ವಿಜಯವಾಣಿ, ದಿಗ್ವಿಜಯ 24×7 ನ್ಯೂಸ್ ಪ್ರಾಪರ್ಟಿ ಎಕ್ಸ್​ಪೋಗೆ 10 ಸಾವಿರ ಜನ ಭೇಟಿ

<< ಗ್ರಾಹಕರಿಂದ ನಿರೀಕ್ಷೆ ಮೀರಿದ ಸ್ಪಂದನೆ ; ಎರಡು ದಿವಸ ನಡೆದ ಎಕ್ಸ್​ಪೋ>>

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಮನೆ, ಹೂಡಿಕೆಗೆ ನಿವೇಶನ, ಫ್ಲ್ಯಾಟ್​ಗಳನ್ನು ಹೊಂದುವ ಕನಸನ್ನು ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ರಿಯಲ್​ಎಸ್ಟೇಟ್ ಎಕ್ಸ್​ಪೋ ಸಾಕಾರಗೊಳಿಸಿತು. ಮಾ.23 ಮತ್ತು 24ರಂದು ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ಎಕ್ಸ್​ಪೋಗೆ ಎರಡೂ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 7 ಗಂಟೆವರೆಗೆ ನಾಗರಿಕರು ಭೇಟಿ ನೀಡಿ, ಪ್ರತಿಷ್ಠಿತ ಬಿಲ್ಡರ್​ಗಳು, ಡೆವಲಪರ್ ಸಂಸ್ಥೆಗಳಿಂದ ಮಾಹಿತಿ ಪಡೆದರು. ಅಲ್ಲದೆ, ನಿವೇಶನ ಖರೀದಿಸಿದ ಹಲವು ಅದೃಷ್ಟಶಾಲಿಗಳು ಚಿನ್ನದ ನಾಣ್ಯ ಪಡೆದು ಸಂತಸ ವ್ಯಕ್ತಪಡಿಸಿದರು.

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್​ನಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಿಯಲ್​ಎಸ್ಟೇಟ್ ಎಕ್ಸ್​ಪೋಗೆ ಭಾನುವಾರ ತೆರೆಬಿದ್ದಿದೆ. ಎರಡು ದಿನ ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ಎಕ್ಸ್​ಪೋಗೆ 10 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದು, ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

ಭಾನುವಾರ ಬೆಳಗ್ಗೆಯಿಂದಲೇ ಜನ ಎಕ್ಸ್​ಪೋದಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು. ಅನೇಕರು ಕುಟುಂಬಸ್ಥರೊಂದಿಗೆ ಆಗಮಿಸಿ ನಿವೇಶನ, ಫ್ಲ್ಯಾಟ್​ಗಳನ್ನು ಖರೀದಿಸಿದರು. ಬಹುಪಾಲು ಜನ ಎಕ್ಸ್​ಪೋದಲ್ಲಿ ಮುಂಗಡ ಪಾವತಿಸಿ ನಿವೇಶನ ನೋಂದಣಿ ಕುರಿತು ಮಾತುಕತೆ ನಡೆಸಿದರು.

ಎಕ್ಸ್​ಪೋಗೆ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಬಿಲ್ಡರ್​ಗಳು ಸಹ ಖುಷಿಯಾದರು. ನಮ್ಮ ನಿರೀಕ್ಷೆಗೂ ಮೂರ್ನಾಲ್ಕು ಪಟ್ಟು ಮೀರಿದ ಸ್ಪಂದನೆ ಸಿಕ್ಕಿದೆ. ಎಕ್ಸ್​ಪೋಗಾಗಿಯೇ ವಿಶೇಷ ಕೊಡುಗೆಗಳನ್ನು ನೀಡಲಾಗಿತ್ತು. ಜನರು ಖರೀದಿಗೆ ಆಸಕ್ತಿ ತೋರಿಸಿರುವುದು ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ.

