More

  ಅರ್ಚಕನ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ

  ಬೈಲಕುಪ್ಪೆ: ಸಮೀಪದ ಬೆಣಗಾಲ್ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಆಸ್ತಿಯನ್ನು ಮಾರಾಟ ಮಾಡಲು ಮುಂದಾದ ಅರ್ಚಕನ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

  ದೇವಾಲಯ ಆವರಣದಲ್ಲಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  ಗ್ರಾಮದ ಮುಖಂಡ ಧನರಾಜ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಹಿಂದೆ ಗ್ರಾಮಸ್ಥರು ಸೇರಿ ಅಬಿದ್ ರಾಕೇಶ್ ಎಂಬುವವರನ್ನು ಅರ್ಚಕರನ್ನಾಗಿ ನೇಮಕ ಮಾಡಿದ್ದರು. ಅವರ ಜೀವನ ನಿರ್ವಹಣೆಗೆ ದೇವಾಲಯಕ್ಕೆ ಸೇರಿದ ಸರ್ವೆ ನಂ.8ರಲ್ಲಿನ 5 ಎಕರೆ 1 ಗುಂಟೆ ಜಾಗವನ್ನು ವ್ಯವಸಾಯಕ್ಕೆ ನೀಡಲಾಗಿತ್ತು. ಆದರೆ, ಈಗ ಅಬಿದ್ ರಾಕೇಶ್ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

  ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಾಥ ಮಾತನಾಡಿ, ಅರ್ಚಕನ ವರ್ತನೆ ಬಗ್ಗೆ ಗ್ರಾಮಸ್ಥರಲ್ಲಿ ಅಸಮಾಧಾನ ಇದ್ದು, ಸಂಬಂಧ ಪಟ್ಟವರು ಈತನನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ತಹಸೀಲ್ದಾರ್ ಹಾಗೂ ಬೈಲಕುಪ್ಪೆ ಠಾಣೆಯಲ್ಲಿ ದೂರು ನೀಡಲಾಗಿದೆ.

  ಗ್ರಾಮದ ಪ್ರಮುಖರಾದ ಅರವಿಂದ ರಾಜೇಅರಸ್, ಸದಾಶಿವ, ಜಗದೀಶ್, ಗಿರೀಶ್, ತಮ್ಮಪ್ಪ, ಮಂಜುನಾಯಕ್, ದೇವರಾಜ್, ರಾಜೇಶ್ ಇತರರು ಇದ್ದರು.

  See also  ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts