More

  ಬೆಂಗಳೂರಿನಲ್ಲಿ ದುಡಿಯುವ ಜನರ ಮಹಾಧರಣಿ,ಪ್ರಚಾರಾಂದೋಲನ ಪೋಸ್ಟರ್ ಬಿಡುಗಡೆ

  ಹುಬ್ಬಳ್ಳಿ: ರೈತ ಕಾರ್ಮಿಕ ಹಾಗೂ ವಿವಿಧ ಜನಪರ ಸಂಘಟನೆಗಳ ಒಕ್ಕೂಟ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನವೆಂಬರ್ 26ರಿಂದ 28ರ ವರೆಗೆ ದುಡಿಯುವ ಜನರ ಮಹಾ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸಲಾಗುತ್ತಿದ್ದು, ಇದರ ಪೋಸ್ಟರ್ ಅನ್ನು ನಗರದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.

  ದೆಹಲಿ ಐತಿಹಾಸಿಕ ರೈತ ಹೋರಾಟ ಮುನ್ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾಮಿರ್ಕ ಸಂಟನೆಗಳ ಜಂಟಿ ಸಮಿತಿಗಳು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ರಾಜಭವನ ಚಲೋ ಹಾಗೂ ಮಹಾ ಧರಣಿಗಳನ್ನು ನಡೆಸಲು ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ದಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿದಿನ 50 ಸಾವಿರ ಜನ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ತಿಳಿಸಿದರು.

  ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ಶಿಾರಸಿನಂತೆ ಬೆಂಬಲ ಬೆಲೆ ಖಾತ್ರಿ ಪಡಿಸುವ ಶಾಸನ ರೂಪಿಸಬೇಕು, ಕಾಮಿರ್ಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ಕಾಮಿರ್ಕ ಸಂಹಿತೆಗಳನ್ನು ರದ್ದುಪಡಿಸಬೇಕು. ರೈತ ವಿರೋಧಿ ಮೂರು ತಿದ್ದುಪಡಿ ಕೃಷಿ ಕಾನೂನುಗಳು ವಾಪಸಾಗಬೇಕು. ಸಮಾನ ಕನಿಷ್ಠ ವೇತನ 26 ಸಾವಿರ ರೂ. ಜಾರಿಯಾಗಬೇಕು ಎಂಬುದು ಸೇರಿ 21 ಬೇಡಿಕೆಗಳಿಗಾಗಿ ಈ ಮಹಾಧರಣಿ ನಡೆಯಲಿದೆ.

  ಧಾರವಾಡ ಜಿಲ್ಲೆಯಿಂದ ಸಾವಿರ ಜನ ರೈತ ಕಾಮಿರ್ಕರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಚಾರಾಂದೋಲನ ನಡೆಸಲಾಗುತ್ತಿದೆ. ನಗರದ ದುರ್ಗದಬೈಲ್ ವೃತ್ತದಲ್ಲಿ ಮಂಗಳವಾರ ಮಹಾಧರಣಿ ಪ್ರಚಾರಾಂದೋಲನ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಯಿತು ಎಂದರು.

  ವಿಮಾ ನೌಕರರ ಮುಖಂಡ ಬಿ.ಎನ್. ಪೂಜಾರಿ, ಕರ್ನಾಟಕ ಪ್ರಾಂತ ರೈತ ಸಂದ ಜಿಲ್ಲಾಧ್ಯ ಬಿ.ಎಸ್. ಸೊಪ್ಪಿನ, ಟಿಯುಸಿಸಿ ಜಿಲ್ಲಾಧ್ಯ ಅಶೋಕ ಬಾಕಿರ್, ಸಿಐಟಿಯು ಜಿಲ್ಲಾಧ್ಯ ಬಿ.ಐ. ಈಳಿಗೇರ, ನಮ್ಮ ಕರ್ನಾಟಕ ಸೇನೆ ಉತ್ತರ ಕರ್ನಾಟಕ ಅಧ್ಯ ಅಮತ ಇಜಾರಿ, ಹಮಾಲಿ ಫೆಡರೇಶನ್ ಜಿಲ್ಲಾಧ್ಯ ಬಸವಣ್ಣೆಪ್ಪ ನೀರಲಗಿ, ಮುಖಂಡರಾದ ಎ.ಎಂ. ಖಾನ್, ಹುಸೇನಸಾಬ ನಧಾ್, ಬಸವರಾಜ ದೇವರಮನಿ, ವಾಸು ಕುಂಟೆ, ಕಿರಣ ಜೂಜರ, ಮಂಜುನಾಥ ಹುಜರಾತಿ, ಗಾಳೆಪ್ಪ ಮುತ್ಯಾಳ ಮುಂತಾದವರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts