ಸೆಸ್ಕ್ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ

blank
blank

ಪಾಂಡವಪುರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಸೆಸ್ಕ್ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದ ಬೆಳೆದ ಬೆಳೆ ಒಣಗುವ ಹಂತ ತಲುಪಿದೆ ಎಂದು ಆರೋಪಿಸಿ ತಾಲೂಕಿನ ಬೇವಿನಕುಪ್ಪೆ ಸುತ್ತಮುತ್ತಲ ಗ್ರಾಮಸ್ಥರು ಸೆಸ್ಕ್ ಕಚೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಸೆಸ್ಕ್ ಕಚೇರಿ ಮುಂಭಾಗ ಜಮಾವಣೆಗೊಂಡ ರೈತರು, ಕರ್ತವ್ಯ ನಿರತ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳುಹಿಸಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವೆರಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಸ್ಥಳಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳು ಬಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆಗಳ ತ್ರಿಫೆಸ್ ವಿದ್ಯುತ್ ನೀಡಬೇಕು
ಎಂಬ ಸರ್ಕಾರದ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಸೆಸ್ಕ್ ಲೈನ್‌ಮನ್‌ಗಳು ವಿದ್ಯುತ್ ಅಡಚಣೆಯಾದರೆ ತಕ್ಷಣ ದುರಸ್ತಿ ಮಾಡುವುದಿಲ್ಲ. ರೈತರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸೆಸ್ಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ತನೆಯಿಂದ ರೈತರು ಬೆಳೆ ನಷ್ಟ ಅನುಭವಿಸಬೇಕಾಗಿದೆ ಎಂದು ಆರೋಪಿಸಿದರು.

ಕಳೆದ ಒಂದೂವರೆ ತಿಂಗಳಿನಿಂದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಈ ಭಾಗಕ್ಕೆ ಮಹಿಳಾ ಜೆಇಯನ್ನು ನೇಮಕ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲಿ ವಿದ್ಯುತ್ ಅಡಚಣೆಯಾದರೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ರೈತರು ಬೆಳೆ ಒಣಗುವ ಭಯದಿಂದ ರಾತ್ರಿ ವೇಳೆಯಲ್ಲೂ ಕರೆ ಮಾಡಿ ದೂರಬೇಕಾಗಿದೆ. ನಮಗೆ ಮಹಿಳಾ ಜೆಇ ಅವರನ್ನು ಬದಲಾಯಿಸಿಕೊಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಸಾಲಿನ ಬೆಳೆ
ಕಳೆದುಕೊಂಡಿದ್ದೇವೆ. ಈ ಬಾರಿಯೂ ಬೆಳೆ ಬೆಳೆಯಲು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮಸ್ಯೆ ಎದುರಾಗಿದೆ. ಬಡ್ಡಿ ಸಾಲ ತಂದು ವ್ಯವಸಾಯ ಮಾಡುತ್ತಿದ್ದೇವೆ. ಏನಾದರೂ ಹೆಚ್ಚೂ ಕಡಿಮೆಯದರೂ ಯಾರು ಹೊಣೆಗಾರರು ಎಂದು ರೈತರು ಸೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೆಸ್ಕ್ ಎಇಇ ಅವರ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಈ ವೇಳೆ ಬೇವಿನಕುಪ್ಪೆ ಅನಿಲ್‌ಕುಮಾರ್, ಜಯರಾಮು, ಜವರಪ್ಪ, ಶೇಖರ್, ದಿಲೀಪ್, ಆನಂದ, ಸುರೇಶ್, ಮನು, ತಮ್ಮಣ್ಣ ಇತರರು ಇದ್ದರು.

Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…