16 C
Bangalore
Thursday, December 12, 2019

ಬಿಜೆಪಿ ಭರ್ಜರಿ ಸಾಧನೆ

Latest News

ಮಣ್ಣು ಮಾಲಿನ್ಯದಿಂದ ಜೀವಸಂಕುಲಕ್ಕೆ ಸಂಕಟ

ಮಣ್ಣಿನ ಮಾಲಿನ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನೈಸರ್ಗಿಕ ಪ್ರಕ್ರಿಯೆಯಿಂದ ಮಣ್ಣು ರೂಪುಗೊಳ್ಳುತ್ತದೆ. ಆದರೆ, ಅದಕ್ಕೆ ಹೇಗೆ ಹಾನಿ ಮಾಡುತ್ತಿದ್ದೇವೆ ಎಂದರೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ...

ರೌಡಿ ಕಾಲಿಗೆ ಗುಂಡೇಟು

ಬೆಂಗಳೂರು: ಆರು ತಿಂಗಳ ಹಿಂದೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ತಲೆಮರೆಸಿಕೊಂಡು ತಿರುಗುತ್ತಿದ್ದ ಶಾರ್ಪ್​ಶೂಟರ್ ರೌಡಿಶೀಟರ್ ಕಾಲಿಗೆ ಕೆ.ಜಿ. ಹಳ್ಳಿ ಪೊಲೀಸರು...

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ವಿಜಯವಾಣಿ ಸುದ್ದಿಜಾಲ ಮಂಗಳೂರು
12 ವರ್ಷ ಮೊದಲು ಕಾಂಗ್ರೆಸ್ ಮಣಿಸಿ 34 ಸೀಟು ಗೆಲ್ಲುವ ಮೂಲಕ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಈ ಬಾರಿ ಹಿಂದಿನ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ಮೂಲಕ 44 ಸೀಟುಗಳನ್ನು ಬಾಚಿಕೊಂಡಿದೆ.

ಆ ಮೂಲಕ ಕೇಂದ್ರ, ರಾಜ್ಯ, ವಿಧಾನಸಭಾ ಕ್ಷೇತ್ರ, ನಗರ ನಾಲ್ಕೂ ಕಡೆಗಳಲ್ಲಿ ಬಿಜೆಪಿಗೆ ಮತದಾರರು ಆಡಳಿತ ಮಾಡಿ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲು ಅವಕಾಶ ನೀಡಿದಂತಾಗಿದೆ. ಹೀಗಾಗಿರುವುದು ಇದೇ ಮೊದಲೆಂಬುದು ವಿಶೇಷ.

1984ರಲ್ಲಿ ಮನಪಾ ಆದಂದಿನಿಂದಲೇ ಐದು ಬಾರಿ ಅಧಿಕಾರದ ಸವಿಯುಂಡ ಕಾಂಗ್ರೆಸ್ ಈ ಬಾರಿ 14 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ. ಹಿಂದೆ ಒಂದೆರಡು ಸ್ಥಾನಗಳಲ್ಲಾದರೂ ಗೆಲ್ಲುತ್ತಿದ್ದ ಜೆಡಿಎಸ್ ಹಾಗೂ ಸಿಪಿಐಎಂ ಪಕ್ಷಗಳದ್ದು ಈ ಬಾರಿ ಶೂನ್ಯ ಸಾಧನೆ. ಎಸ್‌ಡಿಪಿಐ ಕಳೆದ ಬಾರಿ ಒಂದು ವಾರ್ಡ್ ಗೆದ್ದಿದ್ದರೆ ಅದನ್ನು ಉಳಿಸಿಕೊಳ್ಳುವ ಜತೆ ಇನ್ನೊಂದನ್ನೂ ಬುಟ್ಟಿಗೆ ಹಾಕಿಕೊಂಡಿದೆ.

