22.5 C
Bengaluru
Sunday, January 19, 2020

ಗುಳಿಮಂಡಲ ಹಾವಿನ ಸಂರಕ್ಷಣೆಗೆ ಸಾಕ್ಷ್ಯಚಿತ್ರ

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ಮಾನವರ ಆಕ್ರಮಣದಿಂದ ನಲುಗುತ್ತಿದೆ ಗುಳಿಮಂಡಲ ಸಂತತಿ 

|ಅವಿನ್ ಶೆಟ್ಟಿ,ಉಡುಪಿ

ಪಶ್ಚಿಮಘಟ್ಟದ ಅತ್ಯಂತ ಅಪರೂಪದ ವಿಶೇಷ ಜೀವಿ, ನೋಡಲು ಸುಂದರವಾಗಿ ಸದಾ ಕಂಗೊಳಿಸುವ ಹಾವು ಮಲಬಾರ್ ಗುಳಿಮಂಡಲ. ಮಾನವನ ಆಕ್ರಮಣಕ್ಕೆ ತುತ್ತಾಗಿರುವ ಈ ಹಾವಿನ ಸಂರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪರಿಸರ ಪ್ರೇಮಿಗಳು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

ಉರಗತಜ್ಞ ಗುರುರಾಜ್ ಸನಿಲ್ ಮತ್ತು ಪರಿಸರ ಪ್ರೇಮಿ ಪ್ರಶಾಂತ್ ಸಾಗರ್ ಸಾಕ್ಷ್ಯಚಿತ್ರ ನಿರ್ಮಿಸಿದವರು. ಗುಳಿಮಂಡಲ ಹಾವನ್ನು ಇಂಗ್ಲಿಷ್‌ನಲ್ಲಿ ಮಲಬಾರ್ ಪಿಟ್ ವೈಪರ್ ಎಂದು ಕರೆಯಲಾಗುತ್ತದೆ. ಬೇರೆ ಕಡೆ ಅತಿ ವಿರಳವಾಗಿ, ಭಾರತದ ಪಶ್ಚಿಮಘಟ್ಟದಲ್ಲಿ ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ಈ ಹಾವುಗಳು ಕಾಣಸಿಗುತ್ತವೆ ಎಂದು ಉರಗತಜ್ಞ ಗುರುರಾಜ್ ಹೇಳುತ್ತಾರೆ.

 21 ನಿಮಿಷದ ಸಾಕ್ಷ್ಯಚಿತ್ರ: ಗುಳಿಮಂಡಲ ಹಾವಿನ ಮೇಲಾಗುತ್ತಿರುವ ಮನುಷ್ಯ ಆಕ್ರಮಣವನ್ನು ಪರಿಸರ ಪ್ರೇಮಿ, ಬೆಂಗಳೂರಿನಲ್ಲಿರುವ ಸಿನಿಮಾ ಛಾಯಗ್ರಾಹಕ ಪ್ರಶಾಂತ್ ಸಾಗರ್ ಕಣ್ಣಾರೆ ಕಂಡಿದ್ದಾರೆ. ಬಳಿಕ ಉರಗತಜ್ಞ ಗುರುರಾಜ್ ಸನಿಲ್ ಅವರನ್ನು ಸಂಪರ್ಕಿಸಿ ಜನಜಾಗೃತಿ ಮೂಡಿಸಲು ಸಾಕ್ಷ್ಯಚಿತ್ರ ತಯಾರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇಬ್ಬರು ಸೇರಿ 20 ನಿಮಿಷ ಅವಧಿಯ ಸಾಕ್ಷ್ಯಚಿತ್ರ ಶಿವಮೊಗ್ಗ ಜಿಲ್ಲೆ ಸಾಗರದ ಗ್ರಾಮ ಮತ್ತು ಅರಣ್ಯ ಭಾಗದಲ್ಲಿ ಚಿತ್ರೀಕರಿಸಿದ್ದಾರೆ.

ಹಿನ್ನೆಲೆ ಸಂಗೀತದೊಂದಿಗೆ, ಉರಗತಜ್ಞರಿಂದ ಹಾವಿನ ಬಗ್ಗೆ ಮಾಹಿತಿ, ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಕಾಡಿನ ದೃಶ್ಯಗಳು, ಜಲಪಾತ ಸೊಬಗು, ಉಳಿಗಮಂಡಲ ಹಾವುಗಳ ಜೀವನ ಶೈಲಿಯನ್ನು ಪ್ರಶಾಂತ್ ಸಾಗರ್ ಕ್ಯಾಮರಾದಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಯೂಟ್ಯೂಬ್‌ನಲ್ಲಿ ಸಾಕ್ಷ್ಯಚಿತ್ರ ಅಪ್‌ಲೋಡ್ ಮಾಡಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ.

ಸಾರ್ವಜನಿಕ ಪ್ರದರ್ಶನ: ಸರ್ಕಾರ, ಅರಣ್ಯ ಇಲಾಖೆ ಸಹಕಾರ ನೀಡಿದಲ್ಲಿ ಅರಣ್ಯ ಗ್ರಾಮೀಣ ಭಾಗದ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಸಾಕ್ಷ್ಯಚಿತ್ರ ಪ್ರದರ್ಶಿಸಬಹುದು ಎಂಬ ಆಶಯವನ್ನು ಪ್ರಶಾಂತ್ ಮತ್ತು ಗುರುರಾಜ್ ಸನಿಲ್ ಹೊಂದಿದ್ದಾರೆ.

