ಆಲಮಟ್ಟಿ: ಶಾಲಾ ಮೈದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ದೊರೆಯಿತು.
ಯಲಗೂರು ಶಾಲೆಯ ಕ್ರೀಡಾಪಟುಗಳು, ಮೈದಾನದ ಮುಖ್ಯದ್ವಾರದಿಂದ, ಡ್ರಮಸೆಟ್ ವಾದನದೊಂದಿಗೆ ಕ್ರೀಡಾಧ್ವಜದ ಮೆರವಣಿಗೆ ಮಾಡಲಾಯಿತು.
ಧೋತರ, ನೆಹರು ಶರ್ಟ್ ಧರಿಸಿದ್ದ ಬಾಲಕರು ಛತ್ರ ಛಾಮರಗಳನ್ನು ಹಿಡಿದು ಅತಿಥಿಗಳನ್ನು ಕರೆದು ತಂದಾಗ ಲಂಬಾಣಿ ದಿರಿಸು ಹಾಗೂ ಇಳಕಲ್ ಸೀರೆ ತೊಟ್ಟಿದ್ದ ಬಾಲಕಿಯರು ಪುಷ್ಪಾರ್ಚನೆ ಮಾಡಿದರು.
ಎಂಟು ಜನ ಎಂಟು ಬುಲೆಟ್‌ನ ಭದ್ರತೆಯಲ್ಲಿ ರಾಷ್ಟ್ರಮಟ್ಟದ ಖೋಖೋ ಕ್ರೀಡಾಪಟು ಬೇನಾಳದ ಸುಮಂಗಲಾ ಮಂಗಳಗುಡ್ಡ ಕ್ರೀಡಾಜ್ಯೋತಿ ಮೈದಾನಕ್ಕೆ ಕರೆತಂದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಮುಖ್ಯ ಅತಿಥಿ ಸತ್ಯಜೀತಗೌಡ ಪಾಟೀಲ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಕಾರ್ಯಕ್ರಮದ ಸಂಘಟಕ ಚಂದ್ರಶೇಖರ ನುಗ್ಗಲಿ, ಯುವ ಮುಖಂಡ ಸತ್ಯಜೀತಗೌಡ ಪಾಟೀಲ, ಡಿಡಿಪಿಐಗಳಾದ ವಿವೇಕಾನಂದ, ಟಿ.ಎಸ್. ಕೊಲಾರ, ಕೊಕ್ಕೊ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ, ನವದೆಹಲಿಯ ಖೋಖೋ ಫೆಡರೇಷನ್ ಉಪಾಧ್ಯಕ್ಷ ಲೋಕೇಶ್ವರ, ಬಿಇಓ ವಸಂತ ರಾಠೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಎ.ಎಸ್. ಲಾಳಶೇರಿ, ಮಹೇಶ ಪಾಟೀಲ, ಸದಾಶಿವ ದಳವಾಯಿ, ವಿ.ಎಂ ಪಾಟೀಲ, ಸಂಗಮೇಶ ಪೂಜಾರಿ, ಎಂ.ಎಂ. ಮುಲ್ಲಾ, ಶಿವು ಗದಿಗೆಪ್ಪಗೋಳ, ಬಸವರಾಜ ಬಾದರದಿನ್ನಿ, ಮಹಾದೇವ ಹೂಗಾರ, ಎಸ್.ಎಚ್. ಬಿರಾದಾರ, ಯು.ವೈ.ಬಶೆಟ್ಟಿ, ಸುನಿಲ ನಾಯಕ, ಆರ್.ಎ. ನದಾಫ್, ಉಮೇಶ ಕೌಲಗಿ ಮತ್ತಿತರರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.