ಮದ್ದೂರು: ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ಉಬ್ಬುಗಳು( ಹಂಪ್ಸ್ )ಗಳನ್ನು ತೆರವುಗೊಳಿಸಿರುವುದೇ ಅಪಘಾತಗಳಿಗೆ ಕಾರಣ ಎಂದು ಆರೋಪಿಸಿ ಕೋಡಿಹಳ್ಳಿ ಗ್ರಾಮದ ಗ್ರಾಮಸ್ಥರು ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಅಂಡರ್‌ಪಾಸ್ ಬಳಿಯಿಂದ ಬರುವ ವಾಹನಗಳು ಕಾಣದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತವೆ. ಈ ಬಗ್ಗೆ ಹಲವು ಬಾರಿ ಅಪಘಾತಗಳು ಸಂಭವಿಸಿದಾಗ ಪ್ರತಿಭಟನೆ ನಡೆಸಿದ್ದರೂ ಸಂಬಂಧಪಟ್ಟವರು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ರಸ್ತೆ ಉಬ್ಬುಗಳನ್ನು ಹಾಕಿದರೆ ನೇರವಾಗಿ ಸಂಚರಿಸುವ ವಾಹನಗಳ ವೇಗ ಕಡಿಮೆಯಾಗಿ ಅಪಘಾತಗಳು ಕಡಿಮೆಯಾಗುತ್ತವೆಯಾದ್ದರಿಂದ ಕೂಡಲೇ ಹಂಪ್ಸ್‌ಗಳನ್ನು ಹಾಕಬೇಕು ಒತ್ತಾಯಿಸಿದರು.
ಗ್ರಾಮಸ್ಥರಾದ ಪ್ರದೀಪ್, ಗಿರೀಶ್ ಕುಮಾರ್, ದೇವರಾಜು, ಶಿವಪ್ಪ, ವೆಂಕಟೇಶ್ ಇತರರು ಇದ್ದರು.