ಬಸವನಬಾಗೇವಾಡಿ: ರಾಜ್ಯದ ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಬಗೆಹರಿಸಲು ಕಾನೂನು ತಿದ್ದುಪಡಿ ಮಾಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಸಭೆ ನಡೆಸಿದ ಬಳಿಕ ಪಾದಯಾತ್ರೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಸಿರಸ್ತೇದಾರ ಎ.ಎಚ್. ಬಳೂರಗಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ತಾಲೂಕು ಅಧ್ಯಕ್ಷ ಉಮೇಶ ವಾಲಿಕಾರ ಮಾತನಾಡಿ, ರಾಜ್ಯದ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ತೊಂದರೆಯಾಗುತ್ತಿದೆ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಆಲಮಟ್ಟಿ ಲಾಲಬಹಾದ್ದುರ್ ಶಾಸೀ ಜಲಾಶಯ ಹಾಗೂ ನಾರಾಯಣಪುರ ಬಸವ ಸಾಗರ ಜಲಾಶಯಗಳ ನೀರು ಮರು ಹಂಚಿಕೆ ಮಾಡಿ ವಿಜಯಪುರ ಜಿಲ್ಲೆಯ ರೈತರಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
ತಾಲೂಕು ಗೌರವಾಧ್ಯಕ್ಷ ವಿಠ್ಠಲ ಬಿರಾದಾರ, ತಾಳಿಕೋಟೆ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಕಾರ‌್ಯಾಧ್ಯಕ್ಷ ಸೋಮನಗೌಡ ಪಾಟೀಲ, ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಶಿವಪ್ಪ ಇಂಗಳೆಶ್ವರ, ಈರಣ್ಣ ದೇವರಗುಡಿ, ಚಂದ್ರಾಮ ತೆಗ್ಗಿ ರಾಜೇಸಾಬ ವಾಲಿಕಾರ, ದಾವಲಸಾಬ ನದಾಪ್, ಚನ್ನಬಸಪ್ಪ ಸಿಂದೂರ್, ಚೆನ್ನಪ್ಪ ಗೂಡುರ್, ಪರಸು ಹೊಸೂರ, ಪರಶುರಾಮ ಮುತ್ತಗಿ, ಸೋಮೇಶ ನಾಗರೆಡ್ಡಿ, ಯಮನಪ್ಪಗೌಡ ಹೋಸೂರ, ಸಾಹೇಬಗೌಡ ಹೊಸೂರ ಇತರರಿದ್ದರು.