24.7 C
Bangalore
Sunday, December 15, 2019

ಲೈಟ್ ಫಿಶಿಂಗ್ ನಿಷೇಧಕ್ಕೆ ಪಟ್ಟು

Latest News

ರಾಹುಲ್​ ಗಾಂಧಿಯವರನ್ನು ವಿರೋಧಿಸಿದ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಇನ್ನೂ ಬೆಂಬಲ ನೀಡುತ್ತಿದೆಯಾ? ಗೊಂದಲ ವ್ಯಕ್ತಪಡಿಸಿದ ಮಾಯಾವತಿ

ನವದೆಹಲಿ: ನಾನು ರಾಹುಲ್​ ಸಾವರ್ಕರ್​ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ತಿರುಗಿಬಿದ್ದಿದೆ. ರಾಹುಲ್​ ಗಾಂಧಿಯವರು ಸಾವರ್ಕರ್​ ಬಗ್ಗೆ ಆ ಮಾತುಗಳನ್ನು ಆಡಿದ್ದು ದುರದೃಷ್ಟಕರ...

ಲವ್​ ಫೇಲ್ಯೂರ್​ನಿಂದ ಯುವಕ ಆತ್ಮಹತ್ಯೆ: ಶವಪರೀಕ್ಷೆ ನಿರಾಕರಿಸಿ ಮೃತದೇಹ ಹೊತ್ತೊಯ್ದವರು ಪೊಲೀಸ್​ ಕೈಗೆ ಸಿಕ್ಕಿಬಿದ್ದಿದ್ಹೇಗೆ?

ಕರ್ನೂಲ್​: ಶವಪರೀಕ್ಷೆ ಬೇಡವೆಂದು ಹೇಳಿ ಯುವಕರಿಬ್ಬರು ತಮ್ಮ ಕುಟುಂಬದ ಸದಸ್ಯನೊಬ್ಬನ ಮೃತದೇಹವನ್ನು ಬೈಕ್​ನಲ್ಲಿ ಹಾಕಿಕೊಂಡು ಪರಾರಿಯಾಗುವಾಗ ಪೊಲೀಸರು ಬೆನ್ನತ್ತಿ ಮೃತದೇಹವನ್ನು ಮರಳಿ ತಂದ...

ಬುದ್ಧ, ಬಸವಣ್ಣ, ಅಂಬೇಡ್ಕರ್​ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ: ಸತೀಶ್​ ಜಾರಕಿಹೊಳಿ ವಿವಾದಿತ ಹೇಳಿಕೆ

  ಗೋಕಾಕ್: ಉಪ ಚುನಾವಣೆಯಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಪರವಾಗಿದ್ದವರು ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಅವರನ್ನು ದೇಶದಿಂದ...

ಚಳಿಗಾಲದಲ್ಲಿ ಏನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂದೆಲ್ಲ ತಲೆ ಕೆಡಿಸಿಕೊಂಡಿದ್ರೆ ಒಮ್ಮೆ ಈ ಟಿಪ್ಸ್​ಗಳನ್ನು ಓದಿ…

ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್​ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ. ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ...

ರಾಹುಲ್, ಸೋನಿಯಾ, ಪ್ರಿಯಾಂಕಾ ಹಾಗೂ ವಾದ್ರಾ ಇವರೆಲ್ಲ ನಕಲಿ ಗಾಂಧಿಗಳು: ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರೂ ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದರು. ನಾನು ರಾಹುಲ್​ ಸಾವರ್ಕರ್​ ಅಲ್ಲ, ರಾಹುಲ್​...

