ಅಮಿತ್ ಷಾ ಹೇಳಿಕೆ ಖಂಡಿಸಿ ಪ್ರತಿಭಟನೆ

blank

ಮುಂಡರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮುಂಡರಗಿ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಬಂದ್ ಹಿನ್ನೆಲೆ ಎಲ್ಲ ಅಂಗಡಿ ಮುಂಗ್ಗಟ್ಟು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಕೆಲವಡೆ ತರಕಾರಿ, ಹೂವು ಅಂಗಡಿಗಳು ತೆರೆದಿದ್ದವು. ಇನ್ನೂ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್​ಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಬಸ್ ಹಾಗೂ ವಾಹನಗಳ ಸಂಚಾರ ಯಥಾಸ್ಥಿತಿ ಇತ್ತು.

ಪ್ರತಿಭಟನಾ ಮೆರವಣಿಗೆಯು ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟು ಬಸ್ ನಿಲ್ದಾಣ, ಬೃಂದಾವನ ಸರ್ಕಲ್, ಮುಖ್ಯ ಬಜಾರ, ಜಾಗೃತ್ ಸರ್ಕಲ್​ನಿಂದ ಕೊಪ್ಪಳ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಿತು.

ಅಧಿವೇಶನದಲ್ಲಿ ಕೇಂದ್ರ ಸಚಿವ ಅಮಿತ್ ಷಾ ಅವರು ತಮ್ಮ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇನಕಾರಿ ಭಾಷಣ ಮಾಡಿದ್ದಾರೆ. ಅವರು ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಗೌರವ ಕೊಡದೆ ವಿರೋಧಿ ನೀತಿ ತೋರಿದ್ದಾರೆ. ಹೀಗಾಗಿ ಅವರನ್ನು ಕೂಡಲೆ ಸಚಿವ ಸ್ಥಾನದಿಂದ ವಜಾ ಮಾಡಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಎಸ್.ಡಿ. ಮಕಾಂದಾರ, ಡಿಎಸ್​ಎಸ್ ಜಿಲ್ಲಾ ಸಂಚಾಲಕ ದುರುಗಪ್ಪ ಹರಿಜನ, ಡಾ.ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ನಿಂಗರಾಜ ಹಾಲಿನವರ, ವಿ.ಎಲ್. ನಾಡಗೌಡ್ರ, ಡಿ.ಡಿ. ಮೋರನಾಳ, ಸೋಮಣ್ಣ ಹೈತಾಪುರ, ಬಸವರಾಜ ನವಲಗುಂದ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಚಂದ್ರಶೇಖರ ಪೂಜಾರ, ಅಡಿವೆಪ್ಪ ಚಲವಾದಿ, ಮರಿಯಪ್ಪ ಸಿದ್ದಣ್ಣವರ, ರಾಘವೇಂದ್ರ ನರೇಗಲ್ಲ, ಮನೋಜ್ ರಾಠೋಡ, ಎಂ.ಕೆ. ತಳಗಡೆ, ಸಂತೋಷ ಹಡಗಲಿ, ಕಿರಣಕುಮಾರ ಹಾಲಿನವರ, ಶಿವಾನಂದ ದೊಡ್ಡಮನಿ, ಮಲ್ಲೇಶ ಕಕ್ಕೂರ, ಮಂಜುನಾಥ ಕಟ್ಟಿಮನಿ ಇತರರು ಇದ್ದರು.

Share This Article

ಈ ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯಲ್ಲಿ ಇವು ಇರಲೇಬೇಕು! kitchen

kitchen: ಬೇಸಿಗೆಯಲ್ಲಿ, ಬಿಸಿಲು ತುಂಬಾ ಇರುತ್ತದೆ,  ಬಿಸಿಯಾದ, ಕೊಳಕಾದ ಅಡುಗೆಮನೆಯು ಕೀಟಗಳು ಮತ್ತು ಸೂಕ್ಷ್ಮಜೀವಿಗಳನ್ನು ಆಹ್ವಾನಿಸಬಹುದು…

ಚಿನ್ನದ ಉಂಗುರ ಧರಿಸಲು ಯಾವ ಬೆರಳು ಉತ್ತಮ! ನೀವು ಖಂಡಿತವಾಗಿಯೂ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು..Astro Tips

Astro Tips: ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರು ಚಿನ್ನದ ಉಂಗುರಗಳನ್ನು ಇಷ್ಟಪಡುತ್ತೇವೆ. ಕೆಲವರು ಕೇವಲ ಎರಡು ಉಂಗುರಗಳನ್ನು…

ಈ 3 ರಾಶಿಯವರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದ್ರೂ ಮಾಡ್ತಾರಂತೆ! ಅವರು ಯಾರೆಂದು ನಿಮಗೆ ಗೊತ್ತಾ? Zodiac Signs

Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು…