Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಹೊಸ ಉದ್ಯಮಿಗಳ ಪಾಲಿಗೆ ಬೆಂಗಳೂರು ಸ್ವರ್ಗ

Saturday, 07.07.2018, 3:04 AM       No Comments

| ವರುಣ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹೊಸದಾಗಿ ಉದ್ಯಮ ಆರಂಭಿಸುವವರ ಪಾಲಿಗೆ ಸ್ವರ್ಗ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೆಟ್ರೋ ಸಂಪರ್ಕ, ನವೋದ್ಯಮದಲ್ಲಿನ ಅವಕಾಶ ರಿಯಾಲ್ಟಿ ಕ್ಷೇತ್ರಕ್ಕೆ ವರದಾನವಾಗಿದ್ದು, ದೇಶದಲ್ಲಿಯೇ ಕಚೇರಿ ಸ್ಥಳಾವಕಾಶ ಖರೀದಿಯಲ್ಲಿ ಬೆಂಗಳೂರು ಅಗ್ರ ಸ್ಥಾನವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ, ಕಚೇರಿ ಸ್ಥಳಾವಕಾಶದಲ್ಲಿ ಬೆಂಗಳೂರು ವರ್ಷದಿಂದ ವರ್ಷಕ್ಕೆ ಶೇ.12 ಬೆಳವಣಿಗೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ದೆಹಲಿ, ಮುಂಬೈ ಸೇರಿ ದೇಶದಲ್ಲಿ ಮುಂಚೂಣಿಯಲ್ಲಿರುವ ಎಂಟು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ ನಗರದಲ್ಲಿ ಸಣ್ಣ ಕಚೇರಿ ಸ್ಥಳಗಳಿಗೆ ನಗರದ ಜನತೆಗೆ ಹೆಚ್ಚಿನ ಒಲವು ಮೂಡಿಸಿರುವುದು ಸಹ ಬೆಳಕಿಗೆ ಬಂದಿದೆ. ಮಾರಾಟವಾಗುವ 10 ಕಚೇರಿಗಳ ಪೈಕಿ 8ಕಚೇರಿಗಳು 50ಸಾವಿರ ಚ.ಅಡಿಗೂ ಕಡಿಮೆ ವಿಸ್ತೀರ್ಣದ್ದಾಗಿವೆ. ಇನ್ನು ಕಚೇರಿ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.9 ಬಾಡಿಗೆ ಬೆಳವಣಿಗೆ ದಾಖಲಾಗಿದೆ.

ವರವಾದ ಮೆಟ್ರೋ ಸಂಪರ್ಕ: ನಮ್ಮ ಮೆಟ್ರೋ ಸಾಗಿದಲ್ಲೆಲ್ಲ ರಿಯಲ್ ಎಸ್ಟೇಟ್ ಕ್ಷೇತ್ರ ವೃದ್ಧಿಸುತ್ತಿದೆ. ಮೆಟ್ರೋ ಸಂಪರ್ಕವಿರುವ ಪ್ರದೇಶಗಳು ಹೆಚ್ಚಿನ ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿ ಗುರುತಿಸಿಕೊಳ್ಳಲಾರಂಭಿಸಿದೆ. ಕನಕಪುರ ರಸ್ತೆ, ಸರ್ಜಾಪುರ ರಸ್ತೆ, ದೇವನಹಳ್ಳಿ ಹಾಗೂ ವೈಟ್​ಫೀಲ್ಡ್​ಗೆ ಸಹ ಮೆಟ್ರೋ ಸಂಪರ್ಕದ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ಸಹ ರಿಯಾಲ್ಟಿ ಕ್ಷೇತ್ರ ಇನ್ನಷ್ಟು ಗರಿಗೆದರಲಿದೆ. ಇನ್ನು ಸರ್ಕಾರ ದೇವನಹಳ್ಳಿ ಭಾಗದಲ್ಲಿ ಐಟಿ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ವಣಕ್ಕೆ ಅಡಿಗಲ್ಲು ಹಾಕಿದೆ. ಬಾಗಲೂರು ಭಾಗದಲ್ಲೂ ಐಟಿ ಕಂಪನಿಗಳು, ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗುವ ನಿರೀಕ್ಷೆಯಿದೆ. ಈ ಭಾಗಕ್ಕೆ 2021ರೊಳಗೆ ಮೆಟ್ರೋ ಸಂಪರ್ಕ ಮತ್ತು ಯಶವಂತಪುರದಿಂದ ಯಲಹಂಕ ಮಾರ್ಗವಾಗಿ ಕೆಐಎಗೆ ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುವ ಗುರಿಯನ್ನೂ ಸರ್ಕಾರ ಹೊಂದಿದೆ. ಈ ಎಲ್ಲಾ ಯೋಜನೆ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿವೆ.

ಸ್ಥಳಾವಕಾಶ ವಿಸ್ತರಣೆ

2020ರ ವೇಳೆಗೆ ರಾಜ್ಯದಲ್ಲಿ 20ಸಾವಿರ ತಂತ್ರಜ್ಞಾನ ಆಧರಿತ ಸ್ಟಾರ್ಟ್​ಅಪ್ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 6 ಸಾವಿರ ಉತ್ಪಾದನಾ ಸ್ಟಾರ್ಟ್​ಅಪ್ ಒಳಗೊಳ್ಳಲಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಕಚೇರಿ ಬೇಡಿಕೆಯಲ್ಲಿ ನವೋದ್ಯಮ ಪ್ರಮುಖ ಸ್ಥಾನದಲ್ಲಿದೆ. ಕಳೆದ ವರ್ಷ ಆಫೀಸ್ ಪ್ರಾಪರ್ಟಿ ಮಾರುಕಟ್ಟೆ 1.14ಕೋಟಿ ಚದರ ಅಡಿಗೂ ಅಧಿಕ ವ್ಯಾಪಾರ ವಹಿವಾಟು ನಡೆದಿದ್ದು, ಈ ಪ್ರಮಾಣ ಮುಂದಿನ ವರ್ಷಾಂತ್ಯಕ್ಕೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಇದೇ ವೇಳೆ ವಸತಿ ಜಾಗಗಳ ಮೌಲ್ಯದಲ್ಲಿ ಅಲ್ಪ ಕುಸಿತ ಕಂಡಿದ್ದು, ಕಚೇರಿ ಸ್ಥಳಾವಕಾಶದ ಬೆಲೆಯಲ್ಲಿ ಏರಿಕೆಯಾಗಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಕಚೇರಿ ಮತ್ತು ವಾಣಿಜ್ಯ ಸ್ಥಳಾವಕಾಶ ಮಾರುಕಟ್ಟೆ ತನ್ನ ಬಾಹುಗಳನ್ನು ಇನ್ನಷ್ಟು ದೂರ ವಿಸ್ತರಿಸುವ ಜತೆಗೆ ಡೆವಲಪರ್​ಗಳಿಗೆ ಲಾಭದ ಮೂಲವಾಗಲಿದೆ.

ಸೂಕ್ಷ್ಮ ಮಾರುಕಟ್ಟೆಗಳಾದ ಸರ್ಜಾಪುರ ರಸ್ತೆ, ಕನಕಪುರ ರಸ್ತೆ, ಥಣಿಸಂದ್ರ ಮತ್ತು ದೇವನಹಳ್ಳಿ ಪ್ರದೇಶ ಖರೀದಿದಾರರ ಪ್ರಮುಖ ಆಯ್ಕೆಗಳಾಗಿವೆ. ಮೆಟ್ರೋ ಯೋಜನೆ ವೇಗದಲ್ಲಿ ಸಾಗುತ್ತಿರುವುದರಿಂದ ವೈಟ್​ಫೀಲ್ಡ್​ನಲ್ಲಿಯೂ ಕೂಡ ವಹಿವಾಟು ವೇಗ ಹೆಚ್ಚಳವಾಗಿದೆ.

| ಶಂತನು ಮಜುಂದಾರ್, ನೈಟ್ ಫ್ರಾಂಕ್ ಬೆಂಗಳೂರು ಶಾಖಾ ನಿರ್ದೇಶಕ

Leave a Reply

Your email address will not be published. Required fields are marked *

Back To Top