More

    ಬೆಲೆ ಏರಿಕೆ ತಡೆಗಟ್ಟಲು ಆಗ್ರಹಿಸಿ ಸಿಐಟಿಯುನಿಂದ ಸಹಿ ಸಂಗ್ರಹ ಚಳುವಳಿ

    ವಿಜಯವಾಣಿ ಸುದ್ದಿಜಾಲ ಗದಗ
    ಬೆಲೆ ಏರಿಕೆ ತಡೆಗಟ್ಟಲು ಆಗ್ರಹಿಸಿ, ರೈತ ವಿರೋಧಿ ಕಾನೂನುಗಳ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಹಾಗೂ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸಲು ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಸಿಟಿಐಯುನಿಂದ ಸಹಿ ಸಂಗ್ರಹ ಚಳುವಳಿಗೆ ಚಾಲನೆ ನೀಡಲಾಯಿತು.
    ಸಂಟನೆಯ ಸದಸ್ಯ ಬಸವರಾಜ ಮಂತೂರ ಮಾತನಾಡಿ, ಆಹಾರ, ಆರೋಗ್ಯ, ಶಿಣ ಉಳಿಸಿ ದೇಶವನ್ನು ಅಭಿವೃದ್ಧಿಪಡಿಸಿ ಸಮಾನ ವೇತನ ನಿಗದಿಪಡಿಸಿ ಶ್ರಮೀಕರ ಬದುಕನ್ನು ಉಳಿಸಲು ಜ.23 ರಂದು ಜಿಲ್ಲಾ ಕೇಂದ್ರಗಳಲ್ಲಿ ಸಂಸದರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ರೈಲ್ವೆ, ವಿದ್ಯುತ್​ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನೀತಿಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕಾಮಿರ್ಕ ವಿರೋಧಿ ಸಂಹಿತೆಗಳನ್ನು ಸರ್ಕಾರ ವಾಪಾಸ್ಸು ಪಡೆಯಬೇಕು. ಈ ಎಲ್ಲ ಬೇಡಿಕೆ ಸೇರಿದಂತೆ ಕಾಮಿರ್ಕ ಕಾನೂನುಗಳ ಜಾರಿಗಾಗಿ ಸಂಟಿತ ಕಾಮಿರ್ಕರಿಗೆ ವಸತಿ, ಭವಿಷ್ಯ ನಿಧಿ, ಮುಂತಾದ ಕಲ್ಯಾಣ ಸೌಲಭ್ಯಗಳ ಜಾರಿಗೆ, ಕನಿಷ್ಟ ವೇತನ, ಸೇವಾ ಭದ್ರತೆ ನೀಡಲು ಸಹಿ ಸಂಗ್ರಹ ಚಳುವಳಿ ಆರಂಭಿಸಲಾಗಿದೆ ಎಂದರು. ಮಹೇಶ ಹಿರೇಮಠ, ಯಶೋಧಾ ಬೆಟಗೇರಿ, ನಾಗರತ್ನ ಬಡಿಗಣ್ಣವರ, ವಿಜಯಲಕ್ಷಿ$್ಮ ಚಲವಾದಿ, ರೇಣುಕಾ ತಳವಾರ, ಸಿದ್ದಲಿಂಗಪ್ಪ ಶ್ಯಾಗೋಟಿ, ಶಾರದಾ ಸೊರಟೂರ, ಚನ್ನಮ್ಮ ಶ್ಯಾವಿ, ವಾಸಂತಿ ಬಿದರನ್ನವರ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts