ದೊಡ್ಡಬಳ್ಳಾಪುರ ಹೆದ್ದಾರಿ ಮೇಲೆ ಹೂಡಿಕೆದಾರರ ಕಣ್ಣು

| ಶಿವರಾಜ ಎಂ.

ರಾಜ್ಯ ರಾಜಧಾನಿಯಿಂದ ಕೇವಲ 42 ಕಿ.ಮೀ ಅಂತರದಲ್ಲಿರುವ ದೊಡ್ಡಬಳ್ಳಾಪುರ ಈಗ ರಿಯಲ್​ಎಸ್ಟೇಟ್ ಉದ್ಯಮದಲ್ಲಿ ಸಂಚಲನ ಹುಟ್ಟುಹಾಕಿದೆ. ಬೆಂಗಳೂರು-ಹಿಂದುಪುರ ರಾಜ್ಯ ಹೆದ್ದಾರಿಯ ಆಸುಪಾಸಿನ ಜಮೀನಿಗೆ ಚಿನ್ನದ ಬೆಲೆ ಬಂದಿದೆ. ದೊಡ್ಡ ದೊಡ್ಡ ಬಿಲ್ಡರ್​ಗಳು ರಾಜ್ಯ ಹೆದ್ದಾರಿ ಸುತ್ತಮುತ್ತಲಿನ ಜಮೀನಿನಲ್ಲಿ ನಿವೇಶನ, ಅಪಾರ್ಟ್​ವೆುಂಟ್​ಗಳ ನಿರ್ವಣಕ್ಕೆ ಮುಗಿಬೀಳುತ್ತಿರುವುದು ಭವಿಷ್ಯದಲ್ಲಿ ದೊಡ್ಡಬಳ್ಳಾಪುರ ರಸ್ತೆ ರಿಯಾಲ್ಟಿಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

ಉದ್ಯೋಗ ಸೃಷ್ಟಿ: ರೇಷ್ಮೆ ಸೀರೆ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ದೊಡ್ಡಬಳ್ಳಾಪುರ ಹಳ್ಳಿಗಾಡುಗಳಿಂದ ಆವೃತ್ತವಾಗಿರುವು ದೊಡ್ಡಪಟ್ಟಣ. ಅನೇಕ ಕುಟುಂಬ ವಿದ್ಯುತ್ ಲೂಮ್್ಸ ಉದ್ಯಮದಲ್ಲಿ ತೊಡಗಿಕೊಂಡಿದ್ದು, ರೇಷ್ಮೆ ಉದ್ಯಮ ಸಾವಿರಾರು ಕುಟುಂಬಕ್ಕೆ ಆಸರೆಯಾಗಿದೆ. ದೊಡ್ಡಬಳ್ಳಾಪುರಕ್ಕೆ ಸಮೀಪದಲ್ಲಿರುವ ಬಾಶೆಟ್ಟಿಹಳ್ಳಿ, ಮಾರಸಂದ್ರ, ರಾಜಾನುಕುಂಟೆ ಪ್ರದೇಶಗಳಲ್ಲಿ ಕೈಗಾರಿಕೆಗಳು, ಕಂಪನಿಗಳು ತೆರೆದುಕೊಳ್ಳುತ್ತಿದ್ದು, ದೊಡ್ಡ ಮಟ್ಟದಲ್ಲಿ ಉದ್ಯೋಗಸೃಷ್ಟಿಗೆ ಕಾರಣವಾಗಿದೆ. ರಾಜ್ಯ ರಾಜಧಾನಿಯಿಂದ ಉದ್ಯೋಗ ಅರಸಿ ನೆಲೆಕಂಡುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ನಿವೇಶನ, ಪ್ಲಾಟ್​ಗಳಿಗೆ ಬೇಡಿಕೆ ಕುದುರಿದೆ, ಬಾಡಿಗೆ ಮನೆಗಳಿಗೂ ಡಿಮ್ಯಾಂಡ್ ಕುದುರಿದ್ದು, ರಿಯಾಲ್ಟಿ ಕ್ಷೇತ್ರದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಜವಳಿ ಉದ್ಯಾನ: ದೊಡ್ಡಬಳ್ಳಾಪುರ ಬಳಿ ಇರುವ ಜವಳಿ ಉದ್ಯಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜವಳಿ ಕಾರ್ಖಾನೆಗಳು ಕೈಬೀಸಿ ಕರೆಯುತ್ತಿವೆ.ಭಾರತದ ದೊಡ್ಡ ಐಟಿ ಪ್ರದೇಶವೆಂದು ಗುರುತಿಸಿಕೊಳ್ಳುತ್ತಿದ್ದು, ರಾಜ್ಯದಲ್ಲೇ ಅತಿ ದೊಡ್ಡ ಮೂಲಸೌಕರ್ಯ ಯೋಜನೆಗಳ ಪ್ರದೇಶ ಎಂಬ ಹೆಸರಿಗೆ ಪಾತ್ರವಾಗಿದೆ. ಇನ್ನೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ಯಮದಿಂದ ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಆಸರೆಯಾಗಿದೆ. ಇದೇ ಕಾರಣಕ್ಕೆ ಬಾಶೆಟ್ಟಿಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಸತಿ ಪ್ರದೇಶಗಳು ಹೆಚ್ಚುತ್ತಿದ್ದು, ನಿವೇಶನ, ಪ್ಲಾ್ಯಟ್​ಗಳ ನಿರ್ವಣಕ್ಕೆ ಶರವೇಗ ದೊರೆತಿದೆ. ರಾಜ್ಯದ ಇತರ ತಾಲೂಕುಗಳಿಗೆ ಹೋಲಿಸಿದರೆ ದೊಡ್ಡಬಳ್ಳಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಎನಬಹುದು. ಇದೇ ಕಾರಣಕ್ಕೆ ಕೃಷಿಭೂಮಿ ವಸತಿ ಪ್ರದೇಶಗಳಾಗಿ ಬದಲಾಗುತ್ತಿವೆ. ಇದನ್ನೆ ಬಂಡವಾಳ ಮಾಡಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ವಸತಿಸಮುಚ್ಛಯಗಳ ನಿರ್ವಣಕ್ಕೆ ಮುಂದಾಗಿದ್ದಾರೆ.

ಪುಣ್ಯಕ್ಷೇತ್ರಗಳು: ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇಗುಲ ಜಗತ್ಪ್ರಸಿದ್ದ ಪುಣ್ಯಕ್ಷೇತ್ರವಾಗಿದೆ. ವಿಶೇಷ ದಿನಗಳನ್ನು ಹೊರತುಪಡಿಸಿದರೂ ಪ್ರತಿನಿತ್ಯ ಸಾವಿರಾರು ಭಕ್ತರು ಬಂದುಹೋಗುವ ಪುಣ್ಯಕ್ಷೇತ್ರವಾಗಿರುವುದು ದೊಡ್ಡಬಳ್ಳಾಪುರಕ್ಕೆ ಖ್ಯಾತಿ ತಂದುಕೊಟ್ಟಿದೆ. ಇದೇ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ನಂದಿಬೆಟ್ಟ, ಕಣವೆಬಸವಣ್ಣ ಮತ್ತಿತರ ಪುಣ್ಯಕ್ಷೇತ್ರಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ಸಂಪರ್ಕ ರಸ್ತೆಗಳು: ನಗರದ ಹೊರವಲದಲ್ಲಿ ಹೂಡಿಗೆ ಮಾಡಲು ಬಯಸುವವರಿಗೆ ಈ ರಾಜ್ಯ ಹೆದ್ದಾರಿ ಸೂಕ್ತವಾಗಿದೆ ಎಂಬುದು ರಿಯಲ್ ಎಸ್ಟೇಟ್ ಪಂಡಿತರ ಅಭಿಮತವಾಗಿದೆ. ದೊಡ್ಡಬಳ್ಳಾಪುರ ರಸ್ತೆಗೆ ಹೊಂದಿಕೊಂಡಂತಿರುವ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ತರಲು ಪ್ರಮುಖ ಕಾರಣವಾಗಿದೆ. ಅಲ್ಲದೆ ನೆಲಮಂಗಲ ಎನ್​ಎಚ್75 ಹೆದ್ದಾರಿಯಿಂದ ಕೇವಲ 61 ಕಿ.ಮೀ ದೂರದಲ್ಲಿ ದೊಡ್ಡಬಳ್ಳಾಪುರ ತಲುಪಬಹುದು. ಚಿಕ್ಕಬಳ್ಳಾಪುರ, ಹಿಂದುಪುರಗಳಿಗೆ ಹತ್ತಿರದಲ್ಲಿರುವ ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿ ಹೂಡಿಕೆದಾರರಿಗೆ ಶುಕ್ರದೆಸೆ ತರಲಿದೆ. ಹೆದ್ದಾರಿಯುದ್ದಕ್ಕೂ ಐಟಿ ಪಾರ್ಕ್​ಗಳು, ಸ್ಪಾ, ರೆಸಾರ್ಟ್​ಗಳು ತಲೆ ಎತ್ತಿದ್ದು, ಆಸ್ತಿಖರೀದಿದಾರ ಕಣ್ಣು ಈಗ ರಾಜ್ಯ ಹೆದ್ದಾರಿ ಸುತ್ತಲೇ ಗಿರಕಿ ಹೊಡೆಯುತ್ತಿದೆ.

Leave a Reply

Your email address will not be published. Required fields are marked *