ಸೋತ/ ಗೆದ್ದ ಘಟಾನುಘಟಿಗಳು: ಈ ಬಾರಿ ಕಣದಲ್ಲಿದ್ದ ಮಾಜಿ ಮೇಯರ್‌ಗಳಾದ ಕಾಂಗ್ರೆಸ್‌ನ ಎಂ.ಶಶಿಧರ ಹೆಗ್ಡೆ, ಜೆಸಿಂತಾ ವಿಜಯ ಆಲ್ಫ್ರೆಡ್ ಹಾಗೂ ಕೆ.ಭಾಸ್ಕರ್ ಗೆಲುವು ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಸಿಟ್ಟಿಗೆದ್ದು ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಗುಲ್ಜಾರ್ ಬಾನು ಸೋತಿದ್ದಾರೆ. ಹಿಂದೆ ಕಾಂಗ್ರೆಸ್‌ನಿಂದ ಮೇಯರ್ ಆಗಿ, ಪಕ್ಷದಿಂದ ಹೊರಹೋಗಿ, ಜೆಡಿಎಸ್‌ನಲ್ಲಿದ್ದು, ಪ್ರಸ್ತುತ ಪಕ್ಷೇತರರಾಗಿ ಸ್ಪರ್ಧಿಸಿದ ಕೆ.ಅಶ್ರಫ್ ಸೋತಿದ್ದಾರೆ.

ಬದಲಾದ ಮೀಸಲಾತಿ ಪರಿಣಾಮವಾಗಿ ಈ ಬಾರಿ ಮಾಜಿ ಕಾರ್ಪೋರೇಟರ್‌ಗಳ ಮುಖಾಮುಖಿ ನಡೆದಿತ್ತು. ಕೊಡಿಯಾಲ್‌ಬೈಲ್‌ನಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಸಾಲಿಯಾನ್ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ವಿರುದ್ಧ ಸೋಲನುಭವಿಸಿದರು. ಕೋರ್ಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎ.ಸಿ.ವಿನಯರಾಜ್, ಬಿಜೆಪಿಯ ರಂಗನಾಥ ಕಿಣಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಂಕನಾಡಿ ವಾರ್ಡ್‌ನಲ್ಲಿ ಮೂವರು ಮಾಜಿಗಳು ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ಪ್ರವೀಣ್‌ಚಂದ್ರ ಆಳ್ವ ಬಿಜೆಪಿಯ ವಿಜಯಕುಮಾರ್ ಶೆಟ್ಟಿ ಮತ್ತು ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್ ಬಿ.ವಿಶ್ವನಾಥ್(ಬಂಡಾಯ) ಸ್ಪರ್ಧಿಸಿ ಗೆಲುವು ಸಾಧಿಸಿದರು. ಸೆಂಟ್ರಲ್ ಮಾರ್ಕೆಟ್ ವಾರ್ಡ್‌ನಲ್ಲಿ ಬಿಜೆಪಿಯ ಪೂರ್ಣಿಮಾ ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್ ಮಮತಾ ಶೆಣೈ ವಿರುದ್ಧ ಗೆದ್ದಿದ್ದಾರೆ. ಫಳ್ನೀರ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಾಜಿ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ವಿರುದ್ಧ ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟರ್ ಆಶಾ ಡಿಸಿಲ್ವ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ ಸೋತಿದ್ದಾರೆ.

 • ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಎಲ್ಲ್ಲ 4 ಅಲ್ಪಸಂಖ್ಯಾತರೂ ಸೋತಿದ್ದಾರೆ. ಆಶಾ ಡಿಸಿಲ್ವ (ಫಳ್ನೀರ್), ಅರ್ಶದ್ ಪೋಪಿ(ಕುದ್ರೋಳಿ), ಜೆಸ್ಸೆಲ್ ವಿಯೋಲಾ ಡಿಸೋಜ (ಬೆಂದೂರು) ಮತ್ತು ಸುರೈಯಾ (ಕಾಟಿಪಳ್ಳ) ಸೋಲನುಭವಿಸಿದವರು.

  ಅಧಿಕ ಬಾರಿ ಗೆದ್ದವರ‌್ಯಾರು?: ಕಾಂಗ್ರೆಸ್‌ನ ಲ್ಯಾನ್ಸಿ ಲೊಟ್ ಪಿಂಟೊ ಅತ್ಯಧಿಕ 7ನೇ ಬಾರಿ ಗೆದ್ದ ಹಿರಿಮೆ ಹೊಂದಿದ್ದಾರೆ. ಕಾಂಗ್ರೆಸ್‌ನ ಜೆಸಿಂತಾ, ಎಂ.ಶಶಿಧರ ಹೆಗ್ಡೆ ಹಾಗೂ ಬಿಜೆಪಿಯ ಪ್ರೇಮಾನಂದ ಶೆಟ್ಟಿ ತಲಾ 5 ಬಾರಿಗೆ ಗೆದ್ದಿದ್ದಾರೆ. ಕಾಂಗ್ರೆಸ್‌ನ ನವೀನ್ ಡಿಸೋಜ, ಭಾಸ್ಕರ್ ಕೆ. 4 ಬಾರಿ, ಕಾಂಗ್ರೆಸ್‌ನ ಅಬ್ದುಲ್ ರವೂಫ್ ಹಾಗೂ ಬಿಜೆಪಿಯ ದಿವಾಕರ್ ಮತ್ತು ಸುಧೀರ್ ಶೆಟ್ಟಿ ಕಣ್ಣೂರು ತಲಾ 3 ಬಾರಿ ಗೆದ್ದಿದ್ದಾರೆ. ಕಾಂಗ್ರೆಸ್‌ನ ಅಬ್ದುಲ್ ಲತೀಫ್, ಎ.ಸಿ.ವಿನಯರಾಜ್, ಕೇಶವ, ಬಿಜೆಪಿಯ ಜಾನಕಿ, ಸುಮಿತ್ರಾ, ಹೇಮಲತಾ, ಶಕೀಲಾ ಕಾವ, ಪೂರ್ಣಿಮಾ ತಲಾ ಎರಡು ಬಾರಿ ಆಯ್ಕೆಯಾದವರು.

  ಸೋತ ಪ್ರಮುಖರು: ಕೆ.ಹರಿನಾಥ್, ಪ್ರತಿಭಾ ಕುಳಾಯಿ, ರತಿಕಲಾ, ಕೆ.ಮಹಮ್ಮದ್, ಪದ್ಮನಾಭ ಅಮೀನ್, ಕಮಲಾಕ್ಷ ಸಾಲಿಯಾನ್, ಅಶೋಕ್ ಕುಮಾರ್ ಡಿ.ಕೆ, ಅಬ್ದುಲ್ ಅಜೀಜ್(ಕಾಂಗ್ರೆಸ್). ವಿಜಯ್‌ಕುಮಾರ್ ಶೆಟ್ಟಿ, ಆಶಾ ಡಿ’ಸಿಲ್ವ, ರಂಗನಾಥ ಕಿಣಿ(ಬಿಜೆಪಿ), ರೇವತಿ(ಪಕ್ಷೇತರ).

  ಪಕ್ಷಗಳ ಬಲಾಬಲ ಹೇಗಿತ್ತು?
  1984 : ಕಾಂಗ್ರೆಸ್-42, ಬಿಜೆಪಿ-6, ಜನತಾ ಪಕ್ಷ-2, ಸಿಪಿಎಂ-1
  1989 : ಕಾಂಗ್ರೆಸ್-34, ಬಿಜೆಪಿ-10, ಜನತಾ ಪಕ್ಷ-5, ಸಿಪಿಎಂ-1, ಪಕ್ಷೇತರ-1
  1997 : ಕಾಂಗ್ರೆಸ್-28, ಬಿಜೆಪಿ-24, ಜನತಾ ದಳ-7, ಸಿಪಿಎಂ-1
  2002 : ಕಾಂಗ್ರೆಸ್-43, ಬಿಜೆಪಿ-14, ಪಕ್ಷೇತರರು-3
  2007 : ಬಿಜೆಪಿ-34,ಕಾಂಗ್ರೆಸ್-20, ಜೆಡಿಎಸ್-1, ಸಿಪಿಎಂ-1, ಪಕ್ಷೇತರರು-4
  2013 : ಕಾಂಗ್ರೆಸ್-35, ಬಿಜೆಪಿ-20, ಜೆಡಿಎಸ್-2, ಸಿಪಿಎಂ-1, ಎಸ್‌ಡಿಪಿಐ-1, ಪಕ್ಷೇತರ-1
  2019: ಬಿಜೆಪಿ-44, ಕಾಂಗ್ರೆಸ್-14, ಎಸ್‌ಡಿಪಿಐ-2

