ಎನ್​ಆರ್​ಇಜಿ ಉದ್ಯೋಗಕ್ಕಾಗಿ ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನ ಹುಲ್ಲತ್ತಿ ಗ್ರಾಮ ಪಂಚಾಯಿತಿಯಲ್ಲಿ ಎನ್​ಆರ್​ಇಜಿ ಯೋಜನೆಯಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕೂಲಿ ಕಾರ್ವಿುಕರು ಶುಕ್ರವಾರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾ.ಪಂ. ಸದಸ್ಯ ರವಿ ಹಾದ್ರಿಹಳ್ಳಿ, ಕೂಲಿ ಕಾರ್ವಿುಕ ನಾಗಪ್ಪ ಬೆನ್ನೇರ ಮಾತನಾಡಿ, ಬರಗಾಲದಿಂದಾಗಿ 1 ತಿಂಗಳಿಂದ ಕೂಲಿ ಕಾರ್ವಿುಕರು ಉದ್ಯೋಗ ಇಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವರು ಉದ್ಯೋಗಕ್ಕಾಗಿ ದೂರದ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಎನ್​ಆರ್​ಇಜಿ ಯೋಜನೆಯಡಿ ಉದ್ಯೋಗ ನೀಡುವಂತೆ ಹಾಗೂ ಕೆಲವು ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡುವಂತೆ ಹಲವು ದಿನಗಳಿಂದ ಹುಲ್ಲತ್ತಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿನಯಕುಮಾರಗೆ ಅರ್ಜಿ ಸಲ್ಲಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೆ ಇವರನ್ನು ವರ್ಗಾಯಿಸಿ, ಕೂಲಿ ಕಾರ್ವಿುಕರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಯು.ಬಿ. ಬಣಕಾರ ಮತ್ತು ಇಒ ಸಂತೋಷ ತಳಕಲ್, ಗ್ರಾಮಸ್ಥರ ದೂರನ್ನು ಆಲಿಸಿದರು.

ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹಾಗೂ ಕೆಲವೇ ದಿನಗಳಲ್ಲಿ ಗ್ರಾಮದ ಕೂಲಿ ಕಾರ್ವಿುಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಮಸ್ಥರಾದ ಬಸವರಾಜ ಚಿಕ್ಕಮತ್ತೂರ, ಅಶೋಕ ಉಪ್ಪಾರ, ಭೀಮಪ್ಪ ದೀವಗಿಹಳ್ಳಿ, ಕುಮಾರ ದೀವಗಿಹಳ್ಳಿ, ಮಂಜು ಉಪ್ಪಾರ, ಹನುಮಂತಪ್ಪ ಮಾಸೂರ, ಮಲ್ಲಪ್ಪ ಮಡಿವಾಳ, ಇತರರು ಇದ್ದರು.

Leave a Reply

Your email address will not be published. Required fields are marked *