ಕಂಪ್ಲಿ: ಪ್ರಸ್ತಾವಿತ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.
ಹಿಂದೆ ಹೋರಾಟಗಾರರು ಕಂಪ್ಲಿ ಒಳಗೊಂಡ ವಿಜಯನಗರ ಜಿಲ್ಲೆ ನಕಾಶೆ ತಯಾರಿಸಿ, ಹೋರಾಟ ನಡೆಸಿದ್ದಾರೆ. ಏಕಾಏಕಿ ಕಂಪ್ಲಿ ಕೈ ಬಿಟ್ಟಿರುವುದು ಆತಂಕ ಮೂಡಿಸಿದೆ. ದೂರದ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ತೆರಳಲು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯಿಸಿ, ವಿಜಯನಗರ ಜಿಲ್ಲೆ ರಚನೆಗೆ ಆರಂಭದಲ್ಲಿ ಜಿಲ್ಲೆಯ ಶಾಸಕರು ಬೆಂಬಲಿಸದಿದ್ದರೂ, ನಾನು ನೂತನ ಜಿಲ್ಲೆ ಪರವಾಗಿದ್ದೆ. ನೂತನ ಜಿಲ್ಲೆಗೆ ಪ್ರಸ್ತಾವನೆ ಸಲ್ಲಿಸದ ತಾಲೂಕುಗಳನ್ನು ಸೇರಿಸಲಾಗಿದೆ. ಈ ಕುರಿತು ಸಿಎಂ ಬಿಎಸ್ ಯಡಿಯೂರ‌್ಪ ಗಮನ ಸೆಳೆಯಲಾಗುವುದು ಎಂದರು. ಒಕ್ಕೂಟದ ಅಧ್ಯಕ್ಷ ಟಿ.ಕೋಟಿರೆಡ್ಡಿ, ಮುಖಂಡರಾದ ಜಿ.ರಾಮಣ್ಣ, ಸಿ.ವೆಂಕಟೇಶ, ಎ.ಸಿ.ದಾನಪ್ಪ, ಇಟಗಿ ವಿರೂಪಾಕ್ಷಿ, ರಮೇಶ ಶಿವಪುರ, ಬಿ.ವೆಂಕಟೇಶ, ವಿ.ವೆಂಕಟರಮಣ, ಬಿ.ದೇವೇಂದ್ರ, ಬಸವರಾಜ, ಪುರಸಭೆ ಸದಸ್ಯ ಕೆ.ಎಸ್.ಚಾಂದಬಾಷಾ ಇತರಿದ್ದರು.