ಡಿಡಿ ಕಚೇರಿಗೆ ಗಿಲ್‌ನೆಟ್ ಮೀನುಗಾರರ ಮುತ್ತಿಗೆ * ಕ್ರಮ ಕೈಗೊಳ್ಳದ ಇಲಾಖೆ ವಿರುದ್ಧ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪರ್ಸೀನ್ ಮೀನುಗಾರಿಕಾ ಬೋಟುಗಳು ಲೈಟ್ ಬಳಸಿ ಮೀನುಗಾರಿಕೆ ನಡೆಸುತ್ತಿರುವುದು ಕಾನೂನು ಉಲ್ಲಂಘನೆ. ಅದನ್ನು ನಿಷೇಧಿಸಿ ಎಂಬ ಆಗ್ರಹದೊಂದಿಗೆ ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಧಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು.
ಕೇಂದ್ರ ಸರ್ಕಾರ 2016ರಲ್ಲಿ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಮಾಡಬಾರದು ಎಂದು ನಿಷೇಧಿಸಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿ ಪರ್ಸೀನ್ ಮೀನುಗಾರಿಕಾ ಬೋಟ್‌ಗಳ ಮಾಲೀಕರು ಅನಧಿಕೃತವಾಗಿ ಹೈಕೋರ್ಟ್‌ನಿಂದ ಆದೇಶ ತಂದಿದ್ದೇವೆ ಎಂದು ಹೇಳಿ ಲೈಟ್ ಫಿಶಿಂಗ್ ಮಾಡುತ್ತಿದ್ದಾರೆ. ಮೀನುಗಾರಿಕಾ ನಿರ್ದೇಶಕರು ಜ.24ರಂದು ಮುಂದಿನ ಆದೇಶದ ತನಕ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಮಾಡಬಾರದು ಎಂದು ಆದೇಶ ನೀಡಿದ್ದಾರೆ. ಆದರೂ, 8 ದೋಣಿಗಳು ಮೀನುಗಾರಿಕೆಗೆ ಹೋಗಿವೆ. 2 ದೋಣಿಗಳು ಹಿಂತಿರುಗಿವೆ. ಮೀನುಗಾರಿಕೆ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಆಲಿ ಹಸನ್ ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರರ ಮನವಿ ಸ್ವೀಕರಿಸಿದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಿಕ್ಕ ವೀರ ನಾಯಕ, 2016ರಲ್ಲಿ 14 ನಿಬಂಧನೆಗಳನ್ನು ವಿಧಿಸಿ ಲೈಟ್ ಫಿಶಿಂಗ್‌ಗೆ ಅನುಮತಿ ನೀಡಲಾಗಿದೆ. ಪ್ರಸಕ್ತ ಸಾಂಪ್ರದಾಯಿಕ ಮೀನುಗಾರರಿಂದ ಎದುರಾಗಿರುವ ವಿರೋಧದ ಬಗ್ಗೆ ಮೀನುಗಾರಿಕಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದ್ದರೂ, ಉತ್ತರ ಬಂದಿಲ್ಲ. ಅವರ ಸೂಚನೆಯಂತೆ ಮುಂದಿನ ಕ್ರಮ ಎಂದರು.
ಗಿಲ್‌ನೆಟ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್, ಉಪಾಧ್ಯಕ್ಷ ಸುಭಾಷ್ ಕಾಂಚನ್, ಪ್ರ.ಕಾರ್ಯದರ್ಶಿ ಬಿ.ಎ.ಬಶೀರ್,ಜತೆಕಾರ್ಯದರ್ಶಿ ಹೈದರ್, ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಲೈಮಾನ್ ಮೊದಲಾದವರು ಉಪಸ್ಥಿತರಿದ್ದರು.

ಗಲಾಟೆ ಸಾಧ್ಯತೆ ಎಚ್ಚರಿಕೆ: ಲೈಟ್ ಫಿಶಿಂಗ್ ನಿಷೇಧಿಸದಿದ್ದರೆ ಮೀನುಗಾರಿಕಾ ಧಕ್ಕೆಯಲ್ಲಿ ಮೀನು ಖಾಲಿ ಮಾಡುವಾಗ ಗಲಾಟೆ ಆಗುವ ಸಾಧ್ಯತೆ ಇದೆ. ಅವರಿಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಕುಲಕಸುಬನ್ನು ಬಂದ್ ಮಾಡಬೇಕಾಗುತ್ತದೆ. ಘರ್ಷಣೆ ನಡೆದರೆ ಇಲಾಖೆಯೇ ನೇರ ಹೊಣೆ ಎಂದು ಮೀನುಗಾರರು ಹೇಳಿದರು.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...