ಖರೀದಿಗೆ ಆಸಕ್ತಿ: ಎಕ್ಸ್​ಪೋಗೆ ಭೇಟಿ ನೀಡಿದ ಬಹುಪಾಲು ಗ್ರಾಹಕರು ಖರೀದಿಗೆ ಆಸಕ್ತಿ ತೋರಿರುವುದು ವಿಶೇಷ. ಹೂಡಿಕೆ ಅಥವಾ ವಾಸಕ್ಕೆ ಮನೆ, ಸೈಟ್ ಖರೀದಿಸಲೇಬೇಕೆಂದು ನಿರ್ಧರಿಸಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೈಗೆಟಕುವ ದರ, ಬಿಡಿಎ, ಬಿಎಂಆರ್​ಡಿಎ, ರೇರಾ ಮತ್ತು ಖಾತಾ ಹೊಂದಿರುವ ನಿವೇಶನಗಳೇ ಹೆಚ್ಚಾಗಿದ್ದದ್ದು ಗ್ರಾಹಕರನ್ನೂ ಖುಷಿಪಡಿಸಿತು.

ಎಕ್ಸ್​ಪೋಗಾಗಿ ಅತ್ಯಂತ ಕಡಿಮೆ ದರದಲ್ಲಿ ಕೆಲವು ಬಿಲ್ಡರ್​ಗಳು ಮಾರಾಟಕ್ಕೆ ಮುಂದಾಗಿದ್ದರಿಂದ ಬಹುಪಾಲು ಜನ ಆಸಕ್ತಿ ತೋರಿದರು.

ನೆಲಮಂಗಲ, ಮೈಸೂರು ರಸ್ತೆ ಪ್ರದೇಶಕ್ಕೆ ಹೆಚ್ಚು ಬೇಡಿಕೆ

ನೆಲಮಂಗಲ, ಮೈಸೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಕೆಂಗೇರಿ, ಕನಕಪುರ ರಸ್ತೆ, ಸರ್ಜಾಪುರ, ವೈಟ್​ಫೀಲ್ಡ್ ಸೇರಿ ಹಲವು ಭಾಗಗಳಲ್ಲಿ ಮನೆ, ನಿವೇಶನಗಳನ್ನು ಖರೀದಿಸಲು ಜನರು ಹೆಚ್ಚಿನ ಆಸಕ್ತಿ ತೋರಿದರು. ಕೆಲವು ಕಡೆಗಳಲ್ಲಿ ನಿವೇಶನಕ್ಕೆ ನಿವೇಶನ ಉಚಿತವಾಗಿದ್ದರೆ, ಇನ್ನೂ ಕೆಲವೆಡೆ ನೋಂದಣಿ ಶುಲ್ಕವಿಲ್ಲದೆ ಉಚಿತವಾಗಿ ನೋಂದಣಿ ಮಾಡಿಕೊಡುವ ಮೂಲಕ ಬಿಲ್ಡರ್​ಗಳು ಗ್ರಾಹಕರನ್ನು ಆಕರ್ಷಸಿದರು. ಚಿನ್ನ, ಟಿವಿ, ಫ್ರಿಜ್, ಬೈಕ್ ಸೇರಿ ಹಲವು ಕೊಡುಗೆಗಳು ಗ್ರಾಹಕರಿಗೆ ಲಭ್ಯವಾದವು. ಎಕ್ಸ್​ಪೋದ ಮೂಲಕ ಎಲ್ಲ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಸೂರು ಒದಗಿಸುವುದರೊಂದಿಗೆ ಅವರ ಕನಸನ್ನು ನನಸಾಗಿಸಲು ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್​ಗಳು ಕೈಗೊಂಡ ಪ್ರಯತ್ನಕ್ಕೆ ಗ್ರಾಹಕರಿಂದ ಅಪಾರ ಮೆಚ್ಚುಗೆಯಾಯಿತು. ಬಿಬಿಎಂಪಿ ವ್ಯಾಪ್ತಿ ಮತ್ತು ನಗರ ಹೊರವಲಯದ ಹೊಸ ಯೋಜನೆಗಳು ಎಕ್ಸ್ ಪೋದಲ್ಲಿ ಲಭ್ಯವಿದ್ದಿದ್ದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಯಿತು. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಜನರ ಆಗಮನವು ಎಕ್ಸ್​ಪೋ ಮುಕ್ತಾಯಗೊಳ್ಳುವ ಸಮಯದವರೆಗೂ ಮುಂದುವರಿದಿತ್ತು.

