24.5 C
Bangalore
Sunday, December 8, 2019

ರಣಂ ಸಿನಿಮಾ ದುರಂತ ಸಂತ್ರಸ್ತರಿಂದ ಮೊಬೈಲ್ ಟವರ್ ಮೇಲೇರಿ ಪ್ರತಿಭಟನೆ

Latest News

ಡಾಬಾದಲ್ಲಿ ಇಟ್ಟಿದ್ದ 40 ಕೆಜಿ ಈರುಳ್ಳಿ ಕದ್ದೊಯ್ದ ಇಬ್ಬರು ಮಹಿಳೆಯರು; ಪೊಲೀಸರಿಗೆ ದೂರು ನೀಡುವುದಿಲ್ಲವೆಂದ ಮಾಲೀಕ

ಮೊಹಾಲಿ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ನಡುವೆ ಈರುಳ್ಳಿ ಕಳ್ಳರೂ ಹೆಚ್ಚಾಗಿದ್ದಾರೆ. ಹಾಗೇ ಪಂಜಾಬ್​ನ ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 40 ಕೆಜಿ ಈರುಳ್ಳಿಯನ್ನು...

ಪಾವಗಡದ ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಪ್ರತಿಭಟನೆ

ಪಾವಗಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಎಚ್.ಪಾಳ್ಯದ ನವೀನ್(23) ಮೃತಪಟ್ಟಿದ್ದು, ಸಾವಿಗೆ ವೈದ್ಯರ...

ಸಾಸಲು ಗ್ರಾಮದಲ್ಲಿ ತ್ಯಾಜ್ಯ ನೀರಿನ ಸಂಕಷ್ಟ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ವಿದ್ಯಾರ್ಥಿಗಳು ಕೊಳಚೆ ನೀರಲ್ಲೇ ಸಂಚರಿಸುವಂತಾಗಿದೆ. ಗ್ರಾಮದ ಅಣ್ಣಯ್ಯನ ಪಾಳ್ಯದ ತ್ಯಾಜ್ಯ ನೀರು ಶಾಲಾ...

ರಸ್ತೆಯಲ್ಲಿ ಬೇಡ ರಾಗಿ ಒಕ್ಕಣೆ

ಶಿವರಾಜ ಎಂ.ಬೆಂಗಳೂರು: ಸತತ ಬರದಿಂದ ಕಂಗೆಟ್ಟಿದ್ದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರಾಗಿ ಸಲಿನಿಂದ ‘ಸುಗ್ಗಿ’ ಸಂಭ್ರಮ ಮನೆ ಮಾಡಿದೆ. ಈಗಾಗಲೇ ರಾಗಿ ಕಟಾವು...

ಮಹನೀಯರ ಚರಿತ್ರೆ ಅರಿವಿಗೆ ಛದ್ಮವೇಷ ಪೂರಕ

ವಿಜಯಪುರ: ಮಹಾತ್ಮ ಗಾಂಧಿ, ನೆಹರು, ಭಗತ್‌ಸಿಂಗ್, ಶ್ರೀರಾಮ, ಅಂಬೇಡ್ಕರ್ ಸೇರಿ ಇತರ ಮಹನೀಯರ ವೇಷ-ಭೂಷಣವನ್ನು ಮಕ್ಕಳು ಧರಿಸುವುದರಿಂದ ಅವರ ಜೀವನ ಚರಿತ್ರೆ, ವ್ಯಕ್ತಿತ್ವ, ಅರಿಯಲು ಹಾಗೂ...

ಬೆಂಗಳೂರು: ರಣಂ ಸಿನಿಮಾ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಏರ್ ಕಂಪ್ರೆಸರ್​ನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಾಲ್ವರು ಸಂಬಂಧಿಗಳು ಭಾನುವಾರ (ಮಾ.31) ಮೊಬೈಲ್ ಟವರ್ ಏರಿ ಚಿತ್ರತಂಡದ ವಿರುದ್ಧ ಪ್ರತಿಭಟನೆ ನಡೆಸಿದರು.

