ಬೆಳಗಾವಿ: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕಿ ಲತಾಕುಮಾರಿ ಅವರ ವರ್ಗಾವಣೆ ಕೈ ಬಿಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಾಲೂಕು ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಲಾಯಿತು.
ಲತಾಕುಮಾರಿ ಅವರನ್ನು ಅದೇ ಹುದ್ದೆಯಲ್ಲೇ ಮುಂದುವರಿಸಬೇಕು. 15 ವರ್ಷಗಳಿಂದ ವಿಕಲಚೇತನರಿಗಾಗಿಯೇ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಕಾರ್ಯಕರ್ತರನ್ನು ವಿಶೇಷ ನಿಯಮಾವಳಿ ರಚಿಸಿ ಕಾಯಂಗೊಳಿಸಬೇಕು ಮತ್ತು ನಿವೃತ್ತಿ ಇಡಿಗಂಟು ಜಾರಿಗೊಳಿಸಬೇಕು. ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕರ್ತವ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ವೇತನ ಸಹಿತ ಪ್ರಸೂತಿ ರಜೆ ನೀಡಬೇಕು. ಮಾರ್ಗಸೂಚಿ ತಿದ್ದುಪಡಿ ಮಾಡಬೇಕು. ಹೊಸ ತಾಲೂಕುಗಳು, ಗ್ರಾಪಂಗಳು, ನಗರ ಪಟ್ಟಣ, ಪುರಸಭೆಗಳಿಗೆ ಎಂ.ಆರ್.ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಅವರನ್ನು ನೇಮಿಸಬೇಕು. ಅಂಗವಿಕಲರಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕು ಮತ್ತು ರಾಜ್ಯಾದ್ಯಂತ ಉಚಿತ ಬಸ್‌ಪಾಸ್ ನೀಡಬೇಕು. ಎಂ.ಆರ್.ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಅವರ ಮರಣ ಪರಿಹಾರ ಧನವನ್ನು ಕ್ರಮವಾಗಿ 30 ಲಕ್ಷ ರೂ., 25 ಲಕ್ಷ ರೂ. ನೀಡಬೇಕು. ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ಸಂಯೋಜಕರನ್ನು ನೇಮಿಸಬೇಕು ಹಾಗೂ ಅರ್ಹ ಅಂಗವಿಕಲರನ್ನು ಈ ಹುದ್ದೆಗಳಿಗೆ ನೇಮಿಸಬೇಕು. ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಎ.ಜಿ. ದೇವರಮನಿ, ಜಿ.ಎಸ್. ಡೊಳ್ಳಿನ, ಎಚ್.ಎ. ಮುಲ್ಲಾ, ಎಂ.ಬಿ. ಹುಣಸಿಕಟ್ಟಿ, ಬಿ.ವೈ. ಅಬ್ಬಾಯಿ, ಬಿ.ಬಿ. ಗಿರಡ್ಡಿ, ಎಸ್.ಎಸ್. ಹಾಸಟ್ಟಿ, ಆರ್.ಎಂ. ಬಿರಾದಾರಗೌಡ್ರ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
You Might Also Like
ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿಕ್ಸ್ | Health Tips
ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…
ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips
ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…
ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker
Pressure Cooker : ಪ್ರೆಶರ್ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…