ಅಧಿಕ ಅಂತರದ ಗೆಲುವು: 2342 ಮತ
ಕುಳಾಯಿ ವಾರ್ಡ್‌ನಲ್ಲಿ ವೇದಾವತಿ(ಬಿಜೆಪಿ) ಅವರು ಗಾಯತ್ರಿ(ಕಾಂಗ್ರೆಸ್) ವಿರುದ್ಧ

ಕಡಿಮೆ ಅಂತರದ ಗೆಲುವು: 26 ಮತ
-ಮರೋಳಿ ವಾರ್ಡ್‌ನಲ್ಲಿ ಕೇಶವ(ಕಾಂಗ್ರೆಸ್) ಅವರು ಕಿರಣ್ ದೇವಾಡಿಗ(ಬಿಜೆಪಿ) ವಿರುದ್ಧ

ಮನಪಾ ಚುನಾವಣೆ ಮತ ಎಣಿಕೆ ಶಾಂತಿಯುತ
ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಗುರುವಾರ ರೊಸಾರಿಯೋ ಪ್ರೌಢಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಹೊರ ಆವರಣದಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐ ಪಕ್ಷಗಳ ನೂರಾರು ಕಾರ್ಯಕರ್ತರು ಜಮಾಯಿಸಿ, ಪಕ್ಷದ ಅಭ್ಯರ್ಥಿ ಗೆದ್ದು ಬರುತ್ತಿದ್ದಂತೆ ಹೂವಿನ ಹಾಗೂ ಗಂಧದ ಮಾಲಾರ್ಪಣೆಗೈದು, ಪಕ್ಷಕ್ಕೆ ಜೈಕಾರ ಹಾಕಿ ಸಂಭ್ರಮಿಸಿದರು.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಮೊದಲ ಸುತ್ತು ಆರಂಭಗೊಂಡಿತು. ವಿವಿಧ ಪಕ್ಷಗಳ ಕಾರ್ಯಕರ್ತರು ಬೆಳಗ್ಗೆ 7.30ಕ್ಕೆ ಮತ ಎಣಿಕೆ ಕೇಂದ್ರದ ಹೊರ ಆವರಣದಲ್ಲಿ ಜಮಾಯಿಸಿದರು. ಸುಮಾರು 10 ಗಂಟೆ ವೇಳೆಗೆ ಇಲ್ಲಿನ ಎರಡು ರಸ್ತೆಗಳಲ್ಲಿ ಕಾರ್ಯಕರ್ತರು ತುಂಬಿ ತುಳುಕಿದರು.

ಲಿತಾಂಶ ಒಂದೊಂದಾಗಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಗೆದ್ದವರು ಹಾಗೂ ಸೋತವರು ತಮ್ಮ ಪಕ್ಷದ ಏಜೆಂಟರ ಜತೆಗೆ ಮತ ಎಣಿಕೆ ಕೇಂದ್ರದಿಂದ ಹೊರಬಂದರು. ಗೆದ್ದವರನ್ನು ಪಕ್ಷದ ಕಾರ್ಯಕರ್ತರು ಹೆಗಲಿಗೇರಿಸಿಕೊಂಡು ಹೂಮಾಲೆಯೊಂದಿಗೆ ಸ್ವಾಗತಿಸಿದರು.

12 ಅಧಿಕಾರಿಗಳಿಂದ ಮತ ಎಣಿಕೆ: ತಲಾ 5 ವಾರ್ಡ್‌ಗೆ ಒಬ್ಬರಂತೆ ಒಟ್ಟು 12 ಚುನಾವಣಾಧಿಕಾರಿಗಳು 12 ಕೊಠಡಿಗಳಲ್ಲಿ ಎಣಿಕೆ ಕಾರ್ಯ ನಡೆಸಿದರು. ಒಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್‌ನ ಮತ ಎಣಿಕೆ ಕೈಗೊಂಡರು. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಖುದ್ದು ಹಾಜರಿದ್ದು, ಮತ ಎಣಿಕೆ ಯಶಸ್ವಿಯಾಗುವಂತೆ ನೋಡಿಕೊಂಡರು.

ಬಿಗು ಬಂದೋಬಸ್ತ್: ಮತ ಎಣಿಕೆ ಕೇಂದ್ರಕ್ಕೆ ಸಂಪರ್ಕಿಸುವ ಪೊಲೀಸ್ ಆಯುಕ್ತರ ಕಚೇರಿ ಪಕ್ಕದ ರಸ್ತೆಯ ಕಾರ್ಮೆಲ್ ಸ್ಕೂಲ್ ಭಾಗದಲ್ಲಿ ಜನರ ಸಂಚಾರಕ್ಕೆ ಪೊಲೀಸರು ತಡೆ ಒಡಿದ್ದರು. ರ‌್ಯಾಪಿಡ್ ಆ್ಯಕ್ಷನ್ ೆರ್ಸ್ ಸೇರಿದಂತೆ ಮಂಗಳೂರಿನ ಪೊಲೀಸರು ಈ ರಸ್ತೆಯಲ್ಲಿ ಮತ ಎಣಿಕೆ ಕೇಂದ್ರದ ಶಾಲೆಯ ದ್ವಾರದವರೆಗೆ ಹೋಗಲು ಯಾರಿಗೂ ಅವಕಾಶ ನೀಡಲಿಲ್ಲ. ಹೊಗೆಬಜಾರ್ ರಸ್ತೆ ಮೂಲಕ ಬರುವ ಕಾರ್ಯಕರ್ತರಿಗೂ ಕೋಸಿ ಕಾರ್ನರ್‌ವರೆಗೆ ಮಾತ್ರ ಬರಲು ಅವಕಾಶವಿತ್ತು. ಆ ಬಳಿಕ ಮತ ಎಣಿಕೆ ಕೇಂದ್ರದ ಮುಂಭಾಗದವರೆಗೆ ಬರಲು ಪೊಲೀಸರು ಅವಕಾಶ ನೀಡಲಿಲ್ಲ. ಆದರೆ, ೆರಂ ಮಾಲ್ ಮುಂಭಾಗದ ರಸ್ತೆಯಲ್ಲಿ ಕಾರ್ಯಕರ್ತರ ಸಂಚಾರಕ್ಕೆ ಯಾವುದೇ ತಡೆ ಇರಲಿಲ್ಲ. ಆ ಮಾರ್ಗವಾಗಿ ಬಂದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಮುಂಭಾಗದಲ್ಲೇ ನಿಂತು ಸಂಭ್ರಮಾಚರಣೆ ನಡೆಸಿದರು.

ತೆರೆದ ಜೀಪಿನಲ್ಲಿ ಮೆರವಣಿಗೆ: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಲವರು ಮತ ಎಣಿಕೆ ಕೇಂದ್ರದಿಂದ ತೆರೆದ ಜೀಪಿನಲ್ಲಿ ತಮ್ಮ ವಾರ್ಡ್‌ಗಳಿಗೆ ತೆರಳಿದರು. ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಕಾರ್ಯಕರ್ತರು ನಾಸಿಕ್ ಬ್ಯಾಂಡ್ ಬಡಿದು ಸ್ವಾಗತಿಸಿದರು. ಅವರನ್ನು ಸ್ಟೇಟ್‌ಬ್ಯಾಂಕ್ ಮೂಲಕ ಮೆರವಣಿಗೆಯಲ್ಲಿ ಕರೆದೊಯ್ದರು.

ತುತ್ತೂರಿ, ಹೂ ಮಾಲೆಗೆ ಬೇಡಿಕೆ: ಮತ ಎಣಿಕೆ ಕೇಂದ್ರದ ಹೊರ ಭಾಗದಲ್ಲಿ ತುತ್ತೂರಿ, ಹೂವು ಹಾಗೂ ಗಂಧದ ಮಾಲೆ, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಧ್ವಜಗಳಿಗೆ ಭಾರಿ ಬೇಡಿಕೆ ಕಂಡು ಬಂತು. ಆಯಾ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಹಾಗೂ ತುತ್ತೂರಿ ಮುಗಿಬಿದ್ದು ಖರೀದಿಸಿದರು. ಮಧ್ಯಾಹ್ನದ ವೇಳೆಗೆ ಇಡೀ ಪರಿಸರದಲ್ಲಿ ತುತ್ತೂರಿ ಶಬ್ದ ಕೇಳಿ ಬಂತು.

ಹೊರ ಠಾಣೆ: ಮತ ಎಣಿಕೆ ಕೇಂದ್ರದಲ್ಲಿ ತಾತ್ಕಾಲಿಕ ಹೊರ ಠಾಣೆ ತೆರೆಯಲಾಗಿತ್ತು. ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಡಿಸಿಪಿ ಲಕ್ಷ್ಮೀ ಗಣೇಶ್, ಎಸಿಪಿ ಶ್ರೀನಿವಾಸ ಗೌಡ, ಭಾಸ್ಕರ ಒಕ್ಕಲಿಗ, ಮಂಜುನಾಥ ಶೆಟ್ಟಿ ಮೊದಲಾದವರು ಹೊರ ಠಾಣೆಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು. ಎಲ್ಲಿಯೂ ಬಂದೋಬಸ್ತ್‌ಗೆ ಲೋಪವಾಗದಂತೆ ಸಿಬ್ಬಂದಿಗೆ ಸೂಚನೆ ನೀಡಿ ಉತ್ತಮ ರೀತಿಯಲ್ಲಿ ಬಂದೋಬಸ್ತ್ ನಿರ್ವಹಣೆ ಮಾಡಿದರು.

ಪಟಾಕಿ ಬಂದಂತೆ ಹಿಂದಕ್ಕೆ: ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಅಭಿನಂದಿಸಲೆಂದು ಬಂದಿದ್ದ ಕೆಲವರು ಸೋಲು ಖಚಿತವಾಗುತ್ತಿದ್ದಂತೆ ಅಲ್ಲಿಂದ ನಿರ್ಗಮಿಸಿದರು. ಗೆದ್ದ ಬಳಿಕ ಸಂಭ್ರಮಿಸುವ ಸಂದರ್ಭ ಪಟಾಕಿ ಸಿಡಿಸಲು ಯೋಚಿಸಿದ್ದ ಕೆಲವರು ವಾಹನದಲ್ಲಿ ಪಟಾಕಿಯನ್ನೂ ತಂದಿದ್ದರು. ಆದರೆ, ತಮ್ಮ ಅಭ್ಯರ್ಥಿ ಸೋಲಿನ ಸುದ್ದಿ ತಿಳಿಯುತ್ತಿದ್ದಂತೆ ಪಟಾಕಿ ಇದ್ದ ವಾಹನ ಸ್ಥಳದಿಂದ ಹಿಂದಕ್ಕೆ ತೆರಳುವುದು ಕಂಡು ಬಂತು.

ಮಾಧ್ಯಮ ಕೇಂದ್ರ ವಿಳಂಬ: ಮತ ಎಣಿಕೆ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಮಾಧ್ಯಮ ಕೇಂದ್ರದಲ್ಲಿ ಮಾಹಿತಿಗಳು ತುರ್ತು ಅಪ್‌ಡೇಟ್ ಆಗುತ್ತಿರಲಿಲ್ಲ. ಮತ ಎಣಿಕೆ ಮುಗಿದು ಅಭ್ಯರ್ಥಿಗಳು ಗೆದ್ದು ಹೊರ ಬಂದರೂ, ಯಾವ ವಾರ್ಡ್‌ನಲ್ಲಿ ಯಾರು ಗೆದ್ದಿದ್ದಾರೆ? ಅವರು ಎಷ್ಟು ಮತ ಪಡೆದಿದ್ದಾರೆ? ಎನ್ನುವ ಮಾಹಿತಿ ಅರ್ಧ ತಾಸು ವಿಳಂಬವಾಗಿ ಲಭ್ಯವಾಗುತ್ತಿತ್ತು. ಹಾಗಾಗಿ ಹೆಚ್ಚಿನ ಮಾಧ್ಯಮ ಪ್ರತಿನಿಧಿಗಳು ಹೊರಗಡೆಗೆ ಬಂದು ಕೇಂದ್ರದಿಂದ ಹೊರಬರುತ್ತಿದ್ದಂತೆ ಅವರಿಂದ ವಿವರ ಪಡೆದುಕೊಂಡರು.

