ಗ್ರಾಪಂ ನಿರ್ಲಕ್ಷೃಕ್ಕೆ ಕೂಲಿ ಕಾರ್ಮಿಕರ ಆಕ್ರೋಶ

ಗಂಗಾವತಿ: ಕೆಲಸ ನೀಡದ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ತಾಲೂಕಿನ ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ಕೂಲಿಕಾರರು ನಗರದ ತಾಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ಅಯೋಧ್ಯಾ, ಚಿಕ್ಕಜಂತಕಲ್, ಕೆಡಿ ನಗರ, ವಿನೋಭಾ ನಗರದ ಕೂಲಿಕಾರರನ್ನು ತಾಲೂಕಿನ ಚಿಕ್ಕಮಾದಿನಾಳ ಮತ್ತು ಮುಸಲಾಪುರ ಗ್ರಾಪಂನಲ್ಲಿ ಬರುವ ಕೆರೆಗಳ ಹೂಳೆತ್ತುವ ಕಾಮಗಾರಿ ನಿಯೋಜಿಸಲಾಗಿತ್ತು. ಎರಡು ದಿನ ಕೆಲಸ ಮಾಡಿದ ಕೂಲಿಕಾರರಿಗೆ ಏಕಾಏಕಿ ಕೈಬಿಡಲಾಗಿದೆ. ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.


ನೇತೃತ್ವ ವಹಿಸಿದ್ದ ಸಿಪಿಐ(ಎಂ) ಮುಖಂಡ ವೆಂಕಟಸಾನಿ ಮಾತನಾಡಿ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೂ ಸಮರ್ಪಕ ಉದ್ಯೋಗ ದೊರೆಯುತ್ತಿಲ್ಲ. ಅನುದಾನವಿದ್ದರೂ ಕೆಲಸ ನೀಡುವಲ್ಲಿ ಗ್ರಾಪಂ ವಿಲವಾಗಿದ್ದು, ಕಾಮಿಕರನ್ನು ಕಡೆಗಣಿಸಲಾಗುತ್ತಿದೆ. ನೋಡಲ್ ಅಧಿಕಾರಿ ಕೆಲಸ ನೀಡಲು ಒಪ್ಪಿದರೂ ಗ್ರಾಪಂ ಆಡಳಿತ ಮಂಡಳಿ ನೀಡುತ್ತಿಲ್ಲ. ಕೆಲಸ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಪದಾಧಿಕಾರಿಗಳಾದ ಬಸವರಾಜ, ಅಡಿವೆಪ್ಪ, ರಾಜಶೇಖರ್, ಪಂಪಾಪತಿ, ನಾಸೀರ್, ಶೇಖಮ್ಮ, ಗಂಗಮ್ಮ, ಕನಕರಾಜು, ಶರಣಪ್ಪ ಇತರರು ಇದ್ದರು.
29 ಜಿವಿಟಿ 02
ಕೆಲಸ ನೀಡದ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ತಾಲೂಕಿನ ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಗಂಗಾವತಿ ತಾಪಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.