ಉತ್ತಮ ಕಲಾವಿದರಾಗಲು ಕಠಿಣ ಪರಿಶ್ರಮ ಅಗತ್ಯ

1 Min Read
UDP18-1-Swakruthi
ಮಣಿಪಾಲದ ಗಾಂಧಿಯನ್​ ಸೆಂಟರ್​ ಫಾರ್ ಫಿಲಾಸಫಿಕಲ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರಾಜೆಕ್ಟ್​ ಪ್ರದರ್ಶನವನ್ನು ವನಿತಾ ಪೈ ಉದ್ಘಾಟಿಸಿ, ವೀಕ್ಷಿಸಿದರು. ಪ್ರೊ.ವರದೇಶ್​ ಹಿರೇಗಂಗೆ ಇತರರಿದ್ದರು.

ಉದ್ಯಮಿ ವನಿತಾ ಪೈ ಅಭಿಪ್ರಾಯ | ‘ಸ್ವ-ಕೃತಿ’ ಪ್ರಾಜೆಕ್ಟ್​ ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಉತ್ತಮ ಕಲೆಗೆ ಯಾವುದೇ ಒಳದಾರಿಗಳಿಲ್ಲ. ಕಠಿಣ ಪರಿಶ್ರಮ ಮತ್ತು ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮೂಲಕ ಉತ್ತಮ ಕಲಾವಿದನಾಗಬಹುದು. ವಿದ್ಯಾರ್ಥಿಗಳು ಇತರರ ನೋವು-ನಲಿವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಮಣಿಪಾಲದ ಕಲಾವಿದೆ, ಉದ್ಯಮಿ ವನಿತಾ ಪೈ ಅಭಿಪ್ರಾಯಪಟ್ಟರು.

ಮಣಿಪಾಲದ ಗಾಂಧಿಯನ್​ ಸೆಂಟರ್​ ಫಾರ್​ ಫಿಲಾಸಫಿಕಲ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರಾಜೆಕ್ಟ್​ ಪ್ರದರ್ಶನ ಸ್ವ-ಕೃತಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅನೇಕ ಅವಕಾಶ

ಸೃಜನಶೀಲ ಉದ್ಯಮಗಳಲ್ಲಿ ಕಲಾ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿವೆ. ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಮತ್ತು ತಮ್ಮ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಭಾರತದಲ್ಲಿ ಉತ್ತಮ ಕಲಾವಿದರಿದ್ದಾರೆ. ಉತ್ತಮ ಕಲಾ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಜಿಸಿಪಿಎಎಸ್​ ಮುಖ್ಯಸ್ಥ ಪ್ರೊ.ವರದೇಶ್​ ಹಿರೇಗಂಗೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಇತರರು ಪ್ರದರ್ಶನ ವೀಕ್ಷಿಸಿದರು.

ವಿವಿಧ ಪ್ರಾಜೆಕ್ಟ್​ ಪ್ರದರ್ಶನ

ಎಸ್ಥೆಟಿಕ್ಸ್​, ಇಕಾಸೊಫಿ, ಪೀಸ್​ ಮತ್ತು ಮೀಡಿಯಾ ವಿದ್ಯಾರ್ಥಿಗಳಾದ ಶ್ರವಣ್​ ಬಾಸ್ರಿ (ಛಾಯಾಗ್ರಹಣ- ತೆಯ್ಯಂ), ಚಿನ್ಮಯಿ ಬಾಲ್ಕರ್​ (ಕಾವ್ಯದ ಮೇಲಿನ ವರ್ಣಚಿತ್ರ), ವೆಲಿಕಾ (ವಿನ್ಯಾಸ), ಆಕರ್ಷಿಕಾ ಸಿಂಗ್​ (ಕವನ), ಡೆಸ್ಮಂಡ್​ ದಾಸ್​ (ಅವಿಭಜಿತ ದಕ್ಷಿಣ ಕನ್ನಡದ ಪ್ರವಾಸ ಪುಸ್ತಕ), ಸಂಪದ ಭಾಗವತ (ಕಿರು ಚಲನಚಿತ್ರ)-ಇವರು ತಮ್ಮ ಪ್ರಾಜೆಕ್ಟ್​ಗಳ ಪ್ರದರ್ಶನ ನಡೆಸಿಕೊಟ್ಟರು.

ವಿದ್ಯಾರ್ಥಿಗಳಲ್ಲಿರುವ ಅಪಾರ ಸಾಮರ್ಥ್ಯ ಅವರ ಪ್ರಾಜೆಕ್ಟ್​ಗಳಲ್ಲಿ ಪ್ರತಿಫಲಿಸುತ್ತಿದೆ. ವಿಭಾಗದ ಇಂತಹ ಕೋರ್ಸ್​ಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಲ್ಲದೆ, ಇಂತಹ ಪ್ರಾಜೆಕ್ಟ್​ಗಳು ಅವರನ್ನು ಪ್ರೋತ್ಸಾಹಿಸುತ್ತವೆ.

ಪ್ರೊ.ವರದೇಶ್​ ಹಿರೇಗಂಗೆ. ಮುಖ್ಯಸ್ಥ, ಜಿಸಿಪಿಎಎಸ್​.

See also  ಮೆಸ್ಕಾಂ ಆ್ಯಪ್ ಹತ್ತು ಸಾವಿರ ಡೌನ್‌ಲೋಡ್
Share This Article