ಚಿನ್ನದ ನಾಣ್ಯ ಗೆದ್ದ ಅದೃಷ್ಟಶಾಲಿಗಳು

ಎಕ್ಸ್​ಪೋಗೆ ಆಗಮಿಸಿ ನಿವೇಶನ ಖರೀದಿಸಿದ ಹಲವು ಅದೃಷ್ಟಶಾಲಿಗಳು ಚಿನ್ನ ನಾಣ್ಯದೊಂದಿಗೆ ಮನೆಗೆ ಮರಳಿದರು. ಪ್ರತಿ ಎರಡು ಗಂಟೆಗೆ ಒಂದರಂತೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ನಿಂದ ಲಕ್ಕಿಡಿಪ್ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಹೆಸರುಗಳನ್ನು ಘೋಷಿಸಿದಾಗ ವಿಜೇತರು ಸಂಭ್ರಮಿಸಿದರು. ಪ್ರತಿ ಬಾರಿ ಲಕ್ಕಿಡಿಪ್ ನಡೆಯುತ್ತಿದ್ದಾಗಲೂ ಸುತ್ತಲೂ ನೆರೆಯುತ್ತಿದ್ದ ಗ್ರಾಹಕರು ತಮ್ಮ ಹೆಸರಿರುವ ಚೀಟಿ ದೊರೆಯುವುದೇ ಎಂಬ ಕುತೂಹಲ ತೋರುತ್ತಿದ್ದರು. ಒಟ್ಟಾರೆ ಎಕ್ಸ್​ಪೋ ರಿಯಲ್​ಎಸ್ಟೇಟ್ ಕ್ಷೇತ್ರವನ್ನು ಪರಿಚಯಿಸಿದಷ್ಟೇ ಅಲ್ಲದೆ, ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಶನಿವಾರ ಚಿನ್ನ ಗೆದ್ದಿದ್ದ ಐಟಿಪಿಎಲ್ ನಿವಾಸಿ ಎಸ್.ವಿ. ಉಮಾಪತಿ ಭಾನುವಾರ

ಎಕ್ಸ್​ಪೋಗೆ ಆಗಮಿಸಿ ಚಿನ್ನದ ನಾಣ್ಯ ಪಡೆದರು. ಭಾನುವಾರದ ಎಕ್ಸ್​ಪೋದಲ್ಲಿ ಮತ್ತಿಕೆರೆಯ ಲೋಕೇಶ್, ಮಧ್ಯಾಹ್ನದ ಲಕ್ಕಿ ಡ್ರಾದಲ್ಲಿ ಕೆ.ಜಿ. ಪ್ರಶಾಂತ್ ಮತ್ತು ಪ್ರವೀಣ್, ಸಂಜೆ ನಡೆದ ಡ್ರಾದಲ್ಲಿ ಪಿ.ಎಸ್. ಸೌಮ್ಯಾ, ಸಿ. ಸುನಿಲ್ ಹಾಗೂ ರಮೇಶ್ ಚಿನ್ನದ ನಾಣ್ಯವನ್ನು ತಮ್ಮದಾಗಿಸಿಕೊಂಡರು.

ಆಸ್ಥಾ ಪ್ರಾಪರ್ಟೀಸ್ ಪ್ರಸ್ತುತಿಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ರಿಯಲ್ ಎಸ್ಟೇಟ್ ಎಕ್ಸ್​ಪೋ ಯಶಸ್ಸು ಕಂಡಿದೆ. ನಮ್ಮ ಎಲ್ಲ ಪ್ರಾಜೆಕ್ಟ್​ಗಳಿಗೂ ಎಕ್ಸ್ ಪೋದಲ್ಲಿ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
| ಅಜಯ್ಪ್ರಸಾದ್ ಆಸ್ಥಾ ಪ್ರಾಪರ್ಟೀಸ್ ವ್ಯವಸ್ಥಾಪಕ ನಿರ್ದೇಶಕ

ಎರಡು ದಿನಗಳ ಎಕ್ಸ್​ಪೋ ಯಶಸ್ವಿ ಯಾಗಿದೆ. ನಿವೇಶನ, ಫ್ಲ್ಯಾಟ್ ಖರೀದಿ ಸಲು ಇಚ್ಛೆ ಇದ್ದ ನೈಜ ಗ್ರಾಹಕರೇ ಆಗಮಿಸಿದ್ದರು. ಕೆಂಗೇರಿ ಭಾಗದಲ್ಲಿರುವ ಡಿಎಸ್-ಮ್ಯಾಕ್ಸ್​ನ 360 ಫ್ಲ್ಯಾಟ್​ನ ಡಿಎಸ್-ಮ್ಯಾಕ್ಸ್ ಸ್ಕೈಸುಪ್ರೀಂ ಸೇರಿ ಎಲ್ಲ ಯೋಜನೆಗಳಿಗೆ ಉತ್ತಮ ಬೇಡಿಕೆ ಬಂದಿದೆ. ಬೆಂಗಳೂರು ಉತ್ತರದಲ್ಲಿರುವ ಯೋಜನೆಗಳ ಮಾಹಿತಿಯನ್ನೂ ಗ್ರಾಹಕರು ಪಡೆದಿದ್ದಾರೆ.
| ಡಾ. ಎಸ್.ಪಿ. ದಯಾನಂದ್ ಡಿಎಸ್-ಮ್ಯಾಕ್ಸ್ ನಿರ್ದೇಶಕ

ಎಕ್ಸ್​ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಲಮಂಗಲ ಬಳಿಯ ರೈಲ್ವೆ ಗೊಲ್ಲಹಳ್ಳಿಯಲ್ಲಿರುವ ಅಭಿವೃದ್ಧಿ ಪೆಸಿಫಿಕ್ ಪ್ರಾಜೆಕ್ಟ್​ನಲ್ಲಿ ಕೇವಲ 3.5 ಲಕ್ಷ ರೂ.ಗಳಿಗೆ 2040 ಸೈಟ್ ನೀಡುತ್ತಿದ್ದೇವೆ. ಎಕ್ಸ್​ಪೋದಲ್ಲಿ ನೋಂದಣಿ ಮಾಡಿದವರಿಗೆ ನೋಂದಣಿ ಶುಲ್ಕ ವಿನಾಯಿತಿ ಹಾಗೂ 3 ಗ್ರಾಂ ಚಿನ್ನದ ನಾಣ್ಯ ನೀಡಿದ್ದೇವೆ. ಜನಸಾಮಾನ್ಯರ ಅಭಿವೃದ್ಧಿಗಾಗಿಯೇ ಕೈಗೆಟುಕುವ ದರದಲ್ಲಿ ಹಲವು ಯೋಜನೆಯನ್ನು ಎಬಿ ಪ್ರಾಪರ್ಟೀಸ್ ಅಭಿವೃದ್ಧಿಪಡಿಸಿದೆ.
| ಡಿ. ಸಂಗೀತಾ ಎಬಿ ಪ್ರಾಪರ್ಟಿಸ್ ಮ್ಯಾನೇಜಿಂಗ್ ಪಾರ್ಟ್​ನರ್
 
 

ಎಕ್ಸ್​ಪೋಗೆ ಬಂದ ಬಹುತೇಕ ಗ್ರಾಹಕರು ಮೈಸೂರು ರಸ್ತೆ, ಮಾಗಡಿ ರಸ್ತೆ ಹಾಗೂ ತುಮಕೂರು ಬಳಿ ನಿವೇಶನ ಖರೀದಿ ಉದ್ದೇಶದಿಂದ ಬಂದಿದ್ದರು. ಸಂಸ್ಥೆಯ ಕಾವೇರಿ ಎನ್​ಕ್ಲೇವ್ ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 800 ಮೀ. ದೂರದಲ್ಲಿರುವ ಏಕೈಕ ಪ್ರೀಮಿಯಂ ಯೋಜನೆಯಾಗಿದೆ. ಒಟ್ಟು 231 ಸೈಟ್​ಗಳು ಪ್ರಾಜೆಕ್ಟ್​ನಲ್ಲಿದ್ದು, ಪ್ರತಿ ಚದರಡಿಗೆ 3000 ರೂ. ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಸಮೀಪವಾಗಿ ಈ ಭಾಗದಲ್ಲಿ ಕಡಿಮೆ ದರದಲ್ಲಿ ಬೇರೆಲ್ಲೂ ನಿವೇಶನಗಳಿಲ್ಲ. ಈ ಯೋಜನೆಗೆ ಬೇಡಿಕೆ ಬಂದಿದೆ.
| ಪಿ. ಮಧುಸೂಧನ್ ಕಾವೇರಿ ಇನ್ಪ್ರಾ ಪ್ರಾಜೆಕ್ಟ್ ಮಾರುಕಟ್ಟೆ ಮುಖ್ಯಸ್ಥ

ಮಾಗಡಿ ರಸ್ತೆಯ ಬಳಿ ಇರುವ ಪ್ರಾವಿಡೆಂಟ್​ನ ಟ್ರೀ ಹೆಸರಿನ ವಸತಿ ಸಮುಚ್ಚಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಇಲ್ಲಿ ಪ್ರೀಮಿಯಂ 2 ಬಿಎಚ್​ಕೆ ಫ್ಲ್ಯಾಟ್ ಕೇವಲ 49 ಲಕ್ಷ ರೂ.ಗೆ ಹಾಗೂ 3 ಬಿಎಚ್​ಕೆ ಫ್ಲ್ಯಾಟ್ ಕೇವಲ 62 ಲಕ್ಷ ರೂ.ಗೆ ಲಭ್ಯವಿದೆ. ಎಕ್ಸ್​ಪೋ ವಿಶೇಷ ಕೊಡುಗೆಯಾಗಿ ಸ್ಥಳದಲ್ಲೇ ಕಾಯ್ದರಿಸಿದ ಗ್ರಾಹಕರಿಗೆ 1.50 ಲಕ್ಷ ರೂ.ವರೆಗೆ ರಿಯಾಯಿತಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬುಕ್ಕಿಂಗ್ ಮಾಡುವವರಿಗೆ ಗರಿಷ್ಠ 70 ಸಾವಿರ ರೂ.ವರೆಗೆ ರಿಯಾಯಿತಿ ದೊರೆಯಲಿದೆ.
| ಎಂ.ಪಿ. ಹರಿವಿನಯ್ ಪ್ರಾವಿಡೆಂಟ್ ವ್ಯವಸ್ಥಾಪಕ

ನಮ್ಮ ಊಹೆಗೂ ಮೀರಿ ಜನಸಾಗರ ಎಕ್ಸ್​ಪೋಗೆ ಬಂದಿದೆ. ನೆಲಮಂಗಲದ ರೈಲ್ವೆ ಗೊಲ್ಲಹಳ್ಳಿ ಬಳಿಯ ಮಧುರ ಎನ್​ಕ್ಲೇವ್ ಮೊದಲ ಹಂತದಲ್ಲಿ ಕೇವಲ 2.5 ಲಕ್ಷ ರೂ.ಗೆ ನಿವೇಶನ ನೀಡುವ ಯೋಜನೆ ಇದೆ. ಶನಿವಾರ ಆಗಮಿಸಿದ್ದ ಹಲವು ಗ್ರಾಹಕರು ಈಗಾಗಲೇ ನಿವೇಶನ ವೀಕ್ಷಿಸಿದ್ದಾರೆ. ಹಲವರು ಸ್ಥಳದಲ್ಲೇ ಕಾಯ್ದಿರಿಸಿದ್ದಾರೆ. ನೋಂದಣಿ ಶುಲ್ಕ ವಿನಾಯಿತಿ ಹಾಗೂ ಡೌನ್ ಪೇಮೆಂಟ್ ನಂತರ ಸುಲಭ ಕಂತುಗಳಲ್ಲಿ ಹಣ ಪಾವತಿ ಅವಕಾಶ ಕಲ್ಪಿಸಿದ್ದೇವೆ.

| ಛಾಯಾಕಿರಣ್ ದುರ್ಗಶ್ರೀ ವೆಂಚರ್ಸ್ ವ್ಯವಸ್ಥಾಪಕ (ಮಾರ್ಕೆಟಿಂಗ್)

ಎಕ್ಸ್​ಪೋದಲ್ಲಿ ಜನಸಾಗರ ನಿರೀಕ್ಷೆಗಿಂತ ಅಧಿಕವಾಗಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದೇಶವಾರು ಇಂತಹ ಎಕ್ಸ್​ಪೋ ಮಾಡಿದ್ದು ಜನರಿಗೆ ಅನುಕೂಲವಾಗಿದೆ. ಟ್ರಿನ್ಕೋ ಕೂಡ ಈ ಪ್ರದೇಶಕ್ಕೆ ಸಮೀಪವಾಗಿರುವ ಕನಕಪುರ ರಸ್ತೆ, ಅಂಜನಾಪುರ, ಗುಬ್ಬಲಾಳ, ಯು.ಎಂ.ಕಾವಲ್ ಪ್ರದೇಶದಲ್ಲಿನ ವಿಲ್ಲಾ ಪ್ಲಾಟ್ಸ್ ಮಾಹಿತಿ ನೀಡಿದೆ. ಕನಕಪುರ ರಸ್ತೆಯಲ್ಲಿರುವ ಟ್ರಿನ್ಕೋ ತಪಸ್ವಿ, ಟ್ರಿನ್ಕೋ ನಂದನವನ ಹಾಗೂ ಟ್ರಿನ್ಕೋ ಮನ್ವಂತರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ 39 ಎಕರೆ ಪ್ರದೇಶದಲ್ಲಿ ಹೊಸ ಯೋಜನೆ ಆರಂಭಿಸಲಿದ್ದೇವೆ.
|ದೇವರಾಜ್ ಟ್ರಿನ್ಕೋ ಇನ್ಪ್ರಾ ಪ್ರೖೆ.ಲಿ. ನಿರ್ದೇಶಕ

ಗ್ರಾಹಕರು ಅತ್ಯಧಿಕ ಸಂಖ್ಯೆಯಲ್ಲಿ ಎಕ್ಸ್​ಪೋಗೆ ಭೇಟಿ ನೀಡಿದ್ದಾರೆ. ಈಗಾಗಲೇ ಹಲವರು ಸ್ಥಳದಲ್ಲೇ ನಿವೇಶನ ಕಾಯ್ದಿರಿಸಿದ್ದಾರೆ. ಸಾವಿರಾರು ಜನರು ಯೋಜನೆಯ ಪೂರ್ಣ ಮಾಹಿತಿ ಪಡೆದಿದ್ದಾರೆ. ರೈಲ್ವೆ ಗೊಲ್ಲಹಳ್ಳಿ ಬಳಿಯ ಸಮೃದ್ಧಿ ಎನ್​ಕ್ಲೇವ್​ನಲ್ಲಿ ಕೇವಲ 3.60 ಲಕ್ಷ ರೂ.ಗೆ 2030 ನಿವೇಶನ ನೀಡುತ್ತಿದ್ದೇವೆ. ಈ ಯೋಜನೆಗೆ ಬೇಡಿಕೆ ಹೆಚ್ಚಾಗಿತ್ತು. ಗ್ರಾಹಕರಿಗೆ ನೋಂದಣಿ ಶುಲ್ಕ ವಿನಾಯಿತಿ ಹಾಗೂ ಸ್ಥಳದಲ್ಲೇ ನಿವೇಶನ ಕಾಯ್ದಿರಿಸುವ ಗ್ರಾಹಕರಿಗೆ 5 ಗ್ರಾಂ ಚಿನ್ನದ ನಾಣ್ಯ ನೀಡುತ್ತಿದ್ದೇವೆ. ಶೇ.60 ಡೌನ್ ಪೇಮೆಂಟ್ ಬಳಿಕ ಸುಲಭ ಕಂತುಗಳಲ್ಲಿ ಉಳಿದ ಹಣ ಪಾವತಿಸುವ ಸೌಲಭ್ಯ ಇದೆ.
| ಮಂಜುಳಾ ಶುಭೋದಯ ವೆಂಚರ್ಸ್ ಮಾರುಕಟ್ಟೆ ಸಂಯೋಜಕಿ

ಮಾನ್ಯತಾ ಟೆಕ್ ಪಾರ್ಕ್, ಮೈಸೂರು ರಸ್ತೆ ಮತ್ತು ವರ್ತರು ಬಳಿಯಲ್ಲಿ ಅಪಾರ್ಟ್​ವೆುಂಟ್​ಗಳು ನಿರ್ವಣಗೊಳ್ಳುತ್ತಿದ್ದು, ಎಕ್ಸ್ ಪೋದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. 7 ಅಪಾರ್ಟ್ ಮೆಂಟ್​ಗಳನ್ನು ಈಗಾಗಲೇ ಕಂಪನಿ ನಿರ್ವಿುಸಿದ್ದು, ಸಾವಿರಾರು ಗ್ರಾಹಕರನ್ನು ಹೊಂದಿದೆ. ಗುಣಮಟ್ಟದ ಸೇವೆ, ವಿಶ್ವಾಸಾರ್ಹ ವ್ಯವಹಾರವೇ ನಮ್ಮ ಕಂಪನಿ ಬೆಳವಣಿಗೆಗೆ ಕಾರಣವಾಗಿದೆ.
| ಸಿಖಂದರ್ ಎಟಿಜೆಡ್ ಪ್ರಾಪರ್ಟೀಸ್ ಶಾಖೆ ವ್ಯವಸ್ಥಾಪಕ

ಕೆಂಗೇರಿ ಬಳಿ ವಿಲ್ಲಾ ಬಡಾವಣೆ ಅಭಿವೃದ್ಧಿಪಡಿಸಲಾಗಿದ್ದು, ಗ್ರಾಹಕರು ಖರೀದಿಗೆ ಒಲವು ತೋರಿದ್ದಾರೆ. 14ಕ್ಕೂ ಅಧಿಕ ಪ್ರಾಜೆಕ್ಟ್​ಗಳನ್ನು ನಮ್ಮ ಕಂಪನಿ ಪೂರೈಸಿದ್ದು, ಭಗಿನಿ ಪ್ರಾಜೆಕ್ಟ್ ಗಳು ಗ್ರಾಹಕರಿಗೆ ಸದಾ ಅಚ್ಚುಮೆಚ್ಚಾಗಿವೆ. ಎಕ್ಸ್​ಪೋದಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮತ್ತಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉತ್ಸಾಹ ಮೂಡಿದೆ.
| ಎಸ್.ಬಿ. ರಾಜೇಶ್ ಭಗಿನಿ ಡವೆಲಪರ್ಸ್ ಮ್ಯಾನೇಜಿಂಗ್ ಪಾರ್ಟ್​ನರ್

ದೊಡ್ಡ ಆಲದ ಮರದ ಬಳಿಯಲ್ಲಿ ಪಂಚಮುಖಿ ಶ್ರೇಯೋಧಾಮ ಬಡಾವಣೆ ಅಭಿವೃದ್ಧಿಪಡಿಸಲಾಗಿದ್ದು, ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.ಇದೇ ಪ್ರಾಜೆಕ್ಟ್​ಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ನಮ್ಮ ಸಂಸ್ಥೆ 9 ವರ್ಷಗಳ ಅವಧಿಯಲ್ಲಿ ಹಲವು ಪ್ರಾಜೆಕ್ಟ್​ಗಳನ್ನು ನಿರ್ವಹಿಸಿದ್ದು, ಅಂದಿನಿಂದಲೂ ಗ್ರಾಹಕರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದೆ. ಅದು ಗಟ್ಟಿಗೊಳ್ಳುತ್ತಲೇ ಸಾಗಿದೆ.
| ರವಿಕುಮಾರ್ ರಾಜೇಶ್ವರಿ ಆಶೀರ್ವಾದ್ ವ್ಯವಸ್ಥಾಪಕ ನಿರ್ದೇಶಕ