18 C
Bangalore
Friday, December 6, 2019

ಬಿಂದಾಸ್ ಬದುಕಿನ ಖೇರ್…

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

|ರವೀಂದ್ರ ಎಸ್. ದೇಶಮುಖ್

ಪ್ರಸಕ್ತ ಎಲ್ಲೆಡೆ ‘ದ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ಚಿತ್ರದ್ದೇ ಚರ್ಚೆ. ಥೇಟ್ ಮನಮೋಹನ ಸಿಂಗ್​ರನ್ನು ಹೋಲುವಂತೆ ಈ ಚಿತ್ರದಲ್ಲಿ ನಟಿಸಿರುವ ಅನುಪಮ್ ಖೇರ್ ಮತ್ತೊಮ್ಮೆ ನಟನಾ ಪರಿಣತಿ, ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ಚಿತ್ರ ವೀಕ್ಷಿಸಿದ ಖೇರ್ ಅಮ್ಮ ದುಲಾರಿ ಮಗನ ನಟನೆಗೆ 100ಕ್ಕೆ 100 ಅಂಕ ನೀಡಿದ್ದಾರೆ. ಸ್ವಾರಸ್ಯವೆಂದರೆ, ಈ ಪಾತ್ರದ ಆಫರ್ ಬಂದಾಗ ಬಿಲ್​ಕುಲ್ ಒಲ್ಲೆ ಎಂದುಬಿಟ್ಟಿದ್ದರಂತೆ ಅನುಪಮ್ ಅದೊಂದು ದಿನ ಮನೆಯಲ್ಲಿ ಟಿ.ವಿ. ನೋಡುತ್ತಿರಬೇಕಾದರೆ ನ್ಯೂಸ್​ನಲ್ಲಿ ಮನಮೋಹನರ ನಡಿಗೆಶೈಲಿಯನ್ನು ಗಮನಿಸಿದರು. ಅದನ್ನು ಅನುಕರಿಸಲು ಹೋದರೆ, ಸಿಂಗ್​ರಂತೆ ಎರಡು ಹೆಜ್ಜೆ ಕೂಡ ನಡೆಯಲು ಆಗಲಿಲ್ಲವಂತೆ. ಒಂದು ವಾರದ ಸತತ ಪ್ರಾಕ್ಟಿಸ್ಟ್ ಬಳಿಕ ಖೇರ್ ತಮಗೇ ತಾವು ಹಾಕಿಕೊಂಡ ಸವಾಲಿನಲ್ಲಿ ಗೆದ್ದುಬಿಟ್ಟರು. ಇದೊಂದು ಚಾಲೆಂಜಿಂಗ್ ಪಾತ್ರ, ಯಾವುದೇ ಕಾರಣಕ್ಕೂ ಕೈಚೆಲ್ಲಬಾರದು ಎಂದು ನಿರ್ಧರಿಸಿ ತೆರೆ ಮೇಲೆ ‘ಆಕ್ಸಿಡೆಂಟಲ್ ಪಿಎಂ’ ಆಗಲು ಒಪ್ಪಿಕೊಂಡರು. ನಡಿಗೆ ಕಲಿತರೂ, ಸಿಂಗ್​ರ ಕ್ಷೀಣ ದನಿ ಅನುಕರಿಸುವುದು, ದೇಹಭಾಷೆಯಂತೇ ನಡೆದುಕೊಳ್ಳುವುದು ಮತ್ತೊಂದು ಸವಾಲಾಗಿತ್ತು. ಆದರೆ, ಖೇರ್ ಅದನ್ನೆಲ್ಲ ಯಶಸ್ವಿಯಾಗಿ ಎದುರಿಸಿ, ಸೈ ಎನಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಯಾವುದೇ ವಿವಾದ ಇಲ್ಲ. ಮನಮೋಹನ್ ಸಿಂಗ್ ಕೂಡ ಈ ಚಿತ್ರ ನೋಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಖಚಿತವಾಗಿ ಹೇಳುವ ಖೇರ್ 2018ರ ಅಕ್ಟೋಬರ್​ನಲ್ಲಿ ಫಿಲ್ಮ್ ಆಂಡ್ ಟೆಲಿವಿಜನ್ ಇನ್​ಸ್ಟಿಟ್ಯೂಟ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಎಲ್ಲರಿಗೂ ಅಚ್ಚರಿ. ಆ ಸಂಸ್ಥೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ಖೇರ್ ಇಂಥ ನಿರ್ಧಾರ ತಳೆಯಲು ಕಾರಣ ಅವರ ಕೈಯಲ್ಲಿ ಈಗ ಹಲವಾರು ಅಂತಾರಾಷ್ಟ್ರೀಯ ಅಸೈನ್​ವೆುಂಟ್​ಗಳಿರುವುದು. ಅಮೆರಿಕನ್ ಟಿ.ವಿ. ಶೋಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಖೇರ್ ವರ್ಷದ ಏಳು ತಿಂಗಳು ದೇಶದಿಂದ ಹೊರಗಡೆ ಇರಬೇಕಾಗಿದೆ. ಪಾತ್ರದಲ್ಲಿ ಸಂಪೂರ್ಣ ತನ್ಮಯರಾಗುವುದು, ಪಾತ್ರ ಸಣ್ಣದಿರಲಿ-ದೊಡ್ಡದಿರಲಿ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದು, ಹೊಸದೇ ಪ್ರಯೋಗಗಳನ್ನು ಕೈಗೊಳ್ಳುವುದು, ಕಲಾವಿದರನ್ನು ಗೌರವಿಸುವುದು… ಇದೆಲ್ಲ ಖೇರ್ ವಿಶೇಷತೆ. ಈಗ ಅಂತಾರಾಷ್ಟ್ರೀಯ ಖ್ಯಾತಿ, ಮನ್ನಣೆ ಒದಗಿ ಬಂದಿದ್ದರೂ ಕೆಲವೇ ದಶಕಗಳ ಮುನ್ನ ಅವರು ಅವಕಾಶಗಳಿಗಾಗಿ, ಪಾತ್ರಕ್ಕಾಗಿ ಶೋಧಿಸುತ್ತಿದ್ದರು ಎಂಬುದು ವಾಸ್ತವವೇ. ಈಗಲೂ ಮುಂಬೈಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅನುಪಮ್ ಅಮ್ಮನಿಗಾಗಿ ಶಿಮ್ಲಾದಲ್ಲಿ ಒಂದು ಪುಟ್ಟ ಮನೆ ಕಟ್ಟಿಸಿದ್ದಾರೆ.

