ಕಂಪ್ಲಿ: ವಿಷಮುಕ್ತ ಆಹಾರ ಸೇವನೆಯಿಂದ ವಿಮುಕ್ತರಾಗಲು ಮನೆಗೊಂದು ಗೋವು ಸಾಕಬೇಕು ಎಂದು ಕಲ್ಯಾಣಿ ಚೌಕಿಮಠದ ಬಸವರಾಜಶಾಸ್ತ್ರಿಗಳು ಹೇಳಿದರು.
ಇದನ್ನೂ ಓದಿ:ಆಹಾರ, ಮಾನಸಿಕ ಒತ್ತಡ ಸಮತೋಲನ ಕಾಪಾಡಿಕೊಳ್ಳಿ
ಬಂಟ್ವಾಳ ತಾಲೂಕಿನ ಪುದು ಗ್ರಾಮದ ರಾಧಾ ಸುರಭಿ ಗೋಮಂದಿರ ಹಾಗೂ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಂದಿ ರಥಯಾತ್ರೆಯನ್ನು ಉದ್ಭವ ಮಹಾಗಣಪತಿ ದೇವಸ್ಥಾನದ ಬಳಿ ಗುರುವಾರ ಸ್ವಾಗತಿಸಿ ಮಾತನಾಡಿದರು.
ಗೋವುಗಳ ಸಂರಕ್ಷಣೆ ಇಲ್ಲದೆ ವಿಷವರ್ತುಲದಲ್ಲಿ ಜೀವಿಸುವಂತಾಗಿದೆ. ಗೋವುಗಳ ರಕ್ಷಣೆ, ಸಾಕಣೆಯಿಂದ ಮಾತ್ರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರು ದೇಶಿ ಗೋವು ಸಂತತಿ ರಕ್ಷಣೆಗೆ ಮುಂದಾಗಬೇಕು ಎಂದರು. ನಂದಿ ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ರಥಯಾತ್ರೆಯ ಸಂಚಾಲಕ ಧನುಷ್, ಪ್ರಮುಖರಾದ ನವೀನ್, ಪ್ರಭು, ಡಿ.ಮಂಜೇಶ್, ಹರಿಶಂಕರ್, ವಿಷ್ಣು, ಎಚ್.ನಾಗರಾಜ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ಅರವಿ ಅಮರೇಶ ಇತರರಿದ್ದರು.