ಜಮಖಂಡಿ: ಆದಿಜಾಂಬವ ನಿಗಮದಲ್ಲಿ ವಿವಿಧ ಸೌಲಭ್ಯಕ್ಕಾಗಿ 1.45 ಲಕ್ಷ ಅರ್ಜಿಗಳು ಪೆಂಡಿಂಗ್ ಇವೆ. 3,500 ಕೋಟಿ ರೂಗಳ ಅನುದಾನ ಅವಶ್ಯಕತೆ ಇದೆ ಎಂದು ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರ 100 ಕೋಟಿ ರೂ. ಅನುದಾನ ನೀಡಿದ್ದು, ಅದು ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಈ ಮೊದಲು ಪ್ರತಿ ಕ್ಷೇತ್ರದ ಒಬ್ಬ ಶಾಸಕರು ಓರ್ವ ಫಲಾನುಭವಿ ಮಾತ್ರ ಆಯ್ಕೆ ಮಾಡುತಿದ್ದರು. ಆದರೆ ನಾವು ಈ ಬಾರಿ ವಾಹನ ಖರೀದಿಗೆ, ಭೂ ಖರೀದಿ ಸೇರಿ ನಿಗಮದಲ್ಲಿನ ಎಲ್ಲ ಪ್ರತಿಯೊಂದು ಯೋಜನೆಗೆ 20 ಜನರಿಗೆ ಹೆಚ್ಚಿಸುವಲ್ಲಿ ಕ್ರಮ ಕೈಕೊಳ್ಳಲಾಗುವುದು ಎಂದರು.
ಜಿಲ್ಲಾ ಅಸಂಘಟಿಕ ಕಾರ್ಮಿಕರ ಸಂಘದ ಅಧ್ಯಕ್ಷ ಪರಮಾನಂದ ಕುಟ್ಟರಟ್ಟಿ, ತಾಲೂಕು ಅಧ್ಯಕ್ಷ ಅಬುಬಕರ ಕುಡಚಿ, ಅನೀಲ ಬಡಿಗೇರ, ಪೈಗಂಬರ ಬನಹಟ್ಟಿ, ಆಜಮ್ ಮಹಾತ್, ಪಿರೋಜ್ ತಾಂಬೋಳಿ, ಸುನೀಲ ಘಾಟಗೆ ಇತರರಿದ್ದರು.