22.8 C
Bengaluru
Saturday, January 18, 2020

ಸುರಕ್ಷಾ ಮೊರೆಹೋದ ಮಹಿಳೆಯರು

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಬೆಂಗಳೂರು: ನಾಗರಿಕರ ಸುರಕ್ಷತೆಗೆ ಪೊಲೀಸ್ ಇಲಾಖೆ ಹೊರತಂದಿರುವ ‘ಸುರಕ್ಷಾ ಆಪ್’ ಅನ್ನು ಮೂರೇ ದಿನಗಳಲ್ಲಿ 40 ಸಾವಿರಕ್ಕೂ ಹೆಚ್ಚಿನ ಜನರು ಡೌನ್​ಲೋಡ್ ಮಾಡಿಕೊಂಡಿದ್ದಾರೆ.

ಹೈದರಾಬಾದ್​ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಮಹಿಳೆಯರು ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಸುರಕ್ಷಾ ಆಪ್ ಬಳಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕರೆ ಕೊಟ್ಟಿದ್ದರು. ಇದರಿಂದ ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಕೆಲವೇ ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಹೋಗಲು ಪೊಲೀಸರಿಗೆ ನೆರವಾಗಲಿದೆ ಎಂದು ಸೂಚಿಸಿದ್ದರು.

ದೆಹಲಿಯಲ್ಲಿ ನಿರ್ಭಯಾ ಪ್ರಕರಣದ ಬಳಿಕ ನಗರ ಪೊಲೀಸರು 2017ರ ಏಪ್ರಿಲ್​ನಲ್ಲಿ ‘ಸುರಕ್ಷಾ ಆಪ್’ ಪರಿಚಯಿಸಲಾಗಿತ್ತು. ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರು ಆಪ್ ಡೌನ್​ಲೋಡ್ ಮಾಡಿಕೊಂಡಿದ್ದರು. ಮಹಿಳೆಯರ ಮೇಲಿನದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವು ದರಿಂದ ಮುಂಜಾಗ್ರತೆ ಕ್ರಮವಾಗಿ, ತಮ್ಮ ಸುರಕ್ಷತೆಗೆ ‘ಸುರಕ್ಷಾ ಆಪ್’ ಡೌನ್​ಲೋಡ್​ಗೆ ಮುಂದಾಗುತ್ತಿದ್ದಾರೆ.

