾಬಾನು ನದಿಮುಲ್ಲಾ, ಕಿರಣ ಎಂ.ಎಲ್., ರೇಖಾ ಕನವಳ್ಳಿ ಇದ್ದರು.

ಗಮನ ಸೆಳೆದ ಪ್ರತಿಭಟನೆ

ರಸ್ತೆ ವಿಸ್ತರಣೆಗೆ ಆಗ್ರಹಿಸಿ ಹಲಗೆ ಬಾರಿಸುವುದು, ವಾರಗಟ್ಟಲೇ ಧರಣಿ, ಉಪವಾಸ ಸತ್ಯಾಗ್ರಹ, ಪ್ರಮುಖ ರಸ್ತೆ ಬಂದ್ ಮಾಡಿ, ಕೆಸರಿನಲ್ಲಿ ಸಸಿ ನೆಟ್ಟು, ಕತ್ತೆಗಳ ಮೆರವಣಿಗೆ, ಸೆಗಣಿ ಮೈಮೇಲೆ ಸುರುವಿಕೊಂಡು, ಪೆಟ್ರೋಲ್ ತಂದು, ಗಾಂಧಿ ತತ್ವದಲ್ಲಿ ಮೌನವಾಗಿ, ಎಮ್ಮೆಗಳ ಮೈತೊಳೆದು, ಬ್ಯಾಡಗಿ ಬಂದ್, ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿ, ಶಾಸಕರ ಕಾರಿನ ಎದುರು ಅಡ್ಡಮಲಗಿ, ಅಂಗವಿಕಲರ, ಕಪ್ಪುಬಟ್ಟೆ ಕಟ್ಟಿಕೊಂಡು, ಸರ್ಕಾರಿ ಕಾರ್ಯಕ್ರಮಗಳ ಬಳಿ ಪ್ರತಿಭಟನೆ ಸೇರಿದಂತೆ ಭಿನ್ನಭಿನ್ನವಾಗಿ ಪ್ರತಿಭಟನೆ ನಡೆದಿವೆ. ಇಂದು ರಸ್ತೆ ಕೆಸರಿನಲ್ಲಿ ಹೊರಳಾಗಿ ಪ್ರತಿಭಟನೆ ನಡೆಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ಎರಡು ದಶಕಗಳ ಕಾಲ ರಸ್ತೆ ವಿಸ್ತರಣೆಗೆ ಹೋರಾಟ ನಡೆಸಿದರೂ ಸಾರ್ವಜನಿಕರ ಗೋಳು ಕೇಳುವವರಿಲ್ಲದಂತಾಗಿದೆ. ಆ. 15ರಂದು ನಾವು ಮುಖ್ಯರಸ್ತೆಯ ಎರಡೂ ಕಡೆ ಜೆಸಿಬಿಯಿಂದ ಅಗೆದು ರಸ್ತೆಯನ್ನು ಶಾಶ್ವತವಾಗಿ ಬಂದ್ ಮಾಡಲಿದ್ದೇವೆ. ನಮ್ಮ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದರೂ ಪರವಾಗಿಲ್ಲ. ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತೇವೆ.

| ಸುರೇಶ ಛಲವಾದಿ, ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…