ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಧಾರವಾಡ: ಕೇಂದ್ರ ಸರ್ಕಾರದ ಸಿಆರ್​ಎಫ್ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಇಲ್ಲಿನ ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರದ ಸಿಆರ್​ಎಫ್ ಅನುದಾನವನ್ನು, ರಾಜ್ಯದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ, ರಾಜ್ಯದ ಅಭಿವೃದ್ಧಿಗೆ ಬಳಸದೆ ಕೇವಲ ಕಮಿಷನ್​ಗಾಗಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ. ಕಾಮಗಾರಿಗಾಗಿ ಟೆಂಡರ್ ಕರೆಯಲು ಮೀನಮೇಷ ಎಣಿಸುತ್ತಿದ್ದು, ಈ ಕೂಡಲೇ ಟೆಂಡರ್ ಕರೆದು ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಬಾಕಿ ಇರುವ ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಪಿಂಚಣಿ ಹಣ ಬಿಡುಗಡೆಗೊಳಿಸಲು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಶಿವು ಹಿರೇಮಠ, ಮಂಜುಳಾ ಅಕ್ಕೂರ, ಅರವಿಂದ ಏಗನಗೌಡರ, ಪ್ರಕಾಶ ಗೋಡಬೋಲೆ, ವಿಜಯಾನಂದ ಶೆಟ್ಟಿ, ಯಲ್ಲಪ್ಪ ಅರವಾಳದ, ಮೋಹನ ರಾಮದುರ್ಗ, ಶಿವಣ್ಣ ಬಡವಣ್ಣವರ, ದತ್ತಾ ಡೋರ್ಲೆ, ಶಂಕರ ಶೇಳಕೆ, ಶ್ರೀನಿವಾಸ ಕೋಟ್ಯಾನ, ಈರಣ್ಣ ಹಪ್ಪಳಿ, ಸಿದ್ದು ಕಲ್ಯಾಣಶೆಟ್ಟಿ, ರಾಕೇಶ ನಾಜರೆ, ಇತರರಿದ್ದರು.