ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭದ ಭರವಸೆ

ಕಂಪ್ಲಿ ಕೋಟೆಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ಕೆ.ಎಂ.ಹೇಮಯ್ಯ ಸ್ವಾಮಿ, ಬಿ.ಸಿದ್ದಪ್ಪ, ಕಂಬತ್ ಕೃಷ್ಣ, ಮಣ್ಣೂರು ನವೀನ, ಕಾಮರೆಡ್ಡಿ ಚಂದ್ರಶೇಖರಪ್ಪ ಇತರರಿದ್ದರು.

ಕಂಪ್ಲಿ: ಕಂಪ್ಲಿ ಹಾಗೂ ಕುರುಗೋಡು ಎರಡು ಕಡೆಗಳಲ್ಲೂ ಬಿಇಒ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇದನ್ನೂ ಓದಿ:ಹೊಲಗಳ ರಸ್ತೆ ನಿರ್ಮಾಣ ಕಾಮಗಾರಿಗೆ ರೈತರು ಸಹಕರಿಸಲಿ

ನಗರದ ಕೋಟೆಯ ತುಂಗಭದ್ರಾ ಸೇತುವೆ ಬಳಿ ಕಲ್ಯಾಣಪಥ ಯೋಜನೆಯ 5.9 ಕೋಟಿ ರೂ. ವೆಚ್ಚದ ಕೋಟೆಯಿಂದ ರಾಮಸಾಗರದವರೆಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಬಿಇಒ ಕಚೇರಿ ಆರಂಭಿಸುವ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು. ಕುರುಗೋಡಿನ ಬಿಇಒ 2025ರ ಏ.27ರಂದು ಕಂಪ್ಲಿಯೂ ಕಚೇರಿ ಆರಂಭಿಸುವ ಕುರಿತು ಪತ್ರ ಬರೆದಿದ್ದಾರೆ. 2025ರ ಜೂ.11ರಂದು ಇಡಿ ದಾಳಿ ಸಂದರ್ಭದಲ್ಲಿ ನಮ್ಮ ಕುಟುಂಬದವರ ಕುರಿತು ಮಾಧ್ಯಮದಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.
ಕೆಕೆಆರ್‌ಡಿಬಿಯಲ್ಲಿ ಕಾಡು ಕಡಿಸಿ ಬನವಾಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರೈತರು ಟ್ರ್ಯಾಕ್ಟರ್‌ಗೆ ಪಟ್ಲರ್ ಅಳವಡಿಸಿ ರಸ್ತೆ ಮೇಲೆ ಚಲಿಸಬಾರದು ಎಂದು ಮನವಿ ಮಾಡಿದರು.
ಪ್ರಮುಖರಾದ ಕೆ.ಎಂ.ಹೇಮಯ್ಯ ಸ್ವಾಮಿ, ಬಿ.ಸಿದ್ದಪ್ಪ, ಕಂಬತ್ ಕೃಷ್ಣ, ಸಿ.ಆರ್.ಹನುಮಂತ, ಡಿಶ್ ಪ್ರಸಾದ್, ಹೊನ್ನಳ್ಳಿ ಶ್ರೀದೇವಿ, ಕಟ್ಟೆ ದುರುಗಪ್ಪ, ಡಿ.ಮುರಾರಿ, ಮರಾಠಿ ವೆಂಕೋಬಣ್ಣ, ಕರಿಬಸನಗೌಡ, ಶಂಕರ್ ಇತರರಿದ್ದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…