 ಗುರುತು ಚೀಟಿ ಇದ್ದವರಿಗಷ್ಟೇ ಪ್ರವೇಶ: ರಾಜಕೀಯ ಪಕ್ಷಗಳಿಂದ ನಿಯೋಜನೆಗೊಂಡಿರುವ ಚುನಾವಣಾ ಆಯೋಗದಿಂದ ಅಧಿಕೃತವಾಗಿ ಗುರುತುಪತ್ರ ಪಡೆದಿರುವ ಎಣಿಕೆ ಏಜೆಂಟರು, ಅಭ್ಯರ್ಥಿಗಳಿಗೆ ಮತ ಎಣಿಕೆ ಕೇಂದ್ರದಲ್ಲಿರಲು ಅವಕಾಶ ಕಲ್ಪಿಸಲಾಗಿತ್ತು. ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ರೊಸಾರಿಯೋ ಪ್ರೌಢಶಾಲೆಯ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಲಾಗಿತ್ತು. ಅಧಿಕಾರಿ, ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸ್ ಮೈದಾನದಲ್ಲಿ ಮತ್ತು ಸಾರ್ವಜನಿಕರಿಗೆ ನೆಹರೂ ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

144 ಸೆಕ್ಷನ್ ಜಾರಿ: ಮತ ಎಣಿಕೆ ನಡೆಯುವ ರೋಜಾರಿಯೋ ಪ್ರೌಢಶಾಲೆ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆ ತನಕ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿತ್ತು. ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, 15 ಇನ್‌ಸ್ಪೆಕ್ಟರ್‌ಗಳು, 45 ಪಿಎಸ್‌ಐ, 300ಕ್ಕಿಂತಲೂ ಅಧಿಕ ಪೊಲೀಸರು, ಹೋಮ್‌ಗಾರ್ಡ್, ಕೆಎಸ್‌ಆರ್‌ಪಿ ತುಕಡಿ, ಆರ್‌ಎಎಫ್ ಸಿಬ್ಬಂದಿಯನ್ನು ಮತ ಎಣಿಕೆ ಕೇಂದ್ರದ ಸುತ್ತ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಸುರತ್ಕಲ್ ವಲಯ ವ್ಯಾಪ್ತಿಯಲ್ಲಿ 7 ಹೊಸಮುಖ
ಲೋಕೇಶ್ ಸುರತ್ಕಲ್
ಸುರತ್ಕಲ್ ವ್ಯಾಪ್ತಿಯ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಸೇರಿದ ಬಳಿಕ ಪಾಲಿಕೆಗೆ ನಡೆದ ಐದನೇ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಶೇ.50 ಮೀಸಲಾತಿ ಜಾರಿಗೆ ಬಂದಿದೆ. ಇದರಿಂದ ವಲಯ ಕಚೇರಿಗೆ ಸೇರಿದ ಒಟ್ಟು 11 ಕ್ಷೇತ್ರಗಳಲ್ಲಿ ಒಟ್ಟು 9 ಮಂದಿ ಮಹಿಳಾ ಕಾರ್ಪೋರೇಟರ್‌ಗಳೇ ಈ ಸಲ ಆಯ್ಕೆಯಾಗಿದ್ದಾರೆ.
ಬಿಜೆಪಿಯ ಶೋಭಾ ರಾಜೇಶ್ ಒಂದನೇ ವಾರ್ಡ್‌ನಿಂದ, ಶ್ವೇತಾ ಎ. ಎರಡನೇ ವಾರ್ಡ್‌ನಿಂದ, ಕಾಟಿಪಳ್ಳ 4ನೇ ವಾರ್ಡ್‌ನಿಂದ ಲಕ್ಷ್ಮಿ ಶೇಖರ್ ದೇವಾಡಿಗ, 6ನೇ ಇಡ್ಯಾ ಪೂರ್ವ ವಾರ್ಡ್‌ನಿಂದ ಸರಿತಾ ಶಶಿಧರ್, 7ನೇ ಇಡ್ಯಾ ಪಶ್ವಿಮ ವಾರ್ಡ್‌ನಿಂದ ನಯನಾ ಆರ್.ಕೋಟ್ಯಾನ್, 9ನೇ ಕುಳಾಯಿ ವಾರ್ಡ್‌ನಿಂದ ಜಾನಕಿ ಯಾನೆ ವೇದಾವತಿ, 10ನೇ ಪಣಂಬೂರು ವಾರ್ಡ್‌ನಿಂದ ಸುಮಿತ್ರಾ ಕೆ., 11ನೇ ಪಣಂಬೂರು ವಾರ್ಡ್‌ನಿಂದ ಸುನಿತಾ ಹಾಗೂ 5ನೇ ಕಾಟಿಪಳ್ಳ ವಾರ್ಡ್‌ನಿಂದ ಎಸ್‌ಡಿಪಿಐನ ಶಂಶಾದ್ ಅಬೂಬಕ್ಕರ್ ಆಯ್ಕೆಯಾದವರು.
ಕಳೆದ ಅವಧಿಯಲ್ಲಿ ಒಂದನೇ ವಾರ್ಡ್‌ನಿಂದ ರೇವತಿ ಪುತ್ರನ್, ಎರಡನೇ ವಾರ್ಡ್‌ನಿಂದ ಸುಮಿತ್ರಾ ಕೆ., 8ನೇ ಹೊಸಬೆಟ್ಟು ವಾರ್ಡ್‌ನಿಂದ ಪ್ರತಿಭಾ ಕುಳಾಯಿ ಪ್ರತಿನಿಧಿಸಿದ್ದು, ಈ ಪೈಕಿ ಸುಮಿತ್ರಾ ಕೆ. ಬದಲಾದ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಜಾನಕಿ ಯಾನೆ ವೇದಾವತಿ ಈ ಹಿಂದೆ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈಗ ಆಯ್ಕೆಯಾಗಿರುವ ಒಂಬತ್ತು ಸದಸ್ಯರಲ್ಲಿ ಹೊಸಮುಖಗಳು ಏಳು.

ಕಾಂಗ್ರೆಸ್‌ಗೆ ಭಾರಿ ಹಿನ್ನಡೆ: ಪಾಲಿಕೆ ವ್ಯಾಪ್ತಿಯ ಒಟ್ಟು 22 ಕ್ಷೇತ್ರಗಳಲ್ಲಿ ಹಿಂದಿನ ಅವಧಿಯಲ್ಲಿ 11ರಲ್ಲಿ ಕಾಂಗ್ರೆಸ್, 9ರಲ್ಲಿ ಬಿಜೆಪಿ, ಎಸ್‌ಡಿಪಿಐ, ಸಿಪಿಎಂ ತಲಾ ಒಂದರಲ್ಲಿ ಪ್ರತಿನಿಧಿಸಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಂಜಿಮೊಗರು(ಅನಿಲ್ ಕುಮಾರ್), ಕದ್ರಿ ವಾರ್ಡ್(ಭಾಸ್ಕರ್ ಕದ್ರಿ) ಸೇರಿದಂತೆ ಒಟ್ಟು ಎರಡು ವಾರ್ಡ್‌ಗಳಲ್ಲಿ, ಎಸ್‌ಡಿಪಿಐ 1 ಸ್ಥಾನದಲ್ಲಿ ನೆಲೆ ಕಂಡುಕೊಂಡಿದ್ದು ಮಿಕ್ಕ ಸ್ಥಾನ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಭಾರಿ ಏರುಪೇರು ಕಂಡಿದೆ ಎಂದು ಅಂದಾಜಿಸಲಾಗುತ್ತಿದೆ. 3ನೇ ಕಾಟಿಪಳ್ಳ ವಾರ್ಡ್(ಲೋಕೇಶ್ ಬೊಳ್ಳಾಜೆ) ಪ್ರಥಮ ಭಾರಿಗೆ ಬಿಜೆಪಿ ಕೈವಶವಾಗಿದೆ.

ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಹಿನ್ನಡೆಯಾಗಿರುವುದು ನಿಜ. ಚುನಾವಣೆಗೆ ಕೆಲವೇ ದಿನ ಇರುವಾಗ ಅಯೋಧ್ಯೆ ತೀರ್ಪು ಪ್ರಕಟಿಸಲಾಗಿರುವುದು, ಎಸ್‌ಡಿಪಿಐ ಬಲವಾಗುತ್ತಿರುವುದು ಕೂಡ ಕಾರಣ.
ಮೊದೀನ್ ಬಾವಾ, ಮಾಜಿ ಶಾಸಕ

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...