ಪ್ರಶಸ್ತಿಗಳು ಸಾಧನೆ ಹುಡುಕಿಕೊಂಡು ಬರಲಿ

blank

ಬಸವಕಲ್ಯಾಣ: ಪ್ರಶಸ್ತಿಗಳು ಅರ್ಹತೆ, ಸಾಧನೆಯನ್ನು ಹುಡುಕಿಕೊಂಡು ಬರಬೇಕು. ಬೇಡಿ ಪಡೆದುಕೊಳ್ಳುವಂಥ ಸಂಸ್ಕೃತಿ ಬೆಳೆಯಬಾರದೆಂದು ಎಂದು ಕಲಬುರಗಿಯ ಹಿರಿಯ ಸಾಹಿತಿ ಡಾ.ಎಸ್.ಎಂ. ಹಿರೇಮಠ ಹೇಳಿದರು.

ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಪ್ರೊ.ಸೂಗಯ್ಯ ಹಿರೇಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಲಬುರಗಿ ಶುಕ್ರವಾರ ಆಯೋಜಿಸಿದ್ದ ಪ್ರೊ.ಸೂಗಯ್ಯ ಹಿರೇಮಠ ಸ್ಮರಣಾರ್ಥ ನೀಡುವ ೨೦೨೩ರ ಪ್ರೊ.ಸೂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಟ್ರಸ್ಟ್​ನಿಂದ ಹಾರಕೂಡ ಶ್ರೀಗಳ ಮಾರ್ಗದರ್ಶನದಲ್ಲಿ ಉತ್ತಮ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಸಂಶನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಮಾತನಾಡಿ, ಹಾರಕೂಡದ ಪೂಜ್ಯರು ತ್ರಿವಿಧ ದಾಸೋಹದೊಂದಿಗೆ ಸಾಂಸ್ಕೃತಿಕ ಪರಿಸರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರೊ.ಸೂಗಯ್ಯ ಹಿರೇಮಠ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಅರ್ಹರಾದವರು ಅಭಿನಂದಾರ್ಹರು ಎಂದು ಹೇಳಿದರು.

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಹಾರಕೂಡ ಮಠವು ಸಾಹಿತ್ಯಿಕ ಹಾಗೂ ಸಮಾಜಮುಖಿ ಕಾರ್ಯಗಳಿಂದ ನಾಡಿನಾದ್ಯಂತ ಗುರುತಿಸಿಕೊಂಡಿದೆ. ಶ್ರೀಗಳ ಸಮ್ಮುಖದಲ್ಲಿ ಸಾಹಿತ್ಯ, ಕಲೆ, ಶಿಕ್ಷಣ, ಸಮಾಜ ಸೇವೆ ಹೀಗೆ ಹಲವಾರು ಕ್ಷೇತ್ರಗಳ ಸಾಧಕರಿಗೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಟ್ರಸ್ಟಿನ ಕಾರ್ಯ ಶ್ಲಾಘನಾರ್ಹವಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರಾದ ಡಾ.ಡಿ.ಬಿ. ನಾಯಕ ಮಾತನಾಡಿ, ಪ್ರೊ.ಸೂಗಯ್ಯ ಹಿರೇಮಠ ಸಮಾಜದಲ್ಲಿ ಅನಿಷ್ಟ ಪದ್ಧತಿ, ಅನ್ಯಾಯಗಳ ಕುರಿತು ಪ್ರತಿಭಟಿಸುತ್ತ ಬಂದವರು. ಅವರ ಸ್ಮರಣಾರ್ಥ ಸಾಧಕರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದು ಬಹುದೊಡ್ಡ ಕಾರ್ಯ ಎಂದು ಶ್ಲಾಘಿಸಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ, ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಲ್ಲಿನಾಥ ಹಿರೇಮಠ, ಪ್ರೊ.ಗಿರಿಮಲ್ಲ ಹರವಾಳ, ನಟರಾಜ ಹಿರೇಮಠ, ಶಾಂತಮ್ಮ ಹಿರೇಮಠ ಇತರರಿದ್ದರು.

ಮಾನು ಸಗರ ಪ್ರಾಸ್ತಾವಿಕ ಮಾತನಾಡಿದರು. ಡಾ.ಈಶ್ವರಯ್ಯ ಕೊಡಂಬಲ್ ಸ್ವಾಗತಿಸಿದರು. ಚಿದಾನಂದ ಹಿರೇಮಠ ವಂದಿಸಿದರು. ಡಾ.ಚಿ.ಸಿ. ನಿಂಗಣ್ಣ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.

ಪ್ರಶಸ್ತಿ ಸ್ವೀಕರಿಸಿದ ಮಹನೀಯರು: ೨೦೨೩ರ ಜೀವಮಾನ ಸಾಧನೆಗೆ ಸಾಹಿತ್ಯ ಕ್ಷೇತ್ರದಿಂದ ಜಾನಪದ ವಿದ್ವಾಂಸ ಡಾ.ಡಿ.ಬಿ. ನಾಯಕ ಹಾಗೂ ಜನಪದ ಕ್ಷೇತ್ರದ ಗೀಗೀ ಪದ ಕಲಾವಿದ ಚಿಂಚನಸೂರಿನ ದೇವೇಂದ್ರಪ್ಪ ಸಜ್ಜನ್ ಅವರಿಗೆ ಡಾ.ಸೂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ೫೦ರ ಸುವರ್ಣ ಸಂಭ್ರಮ ಆಚರಣೆ ನಿಮಿತ್ತ ಟ್ರಸ್ಟ್ನಿಂದ ವಿವಿಧ ಕ್ಷೇತ್ರದ ಪ್ರೊ.ಸಂಗೀತಾ ಕಟ್ಟಿಮನಿ (ಸಾಮಾಜಿಕ), ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಮಂಗಳ ಕಪುರೆ, ಪಂಚಾಕ್ಷರಿ ಪುಣ್ಯಶೆಟ್ಟಿ, ಪ್ರೊ.ಬಿ.ಎಚ್. ನಿರಗುಡಿ (ಸಾಹಿತ್ಯ), ಪ್ರೊ.ರಮೇಶ ಬಿ.ಯಾಳಗಿ, ಪ್ರೊ.ದೇವಿದಾಸ ಪವಾರ್, ಶಿವಾನಂದ ಖಜೂರ್ಗಿ, ಪ್ರೊ.ಬಾಬುರಾವ ಎಂ.ಬಿರಾದಾರ (ಶಿಕ್ಷಣ) ಅವರಿಗೆ ಸುವರ್ಣ ಕರ್ನಾಟಕ ಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

Share This Article

ಚಳಿಗಾಲದಲ್ಲಿ ಹಸಿ ಶುಂಠಿಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ? Health Benefits of Ginger

Health Benefits of Ginger  : ಶುಂಠಿಯು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…