21.7 C
Bengaluru
Tuesday, January 21, 2020

ಗ್ರಾಹಕರ ರಕ್ಷಣೆಗೆ ರೇರಾದಿಂದ ಅಗ್ರಿಮೆಂಟ್ ಆಫ್ ಸೇಲ್

Latest News

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಮುಂಬೈ ಸಿದ್ಧಿವಿನಾಯಕನಿಗೆ 35 ಕಿಲೋ ಚಿನ್ನ | ದೆಹಲಿ ಮೂಲದ ಉದ್ಯಮಿಯ ಕಾಣಿಕೆಯ ಮೌಲ್ಯ 14 ಕೋಟಿ ರೂಪಾಯಿ!

ಮುಂಬೈ: ಕಳೆದ 200ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಮುಂಬೈ ಸಿದ್ಧಿವಿನಾಯಕ ದೇವರಿಗೆ ಇದೇ ಮೊದಲ ಬಾರಿಗೆ 35 ಕಿಲೋ ಚಿನ್ನ ಕಾಣಿಕೆ ರೂಪದಲ್ಲಿ...

| ಅಭಿಲಾಷ್ ಪಿಲಿಕೂಡ್ಲು

ಪ್ರಾಪರ್ಟಿ ಖರೀದಿ ಸಂದರ್ಭದಲ್ಲಿ ಗ್ರಾಹಕರಿಗೆ ಪೂರ್ಣ ಅಧಿಕಾರ, ಹಕ್ಕು ನೀಡುವ ನಿಟ್ಟಿನಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ‘ಅಗ್ರಿಮೆಂಟ್ ಆಫ್ ಸೇಲ್ಸ್’(ಎಒಎಸ್) ಮಾದರಿಯನ್ನು ಶೀಘ್ರ ಬಿಡುಗಡೆಗೊಳಿಸಲಿದೆ. ಪ್ರಾಪರ್ಟಿ ಖರೀದಿ ಸಂದರ್ಭದಲ್ಲಿ ಗ್ರಾಹಕರಿಗೆ ಬಿಲ್ಡರ್ಸ್ ಹಲವು ನಿರೀಕ್ಷೆಗಳನ್ನು ಹುಟ್ಟಿಸುತ್ತಾರೆ. ತಮ್ಮ ಪ್ರಾಪರ್ಟಿ ಇಷ್ಟು ಸಮಯದಲ್ಲಿ ಪೂರ್ಣಗೊಳ್ಳಲಿದೆ, ಪಾರ್ಕ್, ರ್ಪಾಂಗ್ ಹೀಗೆ ನಾನಾ ಸೌಲಭ್ಯಗಳಿರಲಿವೆ, ಪ್ರಾಪರ್ಟಿ ಇಷ್ಟು ವಿಸ್ತೀರ್ಣದಲ್ಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡುತ್ತಾರೆ. ಆದರೆ ಖರೀದಿ ಸಂದರ್ಭದಲ್ಲಿ ನೋಂದಣಿಗೆ ಅಗತ್ಯವಾಗಿರುವ ‘ಅಗ್ರಿಮೆಂಟ್ ಆಫ್ ಸೇಲ್ಸ್’ ಮಾದರಿಯಲ್ಲಿ ಮೇಲಿನ ಕೆಲ ಅಂಶಗಳನ್ನು ಕೆಲ ಬಿಲ್ಡರ್ಸ್ ನಮೂದಿಸುವುದೇ ಇಲ್ಲ. ಹಲವು ಬಿಲ್ಡರ್ಸ್ ತಮ್ಮದೇ ಆದ ಮಾದರಿಯ ಎಒಎಸ್ ಹೊಂದಿದ್ದಾರೆ. ಈ ಮೂಲಕ ಗ್ರಾಹಕರಿಂದ ಕೆಲ ಮಾಹಿತಿಯನ್ನು ಮುಚ್ಚಿಡಲಾಗುತ್ತಿದ್ದು, ಖರೀದಿ ನಂತರದಲ್ಲಿ ಕೊಂಚ ಸಮಸ್ಯೆಯಾದರೂ ಗ್ರಾಹಕರ ರಕ್ಷಣೆಗೆ ಸೂಕ್ತ ಅಸ್ತ್ರವೇ ಇಲ್ಲದಂತಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಪ್ರತ್ಯೇಕ ಎಒಎಸ್ ರೂಪಿಸಲಿದ್ದು, ಎಲ್ಲ ಬಿಲ್ಡರ್ಸ್ ಇದೇ ಮಾದರಿ ಅನುಸರಿಸುವುದು ಕಡ್ಡಾಯವಾಗಲಿದೆ.

ವಿಳಂಬವಾದರೆ ಎಒಎಸ್ ಅಸ್ತ್ರ: ಆಸ್ತಿ ಖರೀದಿಸುವ ಗ್ರಾಹಕರಿಗೆ ರಕ್ಷಣೆಗೆ ನಿಲ್ಲುವುದೇ ಈ ನಿಯಂತ್ರಣ ಪ್ರಾಧಿಕಾರ. ಖರೀದಿ ಸಂದರ್ಭದಲ್ಲಿ ಅಥವಾ ನಂತರ ಗ್ರಾಹಕರು ಆಸ್ತಿ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಇದಕ್ಕೆ ಪೂರಕವಾಗಿ ಎಒಎಸ್ ಗ್ರಾಹಕರ ಬೆನ್ನಿಗೆ ನಿಲ್ಲಲಿದೆ. ‘ರೇರಾ’ರೂಪಿಸುವ ಎಒಎಸ್ ಮಾದರಿಯಲ್ಲಿ ಬಿಲ್ಡರ್ ಕಾರ್ಪೆಟ್ ಏರಿಯಾ, ಸೂಪರ್ ಬಿಲ್ಟ್ ಅಪ್ ಏರಿಯಾ, ಪ್ರಾಜೆಕ್ಟ್ ಪ್ರದೇಶದಲ್ಲಿರುವ ಸೌಲಭ್ಯ, ಯೋಜನೆ ಪೂರ್ಣಗೊಳ್ಳುವ ಅವಧಿ ಸೇರಿ ಪ್ರತಿ ಮಾಹಿತಿಯನ್ನೂ ತಪ್ಪದೇ ದಾಖಲಿಸಬೇಕು. ಇಂತಿಷ್ಟೇ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಬಿಲ್ಡರ್ ಎಒಎಸ್​ನಲ್ಲಿ ನಮೂದಿಸಿರುತ್ತಾನೆ. ಈ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳದಿದ್ದರೆ ಗ್ರಾಹಕ ‘ರೇರಾ’ ಮೆಟ್ಟಿಲೇರಬಹುದು. ಇದೊಂದೇ ಅಲ್ಲ, ಎಒಎಸ್​ನಲ್ಲಿ ನಮೂದಿಸಿದಂತೆ ಸೌಲಭ್ಯ ದೊರೆಯದೇ ಹೋದಲ್ಲೂ ಗ್ರಾಹಕ ಪ್ರಾಧಿಕಾರದ ಮೊರೆ ಹೋಗಬಹುದು.

ದೂರು ದಾಖಲು ಹೇಗೆ?: ಒಂದು ಸಾವಿರ ರೂ. ಪಾವತಿಸಿ ನೇರವಾಗಿ ‘ರೇರಾ’ ಕರ್ನಾಟಕ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲೇ ದೂರು ದಾಖಲಿಸಿ, ತನಗಾದ ಅನ್ಯಾಯ, ಸಮಸ್ಯೆ ನಮೂದಿಸಬಹುದು. ಇದನ್ನು ‘ರೇರಾ’ ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ. ಇಂತಹ ಸಂದರ್ಭ ಎದುರಾದಲ್ಲಿ ಅದು ಸಿದ್ಧಪಡಿಸಿದ ಎಒಎಸ್ ಮಾದರಿಯೇ ಅಧಿಕೃತ ಎಂದೆನಿಸಿಕೊಳ್ಳಲಿದ್ದು, ಗ್ರಾಹಕರಿಗೆ ಪಕ್ಕಾ ನ್ಯಾಯ ದೊರೆಯಲಿದೆ.

