ಶಿವಮೊಗ್ಗ: ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಾಯಕರು ಹಮ್ಮಿಕೊಂಡಿರುವ ಪಾದಯಾತ್ರೆ ಕೈಬಿಡಬೇಕೆಂದು ಆಗ್ರಹಿಸಿ ಅಹಿಂದ ಸಂಘಟನೆಗಳ ಪ್ರಮುಖರು ಶಿವಮೊಗ್ಗದಲ್ಲಿ ಎರಡನೇ ದಿನ ಕತ್ತೆಗಳೊಂದಿಗೆ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ ಸಮರ್ಥ ಆಡಳಿತ ನೀಡುತ್ತಿರುವುದರಿಂದ ಹತಾಶರಾಗಿರುವ ಬಿಜೆಪಿ, ಜೆಡಿಎಸ್ ನಾಯಕರು ಮುಡಾ ಹಗರಣದ ನೆಪವೊಡ್ಡಿ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಹಗರಣವಾಗಿದ್ದರೆ ತನಿಖಾ ವರದಿ ಬರಲಿ ಎಂದು ಪರೋಕ್ಷವಾಗಿ ಪಾದಯಾತ್ರೆ ಖಂಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಪ್ರತಿಪಕ್ಷಗಳ ಹುನ್ನಾರ ಎಂದರು.
ರಾಜ್ಯ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ.ಶೇಷಾದ್ರಿ, ಪ್ರಮುಖರಾದ ಇಕ್ಕೇರಿ ರಮೇಶ್, ಎಸ್.ಬಿ.ಅಶೋಕ್ ಕುಮಾರ್, ಸುರೇಶ್ ಬಾಬು, ರಾಮಚಂದ್ರಪ್ಪ, ತಂಗರಾಜ್, ಕುಮಾರ್, ಮಮತಾ ಸಿಂಗ್ ಇತರರಿದ್ದರು.