ಉಪಖಜಾನಾಧಿಕಾರಿಗೆ ಬಡ್ತಿ

ಕೊಳ್ಳೇಗಾಲ: ಪಟ್ಟಣದ ಉಪಖಜಾನಾಧಿಕಾರಿ ಜಿ.ಬಿ.ಸುಲೋಚನಾ ಅವರಿಗೆ ಜಿಲ್ಲಾ ಖಜಾನಾಧಿಕಾರಿಯಾಗಿ ಸರ್ಕಾರ ಬಡ್ತಿ ನೀಡಿದ್ದು, ರಾಮನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಜಿ.ಬಿ.ಸುಲೋಚನಾ ಅವರು ಕಳೆದ 4 ವರ್ಷಗಳಿಂದ ಕೊಳ್ಳೇಗಾಲದ ಉಪ ಖಜಾನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೆರವಾಗಿರುವ ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಿಲ್ಲ.

ಹಾಗಾಗಿ ಜಿ.ಬಿ. ಸುಲೋಚನಾ ಅವರು ಕಚೇರಿಯ ಮುಖ್ಯಲೆಕ್ಕಾಧಿಕಾರಿ ಎಂ.ಶಿವರಾಜು ಅವರಿಗೆ ಅಧಿಕಾರ ವಹಿಸಿ ಕೊಟ್ಟು ಕರ್ತವ್ಯದಿಂದ ಬಿಡು ಗಡೆಗೊಂಡಿದ್ದಾರೆ.

Leave a Reply

Your email address will not be published. Required fields are marked *