ಇಂಡಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು
ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳೊಡುವ ಸಮಾರಂಭ ಹಾಗೂ ವಿವಿಧ ಟಕಗಳ ಕಾರ್ಯಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಡಿಯಲ್ಲಿ ಜಿಟಿಟಿಸಿ ಕಾಲೇಜು ಆರಂಭ ಮಾಡಲಾಗುತ್ತಿದೆ. ಇಂತಹ ಹತ್ತಾರು ಶೈಣಿಕ ಕಾರ್ಯಗಳು ಇಂಡಿಯಲ್ಲಿ ನಡೆದಿವೆ. ವಿದ್ಯಾರ್ಥಿಗಳು ಉತ್ತಮ ಶಿಣ ಪಡೆದು ಉನ್ನತ ಹುದ್ದೆಗೇರಲು ಪ್ರಯತ್ನಿಸಬೇಕು. ತಂದೆ ತಾಯಿ ಋಣ ತೀರಿಸಿ ಉತ್ತಮ ಸಂಸ್ಕಾರವಂತರಾಗಿ ಬದುಕಬೇಕೆಂದು ಸಲಹೆ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರೊ.ಗುರುದೇವ ಬಳುಂಡಗಿ, ಪ್ರಾಚಾರ್ಯ ಆರ್.ಎಚ್.ರಮೇಶ ಮಾತನಾಡಿ ವಿದ್ಯಾರ್ಥಿಗಳ ಅನುಕೂಲಕ್ಕೆ ಮುಂದಿನ ವರ್ಷಗಳಲ್ಲಿ ಸ್ನಾತಕೋತ್ತರ ತರಗತಿ ಪ್ರಾರಂಭವಾಗಲಿದೆ. ಪ್ರಧಾನಮಂತ್ರಿ ಉಷಾ ಯೋಜನೆಯಲ್ಲಿ ಕಾಲೇಜು ಆಯ್ಕೆಯಾಗಿದ್ದು, 5 ಕೋಟಿ ರೂ.ಅನುದಾನ ಸಿಗಲಿದೆ ಎಂದರು.
ರವಿಕುಮಾರ ಅರಳಿ, ನಂದಕುಮಾರ ಬಿರಾದಾರ, ಸುರೇಖಾ ರಾಠೋಡ, ಎಸ್.ಜೆ. ಮಾಡ್ಯಾಳ ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯ ಇಲಿಯಾಸ ಬೋರಾಮಣಿ, ತಾಲೂಕು ಅಧ್ಯ ಪ್ರಶಾಂತ ಕಾಳೆ, ಪುರಸಭೆ ಅಧ್ಯ ಲಿಂಬಾಜಿ ರಾಠೋಡ, ಜಟ್ಟೆಪ್ಪ ರವಳಿ, ಡಾ. ವಿಜಯಮಹಾಂತೇಶ ದೇವರ, ತಿಪ್ಪಣ್ಣ ವಾಗ್ದಾಳ, ಸಂಗಮೇಶ ಹಿರೇಮಠ, ಪಿ.ಎಸ್.ದೇವರ ಇದ್ದರು.
ಪಹಲ್ಗಾಮನಲ್ಲಿ ಮರಣ ಹೊಂದಿದ ಹಾಗೂ ಅಪರೇಷನ್ ಸಿಂಧೂರನಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಸಂತಾಪ ಸೂಚಿಸಲಾಯಿತು.