More

  ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ

  ಮೈಸೂರು: ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಕಾರ್ಯಾದೇಶ ನೀಡಬೇಕು ಎಂದು ಆಗ್ರಹಿಸಿ ಎಲೆಕ್ಟ್ರಿಕಲ್ ಇಪಿಸಿ ಗುತ್ತಿಗೆದಾರರ ಸಂಘ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.


  ಹೂಟಗಳ್ಳಿಯ ಸೆಸ್ಕ್ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

  ರೈತರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಕಡೆ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸೆಸ್ಕ್ 235 ಕೋಟಿ ರೂ. ಟೆಂಡರ್ ಕರೆದಿದೆ. ಕೆಇಆರ್‌ಸಿಯಿಂದ ಇದಕ್ಕೆ ಬಜೆಟ್ ಮಂಜೂರಾತಿ ದೊರೆತಿದೆ. ಗುತ್ತಿಗೆದಾರರಿಗೆ ಟೆಂಡರ್ ಕೂಡ ನಿಗದಿ ಮಾಡಿದೆ. ಆದರೆ, ಕಾಮಗಾರಿ ಆರಂಭಿಸಲು ಇನ್ನೂ ಕಾರ್ಯಾದೇಶ ಕೊಟ್ಟಿಲ್ಲ. ಇದರಿಂದ ಕೋಟ್ಯಂತರ ರೂ. ಬಂಡವಾಳ ಹೂಡಿರುವ ಗುತ್ತಿಗೆದಾರರು ಆರ್ಥಿಕ ತೊಂದರೆಗೆ ಸಿಲುಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.


  ಅಕ್ಟೋಬರ್ 23ರಂದು ಆದೇಶ ಹೊರಡಿಸಲಾಗಿದೆ ಎಂದು ಇಂಧನ ಇಲಾಖೆ ಹೇಳುತ್ತದೆ. ಆದರೆ ನಮಗೆ ಮೌಖಿಕ ಆದೇಶ ಬಂದಿದೆಯೇ ಹೊರತು, ಲಿಖಿತ ಆದೇಶ ಬಂದಿಲ್ಲ ಎಂದು ಸೆಸ್ಕ್ ಹೇಳುತ್ತಿದೆ. ಈ ಗೊಂದಲದಿಂದ ಗುತ್ತಿಗೆದಾರರು ಸಂಕಷ್ಟ ಒಳಗಾಗಿದ್ದಾರೆ. ಕೂಡಲೇ ಕಾಮಗಾರಿ ಆದೇಶ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


  ಸಂಘಟನೆ ಮುಖಂಡರಾದ ಎಚ್.ಎನ್.ರಾಮಕೃಷ್ಣ, ಟಿ.ಕೆ.ಪ್ರವೀಣ್, ಮಂಜುನಾಥ್, ಸಿದ್ದು, ಸತೀಶ್ ರೆಡ್ಡಿ, ಪುಟ್ಟಮಾದು, ರಮೇಶ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts