ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕರಿಗೆ ವಂಚನೆ: ಫಿಲ್ಮ್ ಚೇಂಬರ್‌ ಕಟಕಟೆಗೆ ಪ್ರಕರಣ

ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ ಸಾಧುಕೋಕಿಲಾರನ್ನು ಕರೆದುಕೊಂಡು ಬರುವುದಾಗಿ ಹೇಳಿ ‘ರಾವಣ’ ಸಿನಿಮಾದ ನಿರ್ಮಾಪಕರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಾಸ್ಯ ನಟ ಸಾಧುಕೋಕಿಲ ಹೆಸರಿನಲ್ಲಿ ರಾವಣ ಸಿನಿಮಾದ ನಿರ್ಮಾಪಕ ಶಿವಶಂಕರ್ ಎಂಬವರಿಗೆ ಹರಿಹರನ್ ಹಾಗೂ ಅವಿ ಎಂಬ ಇಬ್ಬರು ಹಣ ಪಡೆದು ವಂಚಿಸಿದ್ದಾರೆ.

ಸಾಧು ಕೋಕಿಲಾರನ್ನು ಕರೆಸಲು ಒಂದು ದಿನಕ್ಕೆ ಒಂದು ಲಕ್ಷ ಹಣ ನೀಡಬೇಕು ಎಂದು ಹೇಳಿ ಅಡ್ವಾನ್ಸ್ ರೂಪದಲ್ಲಿ ಅವಿ ಎಂಬಾತ ಮೂವತ್ತೈದು ಸಾವಿರ ಪಡೆದುಕೊಂಡಿದ್ದ. ನಂತರ ಇದೇ ತಿಂಗಳ ಹದಿನೆಂಟನೇ ತಾರೀಖಿನಂದು ಹುಬ್ಬಳ್ಳಿಯಲ್ಲಿ ಎರಡು‌ ಲಕ್ಷ ಖರ್ಚು ಮಾಡಿ ಶೂಟಿಂಗ್​ ರೆಡಿ ಮಾಡಿಸಿಕೊಂಡಿದ್ದ ವೇಳೆ ಸಾಧು ಕೋಕಿಲಾ ಅವರು ಅಲ್ಲಿಗೆ ಬಂದಿರಲಿಲ್ಲ.

ಬಳಿಕ ತಾನು ವಂಚನೆಗೊಳಗಾಗಿದ್ದೇನೆ ಎಂದು ತಿಳಿದ ಶಿವಶಂಕರ್‌ ಸಾಧು ಕೋಕಿಲ ಅವರ ಬಳಿ ಮಾತನಾಡಿದ್ದಾರೆ. ಈ ವೇಳೆ ಸಾಧು ಕೋಕಿಲ ಅವರು ವಿದೇಶದಲ್ಲಿದ್ದರು. ತಾನು ಯಾರ ಬಳಿಯೂ ಬರುವುದಾಗಿ ಹೇಳಿಲ್ಲ ಎಂದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಸದ್ಯ ಫಿಲ್ಮ್ ಚೇಂಬರ್‌ಗೆ ಶಿವಶಂಕರ್‌ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *