ಗುತ್ತಲ: ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ದರೋಡೆ ತಡಗಟ್ಟೆಲು ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಸಿಸಿ ಕ್ಯಾಮರಾ ಅಳವಡಿಸುವುದು ಹಾಗೂ ಕಾವಲುಗಾರರನ್ನು ನೇಮಿಸಿಕೊಳ್ಳವುದು ಅವಶ್ಯವಾಗಿದೆ ಎಂದು ಹಾವೇರಿ ಗ್ರಾಮಾಂತರ ಸಿಪಿಐ ಸಂತೋಷ ಪವಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುತ್ತಲ ಹೋಬಳಿಯ ವ್ಯಾಪ್ತಿಯ ವಿವಿಧ ಬ್ಯಾಂಕ್, ಸಹಕಾರಿ ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳ ವ್ಯವಸ್ಥಾಪಕರು, ಸಿಬ್ಬಂದಿಗೆ ಭದ್ರತಾ ವ್ಯವಸ್ಥೆಯ ಕುರಿತು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬ್ಯಾಂಕ್ಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು. ಬ್ಯಾಂಕಿನ ಸುತ್ತಮುತ್ತ ಇರುವ ರಸ್ತೆಗಳಲ್ಲಿನ ದೃಶ್ಯ ಸೆರೆ ಹಿಡಿಯುವಂತೆ ಸಿಸಿ ಕ್ಯಾಮರಾಗಳು ಅಳವಡಿಸಬೇಕು. ಅವುಗಳ ಕಾರ್ಯ ನಿರ್ವಹಣೆ ಸದಕಾಲ ನೋಡುತ್ತಿರಬೇಕು. ಇತ್ತೀಚಿನ ಅನೇಕ ಕಳ್ಳತನ ಪ್ರಕರಣಗಳನ್ನು ಅವಲೋಕಿಸಿದಾಗ, ಕಳ್ಳರು ತಂತ್ರಜ್ಞಾನ ಅರಿವು ಹೊಂದಿದ್ದಾರೆ. ಯಾವುದೇ ಸಾಕ್ಷ ್ಯಳನ್ನು ಬಿಡದೇ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ತಮಗೂ ಅರಿವಿದೆ. ಕಳ್ಳತನ ಆಗುವ ಮೊದಲೇ ಎಚ್ಚರಿಕೆ ವಹಿಸಬೇಕು ಎಂದರು.
ಅನೇಕ ಎಟಿಎಂಗಳಲ್ಲಿ ಸೆಕ್ಯೂರಿಟಿಗಳು ಇಲ್ಲ. ಸೆಕ್ಯೂರಿಟಿಗಳನ್ನು ನೇಮಕ ಮಾಡಿಕೊಳ್ಳಬೇಕು. ಎಲ್ಲ ಬ್ಯಾಂಕ್ಗಳಲ್ಲಿ ಅಲಾರಾಂ ವ್ಯವಸ್ಥೆ ಅಳವಡಿಸಿಕೊಳ್ಳಬೇಕು, ಅವುಗಳನ್ನು ಪ್ರತಿ ವಾರಕ್ಕೊಮ್ಮೆ ಪರಿಶೀಲನೆ ಮಾಡಿ ಅವುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತಿಳಿದುಕೊಳ್ಳಬೇಕು. ಸಂಶಯ ಬಂದ ವ್ಯಕಿಗಳ ಬಗ್ಗೆ ನಿಗಾ ವಹಿಸಿ ಅಂತಾ ವ್ಯಕಿಗಳು ಕಂಡಲ್ಲಿ ಪೊಲೀಸರಿಗೇ ತಕ್ಷಣ ಮಾಹಿತಿ ನೀಡಬೇಕು. ಇದರೊಂದಿಗೆ ಇನ್ನೂ ಹೆಚ್ಚಿನ ಭದ್ರತೆಯನ್ನು ತಮ್ಮ ಬ್ಯಾಂಕ್ಗಳಿಗೆ ವ್ಯವಸ್ಥೆ ಮಾಡಬೇಕು. ಆರ್ಬಿಐ ಮಾರ್ಗಸೂಚಿ ಅನ್ವಯ ಮುಂಜಾಗ್ರತಡ ಕ್ರಮ ಕೈಗೊಳ್ಳಬೇಕು. ಯಾವುದೇ ತೊಂದರೆಯಾದಲ್ಲಿ ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕು. ನಿತ್ಯ ಬ್ಯಾಂಕ್ ಸಮಯದ ನಂತರವೂ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗುತ್ತಲ ಪೋಲಿಸ್ ಠಾಣೆಯ ಪಿಎಸ್ಐ ಬಸವನಗೌಡ ಬಿರಾದರ, ಗುತ್ತಲ ನೆಗಳೂರ, ಹೊಸರಿತ್ತಿ, ಹಾವನೂರ, ಬಸಾಪೂರ, ಮರೋಳ, ಬೆಳವಿಗಿ ಸೇರಿದಂತೆ ಅನೇಕ ಗ್ರಾಮಗಳ ಸುಮಾರು 30ಕ್ಕೂ ಅಧಿಕ ಬ್ಯಾಂಕ್, ಸಂಘ, ಹಣಕಾಸು ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.