ನಾಟಕಗಳಲ್ಲಿ ನಟಿಸುತ್ತ ಹಾಲಿವುಡ್ ಅಂಗಳದವರೆಗೂ ತಲುಪಿರುವ ಖೇರ್ ಬದುಕಿನ ಪ್ರತಿ ಹೆಜ್ಜೆಯೂ ರೋಚಕ. ‘ಕುಛ್ ಭೀ ಹೋ ಸಕ್ತಾ ಹೈ’(www.actorprepares.net)ಎಂಬ| ತಮ್ಮ ಆಕ್ಟಿಂಗ್ ಸ್ಕೂಲ್ ಮೂಲಕ ನೂರಾರು ಉದಯೋನ್ಮುಖ ನಟರನ್ನು ತಯಾರು ಮಾಡುತ್ತಿದ್ದು, ಅನುಪಮ್ ಖೇರ್ ಫೌಂಡೇಷನ್ (www.anupamkherfoundation.org)ಮೂಲಕ ಬಡಮಕ್ಕಳಿಗೆ ಶಿಕ್ಷಣ ಮತ್ತು ಜೀವನಮೌಲ್ಯಗಳನ್ನು ನೀಡುತ್ತಿದ್ದಾರೆ.

ಹಿಮದ ಮಡಿಲಿನಲ್ಲಿರುವ ನಿಸರ್ಗರಮ್ಯ ತಾಣ ಶಿಮ್ಲಾದಲ್ಲಿ (1955 ಮಾರ್ಚ್ 7) ಜನಿಸಿದ ಅನುಪಮ್ ಬಾಲ್ಯದಲ್ಲೇ ಮಿಮಿಕ್ರಿ ಮಾಡುತ್ತಿದ್ದ, ಶಾಲೆಯ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ. ತಂದೆ ಪುಷ್ಕರ್ ನಾಥ್ ಅರಣ್ಯ ಇಲಾಖೆಯಲ್ಲಿ ಕ್ಲರ್ಕ್. ತಾಯಿ ದುಲಾರಿ ಗೃಹಿಣಿ. ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ಸೋದರ ಸಂಬಂಧಿ ಸೇರಿ 11 ಜನರ ಅವಿಭಕ್ತ ಕುಟುಂಬ ಇವರದ್ದು. ತಂದೆಗೆ ಬರುತ್ತಿದ್ದ 90 ರೂಪಾಯಿ ಸಂಬಳದಲ್ಲೇ ಸಂಸಾರದ ನೌಕೆ ಸಾಗಬೇಕಿತ್ತು. ಖರ್ಚು ನಿರ್ವಹಿಸುವುದು ಕಷ್ಟವಾದಾಗ ತಾಯಿ ದುಲಾರಿ ತನ್ನ ಬಂಗಾರದ ಒಡವೆಗಳನ್ನು ಮಾರಲು ಗಂಡನಿಗೆ ಕೊಟ್ಟು ಬಿಡುತ್ತಿದ್ದರಂತೆ. ಆದರೂ, ‘ಮಕ್ಕಳ ಮೇಲೆ ಪ್ರೀತಿ ಇತ್ತು. ನನಗೆ ಸಿಗುತ್ತಿದ್ದ 10 ಪೈಸೆ ಪಾಕೆಟ್ ಮನಿ ಎಂದೂ ತಪು್ಪತ್ತಿರಲಿಲ್ಲ’ ಅನುಪಮ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪ್ರಾಥಮಿಕ, ಪ್ರೌಢ ಶಿಕ್ಷಣದ ಬಳಿಕ ಚಂಡೀಗಢದ ಇಂಡಿಯನ್ ಥೇಟರ್​ನಲ್ಲಿ ಪ್ರವೇಶ ಪಡೆಯಲು 100 ರೂಪಾಯಿಗಳ ಅಗತ್ಯವಿತ್ತು. ಮನೆಯಲ್ಲಿ ಕೇಳಿದರೆ ಒಂದು ರೂಪಾಯಿಯೂ ಹುಟ್ಟಲಿಲ್ಲ. ಆಗ ದೇವಿ ಮಂದಿರವೊಂದರಿಂದ 100 ರೂ. ಕದ್ದು ನಟನೆಯ ತರಬೇತಿಗಾಗಿ ಸೇರಿಕೊಂಡರು. ಮುಂದೆ, ಪಂಜಾಬ್ ವಿ.ವಿ.ಯ ನಟನಾ ತರಬೇತಿ ವಿಭಾಗದ ಕೋರ್ಸ್​ಗೆ ಸೇರಿ ಅಗ್ರ ಶ್ರೇಯಾಕಿಂತರಾಗಿ ಹೊಮ್ಮಿ, ಚಿನ್ನದ ಪದಕ ಪಡೆದುಕೊಂಡರು. ಆಗ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(ಎನ್​ಎಸ್​ಡಿ) ಸೇರುವ ಹಾದಿ ಸುಲಭವಾಯಿತು. ಎನ್​ಎಸ್​ಡಿಯಲ್ಲಿ ನಟನೆಯ ರಹಸ್ಯಗಳನ್ನು, ಕೌಶಲಗಳನ್ನು ಶೋಧಿಸಿದ ಅವರು ರಂಗಭೂಮಿಯ ಮೇಲೆ ಎಲ್ಲ ಬಗೆಯ ಪಾತ್ರಗಳನ್ನು ನಿಭಾಯಿಸಿದರು. ಆ ಬಳಿಕ ಅವಕಾಶಗಳನ್ನು ಹುಡುಕಿಕೊಂಡು ಹೋಗಿದ್ದು ಬೆಡಗಿನ ನಗರಿ ಮುಂಬೈಗೆ. ‘ನಾನು ಕ್ವಾಲಿಫೈಡ್ ಆಕ್ಟರ್​ನಾದ್ದರಿಂದ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂದುಕೊಂಡಿದ್ದೆ. ಮುಂಬೈಗೆ ಬಂದ ಮೇಲೆ ಗೊತ್ತಾಯ್ತು ಇಲ್ಲಿ ನಟನೆಯ ಅತಿರಥ-ಮಹಾರಥಿಗಳೇ ಇದ್ದಾರೆ’ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುವ ಖೇರ್ ಅವಕಾಶಕ್ಕಾಗಿ ಚಾತಕಪಕ್ಷಿಯಂತೆ ಕಾದರು. ಮುಂಬೈಯ ಚಾಲ್​ನ ಒಂದು ಸಣ್ಣ ಮೂಲೆಯಲ್ಲಿ ಐವರು ವಾಸ ಮಾಡುತ್ತಿದ್ದರು. ಪ್ರತಿನಿತ್ಯ ಊಟ ಸಿಗೋದು ಅಪರೂಪವೇ ಆಗಿಹೋಗಿತ್ತು. ಆಗ ಸಹೋದರ ರಾಜುವನ್ನು ಮುಂಬೈಗೆ ಕರೆಯಿಸಿಕೊಂಡರು. ಆತ ಫ್ಯಾಕ್ಟರಿಯೊಂದರಲ್ಲಿ ಕೆಲಸ ಆರಂಭಿಸಿದ. ರಾಜುಗೆ ಬರುತ್ತಿದ್ದ 700 ರೂ. ಸಂಬಳದಲ್ಲೇ ಈ ಸಹೋದರರು ದಿನದೂಡತೊಡಗಿದರು.

ಅದೊಮ್ಮೆ ನಿರ್ದೇಶಕ ಮಹೇಶ್ ಭಟ್​ರನ್ನು ಭೇಟಿಯಾಗಿ, ಅವಕಾಶಕ್ಕಾಗಿ ಕೋರಿದರು. ಇವರ ನಟನಾಕೌಶಲದ ಬಗ್ಗೆ ಕೇಳಿ ತಿಳಿದಿದ್ದ ಭಟ್ ‘ಸಾರಾಂಶ’ ಚಿತ್ರದಲ್ಲಿ ಪಾತ್ರ ಕೊಟ್ಟರು. ಈ ಚಿತ್ರದಲ್ಲಿ ಖೇರ್ ನಟನೆ ಯಾವ ಪರಿ ಜನಮನ ಗೆದ್ದಿತೆಂದರೆ ಈ ಸಿನಿಮಾ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಖೇರ್ ಬಳಿ 100 ಸಿನಿಮಾಗಳಲ್ಲಿ ನಟಿಸಲು ಆಫರ್​ಗಳು ಬಂದವು. ಆ ಬಳಿಕ ಸಾಧನೆಯ ದಾರಿಯಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ನಟ, ಹಾಸ್ಯನಟ, ಖಳನಟ, ಪೋಷಕ ನಟನಾಗಿ ವಿವಿಧ ಪ್ರಾದೇಶಿಕ ಭಾಷೆ, ಬಾಲಿವುಡ್, ಹಾಲಿವುಡ್ ಸೇರಿ 535ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಎಂಟು ಬಾರಿ ಫಿಲ್ಮ್ ಫೇರ್ ಅವಾರ್ಡ್, 2004ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನವಾಗಿರುವ ಖೇರ್ ಜೀವನದ ಪ್ರತಿ ಹಂತದಲ್ಲೂ ಸೋಲೊಪ್ಪಿಕೊಳ್ಳದೆ ಮುನ್ನುಗಿದ್ದಾರೆ. ಇವರ ಯಶಸ್ಸಿನ ಪಯಣದಲ್ಲಿ ಪತ್ನಿ ಕಿರಣ್ ಖೇರ್ ಕೊಡುಗೆ ಗಮನಾರ್ಹವಾದುದು. ರಂಗಭೂಮಿ ಹಿನ್ನೆಲೆಯ ಕಿರಣ್ ಅನುಪಮ್ ಜತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಂದೆ, ಸಿನಿಲೋಕ ಪ್ರವೇಶಿಸಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದು 2009ರಲ್ಲಿ ಬಿಜೆಪಿ ಮೂಲಕ ರಾಜಕೀಯ ಪಯಣ ಆರಂಭಿಸಿದರು. 2014ರಲ್ಲಿ ಪಂಜಾಬ್​ನ ಚಂಡೀಗಢದಿಂದ ಸ್ಪರ್ಧಿಸಿ, ಲೋಕಸಭೆ ಪ್ರವೇಶಿಸಿರುವ ಕಿರಣ್, ಈಗ ಬಿಜೆಪಿಯ ಸ್ಟಾರ್ ಕ್ಯಾಂಪೇನರ್​ಗಳಲ್ಲಿ ಒಬ್ಬರು. ಅಷ್ಟೇ ಅಲ್ಲ, ಹಲವು ರಿಯಾಲಿಟಿ ಶೋಗಳಿಗೆ ಜಜ್ ಆಗಿಯೂ ಗಮನ ಸೆಳೆದಿದ್ದಾರೆ.

ಅನುಪಮ್ ಮತ್ತು ಕಿರಣ್ ಜೋಡಿ ಉತ್ಸಾಹದಿಂದಲೇ ಹೊಸ ದಾಖಲೆಗಳನ್ನು ಮಾಡುತ್ತಿದ್ದು, ಮಾತು, ಬದುಕಿನಲ್ಲೂ ಬಿಂದಾಸ್ ಆಗಿದ್ದಾರೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

ಪ್ರತಿಕ್ರಿಯಿಸಿ: [email protected], [email protected]]

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...