ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದೇ ಚಹಾವನ್ನು ತಪ್ಪಾದ ಸಮಯದಲ್ಲಿ ಕುಡಿಯುವುದರಿಂದ ಎಲ್ಲಾ ರೀತಿಯ ತೊಂದರೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ದಿನಕ್ಕೆ ಒಂದು ಬಾರಿ ಇಲ್ಲ 2 ಬಾರಿ ಟೀ ಕುಡಿದ್ರೆ ಏನೂ ಆಗಲ್ಲ. ಆದ್ರೆ ಲಿಮಿಟ್ ಮೀರಿದ್ರೆ ಖಂಡಿತ ನಿಮ್ಮ ಹೆಲ್ತ್‌ಗೆ ಕೆಟ್ಟದ್ದು. ಕೆಲವರು ತಿಂಡಿ, ಊಟ, ರಾತ್ರಿ ಊಟದ ನಂತರವೂ ಟೀ ಕುಡಿಯುತ್ತಾರೆ. ಇದು ಕೆಟ್ಟ ಅಭ್ಯಾಸ.
ಸಂಜೆ 7 ಗಂಟೆಯ ನಂತರ ಚಹಾ ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು. ಸಂಜೆ 7 ಗಂಟೆಯ ನಂತರ ಚಹಾ ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು.
ಆದರೆ ಹೃದಯ ಸಮಸ್ಯೆ ಇರುವಂಥಹ ವ್ಯಕ್ತಿಗಳು ಟೀಯನ್ನ ಕುಡಿಯಲೇಬೇಡಿ. ಚಹಾದಲ್ಲಿರುವ ಕೆಫೀನ್ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಚಹಾ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ನರಗಳ ಪ್ರಚೋದನೆಯನ್ನು ಸಹ ಹೆಚ್ಚಿಸುತ್ತದೆ. ಈ ಸ್ಥಿತಿಯು ಹೃದಯ ಸಮಸ್ಯೆಗಳಿರುವ ಜನರಿಗೆ ಅಪಾಯಕಾರಿಯಾಗಿದೆ. ಆದಾಗ್ಯೂ, ಹೃದಯದ ತೊಂದರೆ ಇರುವವರು ಯಾವಾಗ ಮತ್ತು ಎಷ್ಟು ಚಹಾವನ್ನು ಕುಡಿಯಬೇಕು ಎಂದು ತಿಳಿಯಲು ವೈದ್ಯರನ್ನು ಸರಿಯಾಗಿ ಸಂಪರ್ಕಿಸಬೇಕು.
ಹೃದಯ ಸಮಸ್ಯೆ ಇರುವವರು ರಾತ್ರಿ ವೇಳೆ ಟೀ ಕುಡಿಯಬಾರದು. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತೆ. ಗ್ಯಾಸ್ ಜೊತೆಗೆ ಹೃದಯದ ಮೇಲೆ ಹೆಚ್ಚಿನ ಪ್ರೆಶ್ಶರ್ ಬೀಳುತ್ತೆ. ಈ ತಪ್ಪನ್ನು ನೀವು ಮಾಡ್ತಿದ್ರೆ ಈ ಕೂಡಲೇ ನಿಲ್ಲಿಸಿ.