21 C
Bangalore
Saturday, December 14, 2019

ವೈಜ್ಞಾನಿಕವಾಗಿ ಸಮಸ್ಯೆಗಳು ನಿರ್ವಹಣೆಯಾಗಲಿ

Latest News

ಸಮನ್ವಯತೆಯಿಂದ ಕೆಲಸ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ

ಕೋಲಾರ: ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಬೀದಿದೀಪ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.ಜಿಪಂ...

ಟಿಡಿ ಇಂಜೆಕ್ಷನ್​ನಿಂದ ಮಾನಸಿಕ ಆಘಾತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಟೆಟಾನಸ್ ಡಿಫ್ತೀರಿಯಾ (ಟಿಡಿ) ವ್ಯಾಕ್ಸಿನ್ ಪಡೆದ ತಾಲೂಕಿನ ಹೆಬಸೂರು ಸರ್ಕಾರಿ ಬಾಲಕಿಯರ ಶಾಲೆಯ 28...

ರೈಲ್ವೆ ಮೂಲ ಸೌಕರ್ಯಕ್ಕೆ ಆದ್ಯತೆ

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಪ್ರಯಾಣಿಕರ ಸುರಕ್ಷತೆ, ಮೂಲ ಸೌಕರ್ಯ, ಭದ್ರತೆಗೆ ಆದ್ಯತೆ ನೀಡಿದೆ ಎಂದು ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಹೇಳಿದರು.

ಸಿಎಗಳ ಪಾತ್ರ ಪ್ರಮುಖ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ದೇಶದ ಆರ್ಥಿಕ ವ್ಯವಸ್ಥೆ 5 ಟ್ರಿಲಿಯನ್ ಡಾಲರ್​ಗೆ ತಲುಪುವ ಪ್ರಧಾನಿ ಮೋದಿಯವರ ಕನಸು...

ಚಾಕಲೇಟ್ ಕೊಡುವ ಮುನ್ನ ಯೋಚಿಸಿ

ಹುಬ್ಬಳ್ಳಿ: ಮಕ್ಕಳು ಅಳುತ್ತಿದ್ದರೆ ಸಮಾಧಾನಪಡಿಸಲು ಚಾಕಲೇಟ್ ಕೊಡಿಸಲು ಕರೆದುಕೊಂಡು ಹೋಗುವುದು ಇಲ್ಲವೆ ಮಕ್ಕಳು ತಿನ್ನುತ್ತಾರೆ ಎಂದು ಚಾಕಲೇಟ್​ ತೆಗೆದುಕೊಂಡು ಹೋಗುವುದು ಸಾಮಾನ್ಯ…

ಮೈಸೂರು: ಪ್ರಸ್ತುತ ವಿಶ್ವದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ವೈಜ್ಞಾನಿಕ ಮತ್ತು ನೈತಿಕ ವಿಧಾನಗಳ ಮೂಲಕ ನಿರ್ವಹಿಸುವ ಕೆಲಸ ಆಗಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಘನಸ್ಥಿತಿ ಮತ್ತು ರಚನಾತ್ಮಕ ರಸಾಯನವಿಜ್ಞಾನ ಘಟಕದ ಪ್ರಾಧ್ಯಾಪಕ ಕೆ.ಜೆ.ರಾವ್ ಹೇಳಿದರು.

ಮೈಸೂರು ವಿವಿಯ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜಿನ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಭಾಷಣ ಮಾಡಿದರು.

ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಉತ್ತಮ ಸಾಧನೆ ಮಾಡುತ್ತಿದ್ದು, ಇತ್ತೀಚೆಗೆ ಬ್ಲಾೃಕ್ ಹೋಲ್ ಅಸ್ತಿತ್ವದ ಕುರಿತಂತೆ ಹೆಚ್ಚು ಸಂಶೋಧನೆಯಾಗುತ್ತಿದೆ. ಹಿಂದೆಯೇ ಭಾರತದ ಭೌತವಿಜ್ಞಾನಿ ಪ್ರೊ.ಚಂದ್ರಶೇಖರ್ ಈ ಕುರಿತ ವಿಚಾರಗಳನ್ನು ಮಂಡಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಭಾರತ ವಿಶ್ವಮಟ್ಟದಲ್ಲಿ ಜನಪ್ರಿಯಗೊಂಡಿದೆ. ಇಸ್ರೋ ಮಂಗಳಯಾನ, ಚಂದ್ರಯಾನ ಅಷ್ಟೇ ಅಲ್ಲದೆ, 104 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾಯಿಸಿ ದಾಖಲೆ ಬರೆದಿದೆ ಎಂದರು.

ಜೀವವಿಜ್ಞಾನ ಕ್ಷೇತ್ರದಲ್ಲಿ ಡಿಎನ್‌ಎ- ರೈಬೊಸೋಮ್ ರಚನೆ ಕುರಿತು ಥಾಮಸ್ ಎ.ಸ್ಟಿಟ್ಜ್, ಅಡ ಎ.ಯೋನತ್ ಅವರೊಂದಿಗೆ ಭಾರತದ ವಿಜ್ಞಾನಿ ಪ್ರೊ.ವೆಂಕಟರಾಮನ್ ರಾಮಕೃಷ್ಣನ್ ಸಂಶೋಧನೆ ನಡೆಸಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಇದೂ ಒಂದು ಮಹತ್ವದ ಕೊಡುಗೆಯಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ, ಭವಿಷ್ಯದಲ್ಲಿ ವಿಶ್ವ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲಿದೆ. ಈಗಾಗಲೇ ಜಾಗತಿಕ ತಾಪಮಾನ ಸಮಸ್ಯೆ ದೊಡ್ಡ ಸವಾಲಾಗಿದೆ. ಹಿಮಾಲಯ ಪರ್ವತಗಳು ಕರಗುತ್ತಿವೆ. ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಅರಣ್ಯಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಸಮಸ್ಯೆ ನಿರ್ವಹಣೆಗೆ ವಿಜ್ಞಾನಿಗಳು ಮತ್ತು ತಂತ್ರಜ್ಞರು ಹೆಚ್ಚು ಕಾರ್ಯೋನ್ಮುಖರಾಗಬೇಕು ಎಂದು ಎಚ್ಚರಿಸಿದರು.

