More

    ಭವಿಷ್ಯದ ಭಾರತ ನಿರ್ಮಾಣಕ್ಕೆ ಚಿಣ್ಣರ ಬಿಂಬ ಮಾದರಿ

    ಮಂಗಳೂರು:  ಮಕ್ಕಳಲ್ಲಿ ಸಂಸ್ಕೃತಿ, ಭಾಷೆ, ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಮಕ್ಕಳೋತ್ಸವ ಒಳನಾಡಿನ ನಮ್ಮಂಥವರಿಗೆ ಆಶ್ವರ್ಯಕರ ಸಂಗತಿ. ಆದರೆ ಸಮಾಜದಲ್ಲಿ ಸಂಸ್ಕೃತಿಗಳು ದೂರವಾಗುವ, ಮೂಲಭಾಷೆ ಮರೆಯುವ ಈ ಕಾಲಘಟ್ಟದಲ್ಲಿ ಮುಂಬೈಯಂಥ ಮಹಾನಗರಿಯಲ್ಲಿ ಆಧುನಿಕತೆಯ ಸ್ಪರ್ಶದ ಮಧ್ಯೆಯೂ ಇಂಥ ಸಂಸ್ಕೃತಿಯ ಅಪ್ಪುಗೆ ಸ್ವಾಗತಾರ್ಹ ಮತ್ತು ಅಪ್ಯಾಯಮಾನ ಎಂದು ಕರ್ನಾಟಕ ವಿಧಾನಸಭಾ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ತಿಳಿಸಿದರು.

    ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್​ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಶನಿವಾರ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರ ಸಹಯೋಗದಲ್ಲಿ ಮುಂಬೈಯ ಮಕ್ಕಳ ಸಂಸ್ಥೆ ಚಿಣ್ಣರ ಬಿಂಬ ಆಯೋಜಿಸಿದ್ದ 17ನೇ ಮಕ್ಕಳ ಉತ್ಸವ ಉದ್ಘಾಟಿಸಿ ಮಾತನಾಡಿದರು.

    17 ವರ್ಷಗಳ ಹಿಂದೆ ಕೇವಲ 50 ಮಕ್ಕಳಿಂದ ಆರಂಭವಾದ ಚಿಣ್ಣರ ಬಿಂಬ ಇಂದು 6 ಸಾವಿರ ಮಕ್ಕಳ ತಂಡವಾಗಿ ಬೆಳೆದು ಮನೆ, ಮನೆಗಳಿಗೆ ತೆರಳಿ ಸಂಸ್ಕೃತಿಯನ್ನು ರೂಪಿಸಿ ಸಂಸ್ಕಾರವನ್ನು ರೂಢಿಸಿದೆ. ಅಂದರೆ ಇದೊಂದು ತಪಸ್ಸಿನ ಕಾಯಕ. ಚಿಣ್ಣರ ಬಿಂಬ ನಿಜಾರ್ಥದಲ್ಲಿ ಚಿಣ್ಣರ ಮೂಲಕ ಸಮಾಜಕ್ಕೆ ಶಕ್ತಿಯಾಗಿದೆ ಎಂದರು.

    ಬಂಟ್ಸ್ ಸಂಘ ಮುಂಬೈ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಕರುಣಾಕರ್ ಎಂ. ಶೆಟ್ಟಿ (ಮೆಕಾೖ), ಜೆ.ಪಿ. ಶೆಟ್ಟಿ (ಪೆಸ್ಟ್ ಮೊರ್ಟಂ), ದೇವದಾಸ್ ಸುವರ್ಣ(ಬೈನೈಟ್), ಬಂಟ್ಸ್ ಸಂಘ ಮುಂಬೈ ಮಹಿಳಾ ವಿಭಾಗ ಅಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಚಿಣ್ಣರ ಬಿಂಬದ ರೂವಾರಿ ಮತ್ತು ಪ್ರವರ್ತಕ ಪ್ರಕಾಶ್ ಬಿ. ಭಂಡಾರಿ, ಟ್ರಸ್ಟಿ ರೇಣುಕಾ ಪಿ. ಭಂಡಾರಿ, ಚಿಣ್ಣರ ಬಿಂಬದ ಸ್ಥಾಪಕ ಕಾರ್ಯಾಧ್ಯಕ್ಷೆ ಪೂಜಾ ಪಿ. ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಪಿ. ಭಂಡಾರಿ ಶುಭ ಕೋರಿದರು. ಚಿಣ್ಣರ ಬಿಂಬದ ವಿಶ್ವಸ್ಥ ಸದಸ್ಯ ಡಾ.ಸುರೇಂದ್ರಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು.

    ವಿವಿಧ ಶಾಖೆಗಳ ಮುಖ್ಯಸ್ಥರಾದ ಗೀತಾ ಹೆರಳೆ, ಆಶಾಲತಾ ಕೊಟ್ಟಾರಿ, ಸುಮಿತ್ರಾ ದೇವಾಡಿಗ, ವನಿತಾ ವೈ. ನೋಂಡಾ, ಸಂಧ್ಯಾ ಮೋಹನ್, ತೋನ್ಸೆ ಸಂಜೀವ ಪೂಜಾರಿ, ರಾಜವರ್ಮ ಜೈನ್, ಅಶೋಕ್ ಶೆಟ್ಟಿ ಕಲ್ವಾ, ವಿನಯಾ ಶೆಟ್ಟಿ ಥಾಣೆ, ಸವಿತಾ ಶೆಟ್ಟಿ ಪೊವಾಯಿ ಉಪಸ್ಥಿತರಿದ್ದರು. ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳು, ಭಜನೆ, ಶ್ಲೋಕ ಪಠಣ, ಗೀತನೃತ್ಯ ಮೇಳ, ಮಾತುಕೂಟ (ಚರ್ಚೆ), ಜಾನಪದ ಗೀತಾ ಗುಂಜನ, ಜಾನಪದ ನೃತ್ಯ, ಕಿರು ಅಭಿನಯ, ಪ್ರಹಸನ, ಯಕ್ಷಗಾನ, ಪ್ರತಿಭಾ ಸ್ಪರ್ಧೆ, ಪಾಲಕರಿಗೆ ಸಮೂಹ ಗಾಯನ ನಡೆಯಿತು.

    ಮಕ್ಕಳ ಮನಸ್ಸನ್ನು ಪರಿವರ್ತಿಸಿ ಅವರಿಗೆ ಭಜನೆ, ಸಂಸ್ಕೃತಿ, ಕನ್ನಡ ಕಲಿಸುವುದು ಸಾಮಾನ್ಯ ವಿಷಯವಲ್ಲ. ಇದು ಸರ್ಕಾರ, ವಿಶ್ವವಿದ್ಯಾಲಯಗಳು ಮಾಡುವಂಥ ಕೆಲಸ. ಆದರೆ ಚಿಣ್ಣರಬಿಂಬ ಮಾಡುತ್ತಿರುವುದು ಅಭಿನಂದನೀಯ.

    | ಪದ್ಮನಾಭ ಎಸ್. ಪಯ್ಯಡೆ ಅಧ್ಯಕ್ಷ, ಬಂಟ್ಸ್ ಸಂಘ ಮುಂಬೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts