ಪರವಾನಗಿ ಕೊಡುವಂತೆ ಆಗ್ರಹಿಸಿ ಬನ್ನಾರಿ ಷುಗರ್ಸ್ ವಿರುದ್ಧ ಪ್ರತಿಭಟನೆ

ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಸರಬರಾಜಿಗೆ ಬನ್ನಾರಿ ಷುಗರ್ಸ್ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ.

ಪಟ್ಟಣದ ಐದು ದೀಪದ ವೃತ್ತದ ಬಳಿ ಹೋರಾಟಗಾರ ಹಾರೋಹಳ್ಳಿ ನಾರಾಯಣಗೌಡ ನೇತೃತ್ವದಲ್ಲಿ ತಮಿಳುನಾಡಿನ ಕಬ್ಬಿನ ಲಾರಿ ತಡೆದು ಶ್ರೀರಂಗಪಟ್ಟಣ – ಜೇವರ್ಗಿ ಹೆದ್ದಾರಿ ತಡೆ‌ದು ಬನ್ನಾರಿ ಅಮ್ಮನ್ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ರೈತರ ಸಂಕಷ್ಟ ಪರಿಹರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶ್ರೀನಿವಾಸನಾಯಕ, ಹೇಮಂತ್, ಚಿಕ್ಕಾಡೆ ರಾಜು, ಕೋಡಾಲ ಸುಬ್ರಹ್ಮಣ್ಯ, ಕುಮಾರ್, ಹರಳಹಳ್ಳಿ ರಾಮಕೃಷ್ಣ, ಧೈತ್ಯೆಗೌಡ, ಮಹಲಿಂಗೇಗೌಡ ಮೊದಲಾದವರಿದ್ದರು.

Leave a Reply

Your email address will not be published. Required fields are marked *