ಭಾನುವಾರ ಮಧ್ಯಾಹ್ನ 2.30ರಲ್ಲಿ ಮೃತ ಸುಮೈರಾ ಬಾನು ಪತಿ ತಬ್ರೇಜ್ ಖಾನ್ ಸಹೋದರರಾದ ಮುನಾವರ್ ಖಾನ್, ಮೆಹಬೂಬ್ ಖಾನ್, ಮನ್ಸೂರ್ ಅಲಿ ಖಾನ್ ಹಾಗೂ ಸುಮೈರಾ ಬಾನು ಸಹೋದರ ವಹೀದ್ ಸೇರಿ ನಾಲ್ವರು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಜತೆಗೂಡಿ ಬಾಗಲೂರಿನಲ್ಲಿರುವ ಮೊಬೈಲ್ ಟವರ್ ಏರಿ ‘ಸೇವ್ ಅಸ್ ಫ್ರಮ್ ಸ್ಯಾಂಡಲ್​ವುಡ್ ಕಿಲ್ಲರ್ಸ್’ ಎಂದು ಬರೆದ ಹೆಸರಿನ ಬ್ಯಾನರ್ ಹಿಡಿದು ರಣಂ ಚಿತ್ರತಂಡದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಾಗಲೂರು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸಪಟ್ಟರು. ಕರವೇ ಮುಖಂಡ ಸುರೇಶ್ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಜತೆ ಮಾತನಾಡಿ ಸೋಮವಾರ ಬೆಳಗ್ಗೆ ಭೇಟಿಗೆ ಅವಕಾಶ ನೀಡಬೇಕೆಂದು ಕೇಳಿದರು. ನಂತರ ಪ್ರತಿಭಟನಾಕಾರರನ್ನು ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ದುರ್ಘಟನೆ ಸಂಭವಿಸಿ ಮೂರು ದಿನ ಕಳೆದರೂ ಚಿತ್ರ ತಂಡದ ಯಾರೊಬ್ಬರೂ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಸಿನಿಮಾ ತಂಡ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಿದೆ. ಇಷ್ಟೊಂದು ದೊಡ್ಡ ಪ್ರಕರಣ ನಡೆದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ತಪ್ಪಿತಸ್ಥರ ಬಂಧನಕ್ಕೆ ಆಗ್ರಹ: ಮೂರು ದಿನ ಕಳೆದರೂ ಚಿತ್ರರಂಗದ ಯಾರೊಬ್ಬರು ಘಟನಾ ಸ್ಥಳ ಅಥವಾ ಮನೆಗೆ ಬಂದು ಸಾಂತ್ವನ ಹೇಳಿಲ್ಲ. ಅವರ ನಿರ್ಲಕ್ಷ್ಯದಿಂದಲೇ ದುರ್ಘಟನೆ ನಡೆದಿದೆ. ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಮೃತ ಸುಮೈರಾ ಬಾನು ಪತಿ ತಬ್ರೇಜ್ ಸಹೋದರ ಮುನಾವರ್ ಆಗ್ರಹಿಸಿದರು.

ಮೃತರ ಸಂಬಂಧಿ ಮೆಹಬೂಬ್ ಪಾಷಾ ಮಾತನಾಡಿ, ದುರ್ಘಟನೆ ನಡೆದ ಬಳಿಕ ಮೊಬೈಲ್​ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಚಿತ್ರತಂಡ ಇದುವರೆಗೂ ಪೊಲೀಸರಿಗೆ ಸಿಗುತ್ತಿಲ್ಲ. ಮಾಸ್ತಿಗುಡಿ ಚಿತ್ರದ ದುರಂತ ಮಾಸುತ್ತಿರುವಾಗಲೇ ಮತ್ತೊಂದು ದುರಂತ ನಡೆದಿದೆ. ಸಿನಿಮಾ ತಂಡದ ನಿರ್ಲಕ್ಷ್ಯಕ್ಕೆ ಸುಮೈರಾ ಬಾನು ಮತ್ತು ಮಗು ಆಯಿಷಾ ಮೃತಪಟ್ಟಿದ್ದಾರೆ. ಸಿನಿಮಾ ನಿರ್ದೇಶಕ, ನಿರ್ವಪಕರು, ಸಾಹಸ ನಿರ್ದೇಶಕ, ಚಿತ್ರದ ವ್ಯವಸ್ಥಾಪಕ ಸೇರಿ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಆರೋಪಿಗಳಿಗೆ ಮುಂದುವರಿದ ಶೋಧ

ನಟ ಚೇತನ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಿರ್ದೇಶಕ ವಿ. ಸಮುದ್ರಂ, ನಿರ್ವಪಕ ಆರ್. ಶ್ರೀನಿವಾಸ್, ಸಾಹಸ ನಿರ್ದೇಶಕ ವಿಜಯನ್ ಮತ್ತು ತಂತ್ರಜ್ಞರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ನಾಲ್ವರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ದುರ್ಘಟನೆ ಸಂಭವಿಸಿದ ದಿನ ಸಂಜೆ 7 ಗಂಟೆಗೆ ಸಾಹಸ ನಿರ್ದೇಶಕ ವಿಜಯನ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದರು. ದುರ್ಘಟನೆ ನಡೆದ ಕೆಲ ಹೊತ್ತಲ್ಲೇ ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಪೊಲೀಸರು ತಮ್ಮನ್ನು ಬೆನ್ನಟ್ಟುತ್ತಿರುವ ವಿಚಾರ ತಿಳಿದುಕೊಂಡಿದ್ದ ವಿಜಯನ್, ವಿಮಾನದಲ್ಲಿ ಹೋಗದೆ ತಲೆಮರೆಸಿಕೊಂಡಿದ್ದಾರೆ

ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಚೆನ್ನೈ ಅಥವಾ ಹೈದ್ರಾಬಾದ್​ಗೆ ರಸ್ತೆ ಮೂಲಕ ತೆರಳಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪೊಲೀಸರ ಎರಡು ತಂಡಗಳು ಹುಡುಕಾಟ ನಡೆಸುತ್ತಿವೆ. ಯಾವುದೇ ಅನುಮತಿ ಪಡೆಯದೆ ಸಿನಿಮಾ ತಂಡದವರು ಸಾಹಸ ದೃಶ್ಯ ಚಿತ್ರೀಕರಿಸಿದ ಹಿನ್ನೆಲೆಯಲ್ಲಿ ದುರ್ಘಟನೆ ನಡೆದ ಸ್ಥಳದಲ್ಲಿದ್ದ ಸಿನಿಮಾ ತಂಡದ ಎಲ್ಲ ವಾಹನಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

Stay connected

278,749FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...