ಕರಾವಳಿ, ಮಲೆನಾಡಿನ ಭಾಗದಲ್ಲಿ: ಪಶ್ಚಿಮಘಟ್ಟ ಹೊಂದಿಕೊಂಡ ಕುಂದಾಪುರ, ಹೆಬ್ರಿ, ಆಗುಂಬೆ, ಸೀತಾನದಿ, ಬಾಳೆಬರೆ ಘಾಟ್, ಕಾರ್ಕಳ, ಸುಳ್ಯ, ಪುತ್ತೂರು, ಸಂಪಾಜೆ ಸಹಿತ ಕರಾವಳಿ ಜಿಲ್ಲೆಗಳು ಮತ್ತು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೊಂದಿಕೊಂಡ ಕಾಡು, ಕೃಷಿ ಪ್ರದೇಶದಲ್ಲಿ ಗುಳಿ ಮಂಡಲ ಹಾವು ಕಂಡು ಬರುತ್ತದೆ. ಮಲೆನಾಡು, ಕರಾವಳಿ, ಉ.ಕ ಭಾಗದಲ್ಲಿ ಈ ಹಾವನ್ನು ಮರ್ಚಟ್ಟೆ(ಮರಚಟ್ಟೆ), ಮರೆಮಂಡ್ಲ (ಮರೆಮಂಡಲ) ಎಂದು ಕರೆಯಲಾಗುತ್ತದೆ.

ಪರಿಸರಕ್ಕೆ ತಕ್ಕ ಬಣ್ಣ ಬದಲಾವಣೆ: ಈ ಹಾವಿನ ವೈಶಿಷ್ಟ್ಯವೇನೆಂದರೆ ಪರಿಸರಕ್ಕೆ ತಕ್ಕನಾಗಿ ಈ ಹಾವುಗಳ ಮೈಬಣ್ಣ ಬದಲಾಗುತ್ತದೆ. ಉದಾಹರಣೆಗೆ ಮರದ ಬೇರಿನ ಮೇಲೆ ಮಲಗಿದ್ದರೆ ಮರದ ಬಣ್ಣದ ಹಾಗೆ, ಹಸಿರು ಕಾಂಡದ ನಡುವೆ ಇದ್ದರೆ ಹಸಿರು ಬಣ್ಣದಲ್ಲಿ, ಮಣ್ಣಿನಲ್ಲಿದ್ದರೆ ಮಣ್ಣಿನ ಬಣ್ಣದಲ್ಲಿ ಈ ಹಾವುಗಳ ಮೈಬಣ್ಣ ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ 1.5ರಿಂದ 2 ಅಡಿ ಉದ್ದ ಇರುವ ಹಾವು ಮರಿ ಹಾಕುತ್ತದೆ. ಸಾಮಾನ್ಯವಾಗಿ ಯಾವುದೇ ಜೀವಿಯಾದರೂ ತನಗೆ ಸಮಸ್ಯೆಯಾದಾಗ ಪ್ರತಿಕ್ರಿಯಿಸುತ್ತದೆ. ಈ ಹಾವಿನ ಸ್ವಭಾವವೂ ಹಾಗೆ, ಜನರು ಗೊತ್ತಿಲ್ಲದೆ ಮುಟ್ಟಿ ಕಚ್ಚಿಸಿಕೊಂಡಿದ್ದು ಇದೆ. ಈ ಹಾವು ರಾತ್ರಿ ಸಂಚಾರಿ ಆಗಿದ್ದು, ಹಗಲು ಹೊತ್ತಿನಲ್ಲಿ ಮಲಗಿರುತ್ತದೆ.

ಗುಳಿಮಂಡಲ ಹಾವು ನಿರುಪದ್ರವಿ. ಮನುಷ್ಯರಿಂದ ತೊಂದರೆಯಾದಾಗ ಭಯದಿಂದ ಎಚ್ಚರಗೊಂಡು ಕಚ್ಚಿಬಿಡುತ್ತದೆ. ಇದನ್ನೇ ತಪ್ಪಾರ್ಥ ಮಾಡಿಕೊಂಡ ಮನುಷ್ಯರು, ಇದು ವಿಷದ ಹಾವು, ಕಚ್ಚುವ ಹಾವು ಎಂದು ಭಾವಿಸಿದ್ದಾರೆ. ಈ ಹಾವನ್ನು ಕಂಡ ಕೂಡಲೆ ಹೊಡೆದು ಸಾಯಿಸುವ ಮನಸ್ಥಿತಿ ಇದೆ. ಇದರಲ್ಲಿರುವುದು ಮೃದು ವಿಷ. ಪಶ್ಚಿಮಘಟ್ಟದಲ್ಲಿರುವ ಅತ್ಯಂತ ವಿಶೇಷ ಜೀವಿ. ನಾವು ಇದನ್ನು ಉಳಿಸಿಕೊಳ್ಳಬೇಕು. ಪಶ್ಚಿಮಘಟ್ಟ ಪರಿಸರ ಸಮಾತೋಲನ ಕಾಪಾಡಲು ಈ ಹಾವಿನ ಕೊಡುಗೆ ಅನನ್ಯ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಕ್ಷ್ಯಚಿತ್ರ ಮಾಡಿದ್ದೇವೆ.
| ಗುರುರಾಜ್ ಸನಿಲ್ ಉರಗ ತಜ್ಞ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...