ಮಕ್ಕಳ ಅಭಿವೃದ್ಧಿಗೆ ಯೋಜನೆಗಳು ಜಾರಿ

ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದ 1ನೇ ಅಂಗನವಾಡಿ ಕಟ್ಟಡವನ್ನು ಸಿಡಿಪಿಒ ಬೆಟದೇಶ ಮಾಳೇಕೊಪ್ಪ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ, ಸದಸ್ಯ ಉಮೇಶ ವಡ್ಡರ ಇತರರಿದ್ದರು.

ಯಲಬುರ್ಗಾ: ಮಕ್ಕಳ ಹಿತದೃಷ್ಟಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಸಿಡಿಪಿಒ ಬೆಟದೇಶ ಮಾಳೇಕೊಪ್ಪ ಹೇಳಿದರು.

blank

ಇದನ್ನೂ ಓದಿ:ಅಂಗನವಾಡಿಯಲ್ಲಿದೆ ಮಕ್ಕಳ ಭವಿಷ್ಯ

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ಮಲಕಸಮುದ್ರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ 1ನೇ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಅಂಗನವಾಡಿಗೆ ಅಗತ್ಯವಿರುವ ನೂತನ ಕಟ್ಟಡ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅವರ ಮಾರ್ಗದರ್ಶನದಿಂದ ತಾಲೂಕಿನಲ್ಲಿ ವಿವಿಧ ಇಲಾಖೆಗೆ ನೂತನ ಕಟ್ಟಡಗಳು ಪ್ರಾರಂಭವಾಗಿವೆ ಎಂದರು. ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ, ಸದಸ್ಯ ಉಮೇಶ ವಡ್ಡರ, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ ರಡ್ಡೆರ, ಕಾರ್ಯಕರ್ತೆಯರಾದ ಸುಜಾತಾ, ಅಂಜನಾ, ಪ್ರಮುಖರಾದ ಚಂದ್ರಕಾಂತ ಬಿನ್ನಾಳ, ಕರಿಯಪ್ಪ ಗುರಿಕಾರ, ಈರಪ್ಪ ದಸ್ತಾನಿ, ಅಸ್ರಲಿ, ಶರಣಪ್ಪ ಗೊಲ್ಲರ ಇತರರಿದ್ದರು.

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank