ಮೂಲಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

ಉಪ್ಪಿನಬೆಟಗೇರಿ: ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಲೋಕೂರ ಗ್ರಾಪಂ ವ್ಯಾಪ್ತಿಯ 3ನೇ ವಾರ್ಡ್​ನ ಹರಿಜನಕೇರಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಐದು ವರ್ಷಗಳಿಂದ ವಾರ್ಡ್​ಗೆ ಸೌಲಭ್ಯ ಕಲ್ಪಿಸಿಲ್ಲ. ಕುಡಿಯá-ವ ನೀರಿಗಾಗಿ ಬೇರೆ ಓಣಿಗೆ ತೆರಳಬೇಕು. ಬಳಕೆ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗಬೇಕಾಗಿದೆ. ಓಣಿಯಲ್ಲಿ ಗಟಾರ ವ್ಯವಸ್ಥೆ ಮಾಡಿಲ್ಲ. ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಡಿತ ಮಾಡುತ್ತಿಲ್ಲ. ಆದರೆ, ನಮ್ಮ ವಾರ್ಡ್​ನಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಿ ವಿದ್ಯಾರ್ಥಿಗಳ ಓದಿಗೆ ತೊಂದರೆ ಕೊಡá-ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಪ್ರತಿದಿನ ಗ್ರಾಪಂ ಕಚೇರಿಗೆ 12 ಗಂಟೆಗೆ ಬಂದು 2 ಗಂಟೆಗೆ ವಾಪಸ್ ಹೋಗುತ್ತಾರೆ. ಸಮಸ್ಯೆ ಬಗೆಹರಿಸá-ವವರು ಯಾರೂ ಇಲ್ಲ. ಹೀಗೆ ಮುಂದುವರಿದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿಯುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದರು.

ಪಿಡಿಒ ಎಂ.ಜಿ. ಅಂಗಡಿ ಮಾತನಾಡಿ, ಗ್ರಾಮದ ಹರಿಜನಕೇರಿ ಓಣಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿ ಇರುವುದರಿಂದ ಕೆಲಸ ವಿಳಂಬವಾಗಿದೆ ಎಂದಾಗ ಆಕ್ರೋಶಗೊಂಡ ಮಹಿಳೆಯರು, ಕುಡಿಯುವ ನೀರು ಒದಗಿಸಲು ನೆಪ ಹೇಳುವುದು ಬಿಟ್ಟು ಸರಿಯಾಗಿ ಕೆಲಸ ನಿರ್ವಹಿಸಿ ಎಂದು ತರಾಟೆಗೆ ತೆಗೆದುಕೊಂಡರು. ನಿವಾಸಿಗಳಾದ ಮಂಜುನಾಥ ಉಡಕೇರಿ, ಶಿವನಪ್ಪ ಮಾದರ, ಬಸವರಾಜ ಮಾದರ, ನಿಂಗವ್ವ ಮಾದರ, ರೇಣುಕಾ ಮಾದರ, ದ್ಯಾಮವ್ವ ಮಾದರ, ಮೈಲಾರ ಮಾದರ, ಫಕೀರಪ್ಪ ಮಾದರ, ಸಾವಿತ್ರಿ ಮಾದರ, ಚಂದ್ರು ಮಾದರ, ರುಕ್ಮಿಣಿ ಮಾದರ, ಸುರೇಶ ಮಾದರ, ಇತರರು ಪಾಲ್ಗೊಂಡಿದ್ದರು.

ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ನಿನ್ನೆಯಷ್ಟೇ (ಮಾ. 26) ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಒಂದೆರಡು ದಿನಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು.

| ಮಡಿವಾಳಪ್ಪ ಪೊಮೋಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