ಇಬ್ಬರು ಸತ್ತರೂ ಸರಿಯಾಗದ ವಿದ್ಯುತ್​ ಪೂರೈಕೆ; ಐಸಿಯುನಲ್ಲಿದ್ದ ರೋಗಿಗಳು ಆಪರೇಷನ್​ ಥಿಯೇಟರ್​​ಗೆ ಸ್ಥಳಾಂತರ!

ಬಳ್ಳಾರಿ: ಇಲ್ಲಿನ ವಿಮ್ಸ್​ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದ ಐಸಿಯುನಲ್ಲಿನ ವೆಂಟಿಲೇಟರ್​ ಸ್ಥಗಿತಗೊಂಡಿದ್ದರಿಂದಲೇ ಇಬ್ಬರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಇನ್ನೂ ವಿದ್ಯುತ್ ಪೂರೈಕೆ ಸರಿಯಾಗದೆ ಐಸಿಯುನಲ್ಲಿನ ರೋಗಿಗಳನ್ನು ಆಪರೇಷನ್​ ಥಿಯೇಟರ್​ಗೆ ಸ್ಥಳಾಂತರಿಸಿರುವ ಬೆಳವಣಿಗೆಯೂ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ವೆಂಟಿಲೇಟರ್ ಕಾರ್ಯನಿರ್ವಹಿಸದ್ದರಿಂದ ಐಸಿಯುನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ಇಬ್ಬರ ಸಾವಿನ ನಂತರ ಎಚ್ಚೆತ್ತುಕೊಂಡ ವಿಮ್ಸ್ ಆಡಳಿತ ಮಂಡಳಿ, ಐಸಿಯುನಲ್ಲಿದ್ದ ಹತ್ತಕ್ಕೂ ಅಧಿಕ ರೋಗಿಗಳನ್ನು ಆಪರೇಷನ್ ಥಿಯೇಟರ್​ಗೆ ಸ್ಥಳಾಂತರಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ನಿರ್ದೇಶಕ ಗಂಗಾಧರಗೌಡ ಸ್ಪಷ್ಟನೆ … Continue reading ಇಬ್ಬರು ಸತ್ತರೂ ಸರಿಯಾಗದ ವಿದ್ಯುತ್​ ಪೂರೈಕೆ; ಐಸಿಯುನಲ್ಲಿದ್ದ ರೋಗಿಗಳು ಆಪರೇಷನ್​ ಥಿಯೇಟರ್​​ಗೆ ಸ್ಥಳಾಂತರ!