ಕಸಾಯಿಖಾನೆಗೆ ಸಾಗಿಸುತ್ತಿದ್ದ 26 ಜಾನುವಾರುಗಳ ರಕ್ಷಣೆ

ನಂಜನಗೂಡು: ಕ್ಯಾಂಟರ್ ಲಾರಿಯಲ್ಲಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 26 ಜಾನುವಾರುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಲಾರಿ ಸಮೇತ ವಶಕ್ಕೆ ಪಡೆಯಲಾಗಿದೆ.

ಗುಂಡ್ಲುಪೇಟೆ ಮಾರ್ಗ ಕೇರಳಕ್ಕೆ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ್ಲೆ ಬಳಿ ಪೊಲೀಸರು ಲಾರಿ ತಡೆದು ಪರಿಶೀಲಿಸಿದಾಗ 23 ಹಸು, 3 ಎಮ್ಮೆಗಳು ಕಂಡು ಬಂದಿವೆ. ಒಂದೇ ಕಡೆ ಜಾನುವಾರುಗಳನ್ನು ತುಂಬಿದ್ದರಿಂದ ಗಾಳಿಯಿಲ್ಲದೆ ಕೆಲ ಹಸುಗಳು ನಿತ್ರಾಣಗೊಂಡಿದ್ದ ದೃಶ್ಯ ಮನಮಿಡಿಯುವಂತಿತ್ತು.

ಲಾರಿಯನ್ನು ತಡೆದ ಯುವ ಬ್ರಿಗೇಡ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದರು. ಜಾನುವಾರುಗಳಿಗೆ ಮೈಸೂರಿನ ಪಿಂಜ್ರಾಪೋಲ್‌ನಲ್ಲಿ ಆಶ್ರಯ ನೀಡಲಾಗಿದೆ.
ಸ್ಥಳಕ್ಕಾಗಮಿಸಿದ ಪಿಎಸ್‌ಐ ಯಶ್ವಂತ್‌ಕುಮಾರ್ ಮಹಜರು ನಡೆಸಿದರು. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಶಿವಕುಮಾರಸ್ವಾಮಿ, ಆನಂದ್, ಪೇದೆ ರಾಜು ಇದ್ದರು.

Leave a Reply

Your email address will not be published. Required fields are marked *