More

  ಜಿಲ್ಲೆಗೆ 7 ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವ

  ವಿಕ್ರಮ ನಾಡಿಗೇರ ಧಾರವಾಡ
  ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಗಳೇ ಸಂಜೀವಿನಿ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ.
  ಸದ್ಯ ಜಿಲ್ಲೆಯಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇವೆ ಸಲ್ಲಿಸುತ್ತಿದ್ದು, 7 ಹೆಚ್ಚುವರಿ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೇಂದ್ರಗಳಿಗೆ ಒಂದಿಷ್ಟು ಗ್ರಾಮಗಳ ವ್ಯಾಪ್ತಿ ನೀಡಲಾಗಿದೆ. ಈ ಗ್ರಾಮಗಳಲ್ಲಿ ಕೆಲವು ಕೇಂದ್ರಗಳಿಂದ ದೂರವಿದೆ ಎಂಬ ಕಾರಣಕ್ಕೆ ಹೆಚ್ಚುವರಿ ಕೇಂದ್ರಗಳ ಬೇಡಿಕೆ ಬಂದಿದೆ. ಇದಲ್ಲದೆ ಪ್ರತಿ ಗ್ರಾಮಕ್ಕೆ ಒಂದರಂತೆ ಕೇಂದ್ರ ಸ್ಥಾಪಿಸುವಂತೆ ಸಹ ಗ್ರಾಮಸ್ಥರ ಆಗ್ರಹವಾಗಿದೆ. ಆದರೆ ಸಿಬ್ಬಂದಿ ಕೊರತೆ ಸೇರಿ ಇನ್ನೂ ಕೆಲ ಕಾರಣಕ್ಕೆ ಇದು ಸದ್ಯ ಕಷ್ಟ ಸಾಧ್ಯ ಎಂಬ ಮಾತು ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿದೆ.
  ಜಿಲ್ಲೆಯಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಅನೇಕ ಕಡೆಗಳಲ್ಲಿ ವೈದ್ಯಾಧಿಕಾರಿ ಸೇರಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಹೊಸ ಕೇಂದ್ರಗಳ ಜತೆಗೆ ಸಿಬ್ಬಂದಿ ನೇಮಕವೂ ಸವಾಲಿನ ಕೆಲಸವಾಗಿದೆ. ತ್ವರಿತವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಕುರಿತು ಆರೋಗ್ಯ ಇಲಾಖೆ ಸಚಿವರೂ ಭರವಸೆ ನೀಡಿದ್ದಾರೆ. ಹೀಗಾಗಿ ಕೇಂದ್ರಗಳ ಮಂಜೂರಾತಿಗಿಂತ ಪೂರ್ವ ಸಿಬ್ಬಂದಿ ನೇಮಕ ಮುಖ್ಯವಾಗಿದೆ.
  ಜಿಲ್ಲೆಯ ಆರೋಗ್ಯ ಇಲಾಖೆ ಸಲ್ಲಿಸಿದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಿ ತ್ವರಿತವಾಗಿ ಮಂಜೂರಾತಿ ನೀಡಿದಲ್ಲಿ ಜಿಲ್ಲೆಯ ಆಯಾ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
  ಎಲ್ಲಿ ಎಷ್ಟು ಕೇಂದ್ರ?: ಸದ್ಯ ಜಿಲ್ಲೆಯಲ್ಲಿ ಒಟ್ಟು 7 ಕೇಂದ್ರಗಳ ಬೇಡಿಕೆಯನ್ನು ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪೈಕಿ ಧಾರವಾಡ ತಾಲೂಕಿಗೆ 5, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿಗೆ ತಲಾ ಒಂದು ಕೇಂದ್ರದಂತೆ ಒಟ್ಟು 7 ಕೇಂದ್ರಗಳ ಪ್ರಸ್ತಾವ ಸಲ್ಲಿಕೆಯಾಗಿದೆ.

  ಜಿಲ್ಲೆಯಲ್ಲಿ ಒಟ್ಟು 7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಕೇಂದ್ರಗಳಿಗೆ ಶೀಘ್ರದಲ್ಲಿ ಮಂಜೂರಾತಿ ಸಿಗುವ ನಿರೀಕ್ಷೆ ಇದೆ.
  ಡಾ. ಶಶಿ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts