ಬೆಳಗ್ಗೆ ಡಯಟ್​, ರಾತ್ರಿ ಡ್ರಗ್ಸ್​! ಸ್ಟಾರ್​ ನಟರ ಬಗ್ಗೆ ಕಿಡಿ ಕಾರಿದ ಹಿರಿಯ ಸಿನಿಮಾ ನಿರ್ಮಾಪಕ

blank

ಗೋವಿಂದಾ, ಸೈಫ್​ ಅಲಿ ಖಾನ್​, ಶತ್ರುಘ್ನ ಸಿನ್ಹಾ, ಮಿಥುನ್​ ಚಕ್ರವರ್ತಿ, ಸನ್ನಿ ಡಿಯೋಲ್​, ಅನಿಲ್​ ಕಪೂರ್​, ಅಕ್ಷಯ್​ ಕುಮಾರ್​ ಸೇರಿ ಹಲವು ಸ್ಟಾರ್​ ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಬಾಲಿವುಡ್​ ನಿರ್ಮಾಪಕ ಪಹ್ಲಜ್​ ನಿಹ್ಲಾನಿಗೆ ಸಲ್ಲುತ್ತದೆ. “ಇಲ್ಜಾಮ್​’, “ಆಂಧೀಯಾ’, “ಶೋಲಾ ಔರ್​ ಶಬ್ನಂ’, “ಆಂಖೇ’, “ತಲಾಷ್​’ ಸೇರಿ ಹಲವು ಹಿಟ್​ ಬಾಲಿವುಡ್​ ಚಿತ್ರಗಳನ್ನು ನಿರ್ಮಿಸಿರುವ ಅವರು, ಕೆಲ ಕಾಲ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಬೆಳಗ್ಗೆ ಡಯಟ್​, ರಾತ್ರಿ ಡ್ರಗ್ಸ್​! ಸ್ಟಾರ್​ ನಟರ ಬಗ್ಗೆ ಕಿಡಿ ಕಾರಿದ ಹಿರಿಯ ಸಿನಿಮಾ ನಿರ್ಮಾಪಕ

ಇತ್ತೀಚೆಗಷ್ಟೆ ಚಿತ್ರರಂಗದಲ್ಲಿ ಡ್ರಗ್ಸ್​ ಸೇವನೆ ಬಗ್ಗೆ, “ಮಾದಕ ವ್ಯಸನ ಚಿತ್ರರಂಗದಲ್ಲಿ ಅವತ್ತೂ ಇತ್ತು. ಇಂದಿಗೂ ಇದೆ. ಕೆಲವು ಸ್ಟಾರ್​ಗಳು ಬೆಳಗ್ಗೆ ಡಯಟ್​ ಫುಡ್​ ಬೇಕು ಅಂದರೆ, ರಾತ್ರಿಯಾಗುತ್ತಿದ್ದಂತೆಯೇ ಡ್ರಗ್ಸ್​ ಬೇಕು ಅಂತ ಬೇಡಿಕೆ ಇಡುತ್ತಾರೆ. ಕೆಲ ಸ್ಟಾರ್​ಗಳ ಕಣ್ಣುಗಳನ್ನು ನೋಡಿದರೆ ಸಾಕು ಅವರು ನಶೆಯಲ್ಲಿರುವುದು ಗೊತ್ತಾಗುತ್ತದೆ’ ಎಂದು ಪಹ್ಲಜ್​ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಡಯಟ್​, ರಾತ್ರಿ ಡ್ರಗ್ಸ್​! ಸ್ಟಾರ್​ ನಟರ ಬಗ್ಗೆ ಕಿಡಿ ಕಾರಿದ ಹಿರಿಯ ಸಿನಿಮಾ ನಿರ್ಮಾಪಕ

ಹಾಗೇ ಇವತ್ತು ಸ್ಟಾರ್​ಗಳು ದೊಡ್ಡ ಗ್ಯಾಂಗ್​ ಕಟ್ಟಿಕೊಂಡು ಓಡಾಡುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಅವರು, “ಮೊದಲು ಸ್ಟಾರ್​ಗಳ ಜತೆ ಒಬ್ಬ ಸಹಾಯಕ ಮಾತ್ರ ಇರುತ್ತಿದ್ದ. ಇವತ್ತು 10 ಜನರಿರುತ್ತಾರೆ. ಮೊದಲು ಒಂದು ಕ್ಯಾರಾವಾನ್​ ಬಳಸುತ್ತಿದ್ದರು. ಇವತ್ತು ವಿಶ್ರಾಂತಿ ಪಡೆಯಲು, ಅಡುಗೆಗೆ, ಜಿಮ್​ ಮಾಡಲು, ಸಭೆ ನಡೆಸಲು ಅಂತ ಆರು ಕ್ಯಾರಾವಾನ್​ಗಳನ್ನು ಕೇಳುತ್ತಾರೆ. ಅಂಥವರಿಗೆ ನಾಚಿಕೆಯಾಗಬೇಕು’ ಎಂದು ಹರಿಹಾಯ್ದಿದ್ದಾರೆ. &ಏಜೆನ್ಸೀಸ್​

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…