‘ನಮ್ಮ 100’ಗಿಂತ ತ್ವರಿತ ಸೇವೆ!: ಸಂಕಷ್ಟದಲ್ಲಿ ಸಿಲುಕಿರುವವರು ‘ನಮ್ಮ 100’ ಮೂಲಕ ತ್ವರಿತ ಗತಿಯಲ್ಲಿ ಸೇವೆ ಪಡೆಯಲು ವಿಳಂಬವಾಗಬಹುದು. ಅಲ್ಲದೇ, ಕೆಲವು ಸಂದರ್ಭದಲ್ಲಿ ಕರೆ ಸ್ವೀಕರಿಸಲು ತಡವಾಗಬಹುದು. ಇಂತಹ ಸಂದರ್ಭದಲ್ಲಿ ಸುರಕ್ಷಾ ಆಪ್​ನಲ್ಲಿರುವ ಎಸ್​ಒಎಸ್ ಪ್ಯಾನಿಕ್ ಬಟನ್ ಒತ್ತಿದರೆ ಸಾಕು, ಪೊಲೀಸರಿಗೆ ತುರ್ತು ಸೇವೆಯ ಸಂದೇಶ ರವಾನೆಯಾಗಲಿದೆ. ಸ್ಮಾರ್ಟ್​ಫೋನ್​ನಿಂದ ಸಂದೇಶ ರವಾನೆಯಾಗಿರುವ ಸ್ಥಳದ ಜಿಪಿಎಸ್ ಲೊಕೇಷನ್ ಆಧರಿಸಿ 7ರಿಂದ 9 ನಿಮಿಷದೊಳಗಾಗಿ ಪೊಲೀಸರು ಸೇವೆ ಒದಗಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ‘ನಮ್ಮ 100’ಗಿಂತ ಸುರಕ್ಷಾ ಆಪ್ ಸೇವೆ ಕ್ಷಿಪ್ರಗತಿಯಲ್ಲಿ ಸಿಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಿರುವುದರಿಂದ ಇದರ ಮಹತ್ವ ನಾಗರಿಕರಿಗೆ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಡ್ಡಾಯ ಬಳಕೆಗೆ ಸೂಚನೆ: ಬಹುತೇಕ ಮಹಿಳೆಯರಿಗೆ ತುರ್ತು ಸಂದರ್ಭದಲ್ಲಿ ಸುರಕ್ಷಾ ಆಪ್ ಬಳಕೆ ಮಾಡುವುದರ ಬಗ್ಗೆ ಗೊತ್ತೇ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಕುಟುಂಬಸ್ಥರು ತಮ್ಮ ಮನೆಯಲ್ಲಿರುವ ಮಹಿಳೆಯರಿಗೆ ಸ್ಮಾರ್ಟ್​ಫೋನ್ ಮೂಲಕ ಸುರಕ್ಷಾ ಆಪ್ ಬಗ್ಗೆ ಹೇಳಿಕೊಡಬೇಕು. ಅಲ್ಲದೇ ಗಾರ್ವೆಂಟ್ಸ್, ಕಾರ್ಖಾನೆ ಸೇರಿ ಇನ್ನಿತರ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವವರಿಗೆ ಆಪ್ ಬಳಸುವುದನ್ನು ಕಲಿಸಿಕೊಡಬೇಕು. ಸ್ಮಾರ್ಟ್​ಫೋನ್​ಗಳಲ್ಲಿ ಕಡ್ಡಾಯವಾಗಿ ಸುರಕ್ಷಾ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ಹಾಗೂ ಈ ಬಗ್ಗೆ ಅವರ ಗಮನಕ್ಕೆ ತರಲು ನೋಟಿಸ್ ಅಂಟಿಸುವಂತೆ ಕಂಪನಿಯ ಮುಖ್ಯಸ್ಥರಿಗೆ ಸೂಚಿಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಪ್ ಬಳಸುವುದು ಹೀಗೆ... ಆಪ್​ನಲ್ಲಿರುವ ಕೆಂಪು ಬಣ್ಣದ ಎಸ್​ಒಎಸ್ ಪ್ಯಾನಿಕ್ ಬಟನ್ ಒತ್ತಿದಾಗ ಪೊಲೀಸ್ ಕಮಾಂಡ್ ಸೆಂಟರ್​ಗೆ 7 ಸೆಕೆಂಡ್​ನಲ್ಲಿ ಮಾಹಿತಿ ಹೋಗಲಿದೆ. ತದನಂತರ ಕೆಂಪು ಬಣ್ಣವಿದ್ದ ಪ್ಯಾನಿಕ್ ಬಟನ್ ಹಸಿರು ಬಣ್ಣವಾಗಲಿದೆ. ಇದಾದ ನಂತರ ಕೆಲ ಕ್ಷಣ ಮಾತನಾಡಲು ಅವಕಾಶ ಸಿಗುತ್ತದೆ. ಮಾತನಾಡಲು ಆಗದೆ ಇದ್ದಾಗ ತಕ್ಷಣ ಪೊಲೀಸರು ಕರೆ ಮಾಡುತ್ತಾರೆ. ಆಗಲೂ ಮಾತನಾಡಲು ಸಾಧ್ಯವಾಗದೆ ಇದ್ದಾಗ ಆಪ್​ನಲ್ಲಿರುವ ಕ್ಯಾಮರಾ ತನ್ನಿಂದ ತಾನೇ ಚಾಲನೆಯಾಗಿ ಸುತ್ತಮುತ್ತಲಿನ ದೃಶ್ಯವನ್ನು ಸೆರೆಹಿಡಿದು ಕಮಾಂಡ್ ಸೆಂಟರ್​ಗೆ ರವಾನಿಸುತ್ತದೆ. ಮೊಬೈಲ್ ಜಿಪಿಎಸ್ ಆಧರಿಸಿ ಹತ್ತಿರದ ಹೊಯ್ಸಳ ಸಿಬ್ಬಂದಿಗೆ ದೂರು ವರ್ಗಾವಣೆ ಆಗುತ್ತದೆ. ಖಾಕಿ ಸಿಬ್ಬಂದಿ 9 ನಿಮಿಷದಲ್ಲಿ ಸ್ಥಳಕ್ಕೆ ಬಂದು ರಕ್ಷಣೆ ಮಾಡಲಿದ್ದಾರೆ.

ಸ್ವವಿವರ ನಮೂದಿಸಿ: ಗೂಗಲ್ ಪ್ಲೇಸ್ಟೋರ್ ಮೂಲಕ ‘ಸುರಕ್ಷಾ ಆಪ್’ ಡೌನ್​ಲೋಡ್ ಮಾಡಿಕೊಳ್ಳಬಹುದು. ಆಪ್ ಇನ್​ಸ್ಟಾಲ್ ಆದ ಬಳಿಕ ನೋಂದಣಿಗೆ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ತುರ್ತು ಸಂದರ್ಭದಲ್ಲಿ ನಿಮಗೆ ತಕ್ಷಣ ಸ್ಪಂದಿಸುವ ಕೆಲ ವ್ಯಕ್ತಿಗಳ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಬಳಿಕವಷ್ಟೇ ಆಪ್ ಸೇವೆ ಲಭ್ಯವಾಗಲಿದೆ.

 

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...