ವಾಹನ ತಪಾಸಣೆ ಹೆಸರಲ್ಲಿ ಪೊಲೀಸರಿಂದ ಕಿರಿಕಿರಿ ಆರೋಪ, ಪತ್ನಿ-ಮಗುವಿನೊಂದಿಗೆ ರಸ್ತೆಯಲ್ಲಿ ಚಾಲಕನಿಂದ ಪ್ರತಿಭಟನೆ

ಧಾರವಾಡ: ವಾಹನ ದಾಖಲೆ ಪರಿಶೀಲನೆ ಹೆಸರಲ್ಲಿ ಪೊಲೀಸರು ಕಿರಿಕಿರಿ ಮಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಮತ್ತು ಮಗುವಿನೊಂದಿಗೆ ಚಾಲಕನೊಬ್ಬ ರಸ್ತೆ ಮದ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದ ಕೆಲಗೇರಿ ಸೇತುವೆ ಬಳಿ, ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ ಪರಿಶೀಲನೆ ಬಳಿಕವೂ ಪೊಲೀಸರು ಕಿರಿಕಿರಿ ಮಾಡಿದ್ದಾರೆ ಎಂದು ಆರೋಪಿಸಿ ಚಾಲಕ ಪ್ರತಿಭಟಿಸಿದ್ದಾನೆ.

ಕೊನೆಗೆ ಪೊಲೀಸರು ಕೈ ಮುಗಿದು ಕ್ಷಮೆ ಕೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸರ ಈ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಪೊಲೀಸರು ಹಣ ಕೇಳಿದ್ದರಿಂದ ಹೀಗಾಗಿದೆ ಎಂದು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

 

 

 

2 Replies to “ವಾಹನ ತಪಾಸಣೆ ಹೆಸರಲ್ಲಿ ಪೊಲೀಸರಿಂದ ಕಿರಿಕಿರಿ ಆರೋಪ, ಪತ್ನಿ-ಮಗುವಿನೊಂದಿಗೆ ರಸ್ತೆಯಲ್ಲಿ ಚಾಲಕನಿಂದ ಪ್ರತಿಭಟನೆ”

Leave a Reply

Your email address will not be published. Required fields are marked *