21.7 C
Bengaluru
Tuesday, January 21, 2020

ಫ್ಲ್ಯಾಟ್ ಖರೀದಿಗೆ ಬಿಡಿಎ ಭರ್ಜರಿ ಕೊಡುಗೆ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

| ವರುಣ ಹೆಗಡೆ

ಸ್ವಂತ ಸೂರು ಹೊಂದಬೇಕೆಂಬ ಕನಸು ಹೊತ್ತು ಕುಳಿತವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭರ್ಜರಿ ಕೊಡುಗೆ ನೀಡಿದೆ. ರಿಯಾಯಿತಿ ದರದ ಮೂಲಕ ಕನಸಿನ ಮನೆಯನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ನಗರದ ಜನತೆಗೆ ಒದಗಿ ಬಂದಿದೆ.

ನಗರದ ವಿವಿಧ ಪ್ರದೇಶಗಳಲ್ಲಿ ನಿರ್ವಿುಸಿರುವ 1,800 ಫ್ಲ್ಯಾಟ್​ಗಳಿಗೆ ಬಿಡಿಎ ಶೇ.10ರವರೆಗೂ ರಿಯಾಯಿತಿ ಘೋಷಿಸಿದೆ. ಇದರಿಂದ ಮನೆ ಖರೀದಿಯಿಂದ ಆಗುವ ಹೊರೆಯಿಂದ ಸಹ ತಕ್ಕ ಮಟ್ಟಿಗೆ ಪಾರಾಗಲು ಸಾಧ್ಯವಾಗುತ್ತದೆ. ಮೈಸೂರು ರಸ್ತೆಯ ಕಣಮಿಣಿಕೆಯಲ್ಲಿ 1,000, ಉಲ್ಲಾಳ ಬಳಿಯ ಕೊಮ್ಮಘಟ್ಟದಲ್ಲಿ 500 ಹಾಗೂ ಕೆ.ಆರ್.ಪುರ ಬಳಿ ಇರುವ ದೊಡ್ಡಬನಹಳ್ಳಿಯಲ್ಲಿ 300 ಮನೆಗಳು ಖರೀದಿಗೆ ಯೋಗ್ಯವಾಗಿವೆ. ಆಯಾ ಪ್ರದೇಶ ಹಾಗೂ ಫ್ಲ್ಯಾಟ್ ಅಳತೆಗೆ ಅನುಗುಣವಾಗಿ ಎರಡು ಕೊಠಡಿಗಳ ಫ್ಲ್ಯಾಟ್​ಗೆ 25ರಿಂದ 32 ಲಕ್ಷ ರೂ.ವರೆಗೆ ಬಿಡಿಎ ಬೆಲೆ ನಿಗದಿ ಪಡಿಸಿದೆ.

ಶೇ.10ರವರೆಗೆ ರಿಯಾಯಿತಿ: ಕಣಮಿಣಿಕೆ, ಕೊಮ್ಮಘಟ್ಟ ಹಾಗೂ ದೊಡ್ಡಬನಹಳ್ಳಿಯಲ್ಲಿ ಉಳಿದಿರುವ 2 ಕೊಠಡಿಗಳ ಮನೆ ಮಾರಾಟಕ್ಕೆ ಬಿಡಿಎ ಶೇ.5ರಿಂದ 10 ರಿಯಾಯಿತಿ ಘೋಷಿಸಿದೆ. ಒಂದು ಮನೆ ಕೊಂಡರೆ ಶೇ.5 ಹಾಗೂ 10ಕ್ಕೂ ಹೆಚ್ಚು ಮನೆಗಳನ್ನು ಗುಂಪಾಗಿ ಕೊಂಡರೆ ಶೇ.10 ರಿಯಾಯಿತಿ ನೀಡಲಿದೆ. ಒಂದು ಹಾಗೂ 3 ಕೊಠಡಿಗಳ ಮನೆಗೆ ಯಾವುದೇ ರಿಯಾಯಿತಿ ಇರುವುದಿಲ್ಲ.

ಎರಡು ಕೊಠಡಿಗಳ ಮನೆಗಳು ಅಧಿಕ

ತುಮಕೂರು ರಸ್ತೆ ದಾಸನಪುರ ಹೋಬಳಿಯಲ್ಲಿ ಬಿಡಿಎ ಈ ಹಿಂದೆ ನಿರ್ವಿುಸಿದ 452 ವಿಲ್ಲಾಗಳು ಮಾರಾಟವಾಗಿವೆ. ಇದೇ ಹೋಬಳಿಯ ಹೊನ್ನಿಗೆರಿಯಲ್ಲಿ ಮತ್ತೆ 323 ವಿಲ್ಲಾ ಹಾಗೂ ಅಪಾರ್ಟ್ ಮೆಂಟ್ ಸಮುಚ್ಚಯವನ್ನು ಬಿಡಿಎ ನಿರ್ವಿುಸಿದೆ. ವಿಲ್ಲಾಗಳಿಗೆ ಜನರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಹೀಗಾಗಿ ಇನ್ನಷ್ಟು ವಿಲ್ಲಾಗಳನ್ನು ನಿರ್ವಿುಸಲು ಬಿಡಿಎ ಮುಂದಾಗಿದೆ. ಬಿಡಿಎ ರಿಯಾಯಿತಿ ನೀಡಲು ಮುಖ್ಯ ಕಾರಣ 2 ಕೊಠಡಿಗಳ ಮನೆ ಮಾರಾಟ ಹೆಚ್ಚಿಸುವುದು. ಅಷ್ಟಕ್ಕೂ ಕಣಮಿಣಿಕೆ, ಕೊಮ್ಮಘಟ್ಟ ಹಾಗೂ ದೊಡ್ಡಬನಹಳ್ಳಿಯಲ್ಲಿ ಹೆಚ್ಚಾಗಿ ಎರಡು ಕೊಠಡಿಗಳ ಮನೆಗಳಿವೆ.

2 ಕೊಠಡಿಗಳ ಮನೆಗಳ ಮಾರಾಟದ ಮೇಲೆ ಬಿಡಿಎ ಶೇ.5ರಿಂದ 10ರವರೆಗೆ ರಿಯಾಯಿತಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಖರೀದಿಗೆ ಗ್ರಾಹಕರು ಮುಂದಾಗುವ ನಿರೀಕ್ಷೆ ಹೊಂದಲಾಗಿದೆ.

| ಎನ್.ಜಿ. ಗೌಡಯ್ಯ ಬಿಡಿಎ ಇಂಜಿನಿಯರ್

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...