ಚಂದ್ರ, ಶುಕ್ರ ಗ್ರಹಗಳೆಡೆಗೆ ಸ್ಥಳಾಂತರವಾಗುತ್ತಿದೆ ಎಂದು ಚಿಂತಿಸುವ ಬದಲು ಜಾಣ್ಮೆಯಿಂದ ಭೂಸಂಪನ್ಮೂಲವನ್ನು ಬಳಸುವುದರ ಜತೆಗೆ ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವ ಕೆಲಸ ಆಗಬೇಕು ಎಂದು ತಿಳಿಸಿದರು.

ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಬಿ.ಮಹೇಶ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಎಂ.ರುದ್ರಯ್ಯ ಇದ್ದರು.

ಸಮರ್ಪಣಾ ಮನೋಭಾವ ಇರಲಿ: ಪದವಿ ಪಡೆದು ಮತ್ತೆ ಶಿಕ್ಷಣ ಮುಂದುವರಿಸುವುದರ ಜತೆಗೆ ಸಂಶೋಧಕರು, ಉದ್ಯಮಿ ಹಾಗೂ ವಿಜ್ಞಾನಿಗಳ ಸಲಹೆಗಾರರಾಗಬೇಕೆಂಬ ಆಶಾಭಾವನೆಯಿಂದ ಹೊರಬರುತ್ತೀರಿ. ನೀವು ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಿರಿ. ಆದರೆ, ನೀವು ಆಯ್ದುಕೊಳ್ಳುವ ವೃತ್ತಿಜೀವನದಲ್ಲಿ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಿ. ನಾನು ಏನು ಮಾಡಲು ಹೋಗುತ್ತಿದ್ದೇನೆ ಎಂಬ ಅರಿವು ನಿಮಗಿರಬೇಕು. ನಿಮ್ಮ ಗುರಿ ಯಶಸ್ಸು ಕಾಣಲಿ ಎಂದು ಕೆ.ಜೆ.ರಾವ್ ಹಾರೈಸಿದರು.

706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: 706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 12 ಚಿನ್ನದ ಪದಕ ಹಾಗೂ 50 ದತ್ತಿ ಬಹುಮಾನಗಳೊಂದಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಬಿಎಸ್‌ಸಿ- 415, ಬಿಬಿಎ- 4, ಬಿಸಿಎ- 46, ಎಂಎಸ್‌ಸಿ ಸಸ್ಯಶಾಸ್ತ್ರ-27, ರಸಾಯನಶಾಸ್ತ್ರ- 36, ಎಂಎಸ್‌ಸಿ ಭೌತಶಾಸ್ತ್ರ- 30, ಎಂಎಸ್‌ಸಿ ಗಣಿತಶಾಸ್ತ್ರ- 55, ಎಂಎಸ್‌ಸಿ ಅಣುಜೀವಶಾಸ್ತ್ರ- 17, ಎಂಎಸ್‌ಸಿ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ- 24, ಎಂಬಿಎಂ- 39 ಹಾಗೂ ಎಂಎ ಇಂಗ್ಲಿಷ್‌ನಲ್ಲಿ 13 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಚಿನ್ನದ ಪದಕ ಪಡೆದವರು: ವಿ.ರಮ್ಯಾ- (ಎಂಎಸ್ಸಿ-ಭೌತವಿಜ್ಞಾನ), ಸಯ್ಯದ್ ನೆಮತ್- (ಎಂಎಸ್ಸಿ-ರಸಾಯನವಿಜ್ಞಾನ), ಎಂ.ಪ್ರೇರಣಾ- (ಎಂಎಸ್ಸಿ-ಅಣುಜೀವವಿಜ್ಞಾನ), ಆರ್.ಎಸ್.ಬಬಿತಾ- (ಎಂಎ-ಇಂಗ್ಲಿಷ್), ಬಿ.ಎನ್.ರಶ್ಮಿತಾ- (ಎಂಎಸ್ಸಿ-ಗಣಿತವಿಜ್ಞಾನ), ವಿಜಯಾನಂದ ಎಸ್.ಮೆಣಸಿನಕಾಯಿ- (ಎಂಎಸ್ಸಿ-ಸಸ್ಯವಿಜ್ಞಾನ), ರಕ್ಷಿತಾ- (ಎಂಬಿಎ), ನೂರುಲ್ ಆಯಿನ್ ಹಫ್ಸಾ- (ಎಂಎಸ್ಸಿ-ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ), ಚೈತ್ರಾ ನಾರಾಯಣ್ ಹೆಗ್ಡೆ- (ಬಿಎಸ್ಸಿ-ನೈಸರ್ಗಿಕ ವಿಜ್ಞಾನ), ಎಲ್.ಆರ್.ವಿದ್ಯಾಶ್ರೀ- (ಭೌತ ವಿಜ್ಞಾನ), ಪ್ರವೀಣ್ ಕುಮಾರ್- (ಭೌತ ವಿಜ್ಞಾನ), ಎಚ್.ಎ.ಅಪೂರ್ವ- (ಬಿಸಿಎ), ಎಂ.ಎಸ್.ಸಂಪ್ರಿತಾ ರಾವ್ (ಬಿಬಿಎ).

Stay connected

278,751FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....