ವೇತನ ಕಡಿತ ಖಂಡಿಸಿ ಪ್ರತಿಭಟನೆ

ಕುಮಟಾ: ವೇತನ ಕಡಿಮೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಹರನೀರ್ ಗೇರುಬೀಜ ಕಾರ್ಖಾನೆ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ವಿುಕರ ಮುಖ್ಯಸ್ಥೆ ಸರೋಜಿನಿ ಪಟಗಾರ ಮಾತನಾಡಿ, ಕಾರ್ವಿುಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ವೇತನ ನೀಡುತ್ತಿದ್ದರು. ಆದರೆ ಸೆಪ್ಟೆಂಬರ್​ನಲ್ಲಿ ಏಕಾಏಕಿ ವೇತನವನ್ನು 6 ಸಾವಿರಕ್ಕೆ ಇಳಿಸಲಾಗಿದೆ. ಇದರಿಂದ ಕಾರ್ವಿುಕರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಸರ್ಕಾರ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ನೀಡಬೇಕು. ಆಡಳಿತಾಧಿಕಾರಿಗಳು ಕಾರ್ವಿುಕರ ಸಮಸ್ಯೆಯನ್ನು ಮಾಲೀಕರಿಗೆ ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವ ಜತೆಗೆ ಉಪವಿಭಾಗಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾರ್ಖಾನೆ ಮ್ಯಾನೇಜರ್ ಶ್ರೀಕಾಂತ ನಾಯ್ಕ ಪ್ರತಿಕ್ರಿಯಿಸಿ, ಕಂಪನಿಯ ಮೇಲಧಿಕಾರಿಗಳ ಸೂಚನೆಯಂತೆ ವೇತನ ಕಡಿಮೆ ಮಾಡಲಾಗಿದೆ. ಕಾರ್ವಿುಕರ ಬೇಡಿಕೆಯನ್ನು ಮೇಲಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು. ಪ್ರತಿಭಟನೆಯಲ್ಲಿ ಕಾರ್ವಿುಕ ಪ್ರಮುಖರಾದ ಚಂದ್ರಕಲಾ ಪಟಗಾರ, ಸದಾನಂದ ನಾಯ್ಕ, ಶ್ರೀಧರ ಜಿ. ನಾಯ್ಕ, ಲತಾ ಎಸ್. ನಾಯ್ಕ, ಮಂಜುಳಾ ಮುಕ್ರಿ, ಜರೀನಾ ಸಾಬ್, ಜಟ್ಟು ಗೌಡ, ಸುರೇಶ ಪಟಗಾರ ಇತರರಿದ್ದರು.