ರೇರಾ ನೋಂದಣಿ ಖಚಿತಪಡಿಸಿಕೊಳ್ಳಿ

ಬಿಲ್ಡರ್ಸ್ ತಮ್ಮ ಯೋಜನೆಗಳನ್ನು ರೇರಾದಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಹೀಗಾಗಿ ಗ್ರಾಹಕ ತಾನು ಪ್ರಾಪರ್ಟಿ ಖರೀದಿ ಮುನ್ನ ಯೋಜನೆ ‘ರೇರಾ’ದಡಿ ನೋಂದಣಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಬಿಲ್ಡರ್ಸ್ ದಾಖಲೆಗಳನ್ನು ಪರಿಶೀಲಿಸಲಿಸುವ ‘ರೇರಾ’, ಕರ್ನಾಟಕದಲ್ಲಿ ಪ್ರಸ್ತುತ 2,011 ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಈ ಯೋಜನೆಗಳು ಕಾನೂನುಬದ್ಧವಾಗಿವೆ. 155 ಯೋಜನೆಗಳ ಪರಿಶೀಲನೆ ನಡೆಯುತ್ತಿದ್ದು, 211 ಯೋಜನೆಗಳ ಬಿಲ್ಡರ್ಸ್ ಸಲ್ಲಿಸಿರುವ ದಾಖಲೆಗಳ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದೆ. ಹೀಗಾಗಿ ಈ ಯೋಜನೆಗಳ ಡೆವಲಪರ್ಸ್​ಗಳಿಗೆ ದಾಖಲೆಗಳನ್ನು ಮತ್ತೊಮ್ಮೆ ಸಲ್ಲಿಸುವಂತೆ ಸೂಚಿಸಿದೆ. ಕಾನೂನುಬದ್ಧವಾಗಿರದ 169 ಯೋಜನೆಗಳನ್ನು ರೇರಾ ಕರ್ನಾಟಕ ಅಸಿಂಧುಗೊಳಿಸಿದೆ. ಇವುಗಳ ಪೂರ್ಣ ವಿವರವನ್ನು ಪ್ರಾಧಿಕಾರ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ವೆಬ್​ಸೈಟ್: https://rera.karnataka.gov.in/home

ನಿಯಂತ್ರಣಕ್ಕೆ ಪ್ರಾಧಿಕಾರ

‘ರೇರಾ’ ಜಾರಿ ಬಳಿಕ ಕಾಯ್ದೆ ಅನುಷ್ಠಾನಕ್ಕಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚಿಸಲಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ತರುವ ನಿಟ್ಟಿನಲ್ಲಿ ಈ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಪರ್ಟಿ ಖರೀದಿಗೂ ಮುನ್ನ ಯಾವೆಲ್ಲ ಯೋಜನೆಗಳು ಕಾನೂನುಬದ್ಧವಾಗಿದೆ ಎನ್ನುವುದರ ಮಾಹಿತಿಯನ್ನು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜನರ ಮುಂದಿರಿಸುತ್ತಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಮ 2017ರ ಅನ್ವಯ ಬಿಲ್ಡರ್ಸ್ ತಮ್ಮೆಲ್ಲಾ ಯೋಜನೆಗಳನ್ನು ನೋಂದಣಿಗೊಳಿಸುವುದು ಕಡ್ಡಾಯವಾಗಿದೆ. ನೋಂದಣಿ ಸಂದರ್ಭದಲ್ಲಿ ಯೋಜನೆ ರೂಪು ರೇಷೆ, ವೆಚ್ಚ, ಪ್ರಮಾಣ ಪತ್ರಗಳು, ಅಗ್ನಿ ಸುರಕ್ಷತೆ ಪ್ರಮಾಣ ಪತ್ರ, ಜಮೀನು ಕರಾರು ಒಪ್ಪಂದ ಪತ್ರ ಸೇರಿ ಎಲ್ಲ ದಾಖಲೆಗಳನ್ನು ಆನ್​ಲೈನ್ ಮೂಲಕ ಸಲ್ಲಿಸಲಾಗುತ್ತದೆ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...